ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪೀಕಲಾಟ

Written By:

ಈ ಹಿಂದೆ ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ಮಿಲಿಟರಿ ಮುಖ್ಯಸ್ಥನನ್ನೇ ಗಲ್ಲಿಗೇರಿಸಿ ಭಾರೀ ಸುದ್ಧಿಯಾಗಿದ್ದು ಕಿಮ್‌ ಜಂಗ್‌, ಇದೀಗ ಹೊಸ ಕಾಯ್ದೆ ಜಾರಿ ಮಾಡುವ ಮತ್ತೊಮ್ಮೆ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದಾನೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಸರ್ವಾಧಿಕಾರಿ ಧೋರಣೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಂಗ್ ಮತ್ತೊಂದು ಕಠಿಣ ಕಾಯ್ದೆ ಜಾರಿ ಮಾಡಿದ್ದಾರೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಏನದು ಹೊಸ ಕಾಯ್ದೆ?

ಕಿಮ್ ಜಂಗ್ ಉನ್ ಹೊರಡಿಸಿರುವ ಹೊಸ ಕಾಯ್ದೆ ಪ್ರಕಾರ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗಿರುವ ಕಿಮ್ ಜಂಗ್ ಹಿರಿಯರ ಪ್ರತಿಮೆಗಳ ಬಳಿ ವಾಹನ ಸವಾರರು ನಿಧಾನವಾಗಿ ವಾಹನ ಚಾಲನೆ ಮಾಡಬೇಕಂತೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಹೊಸ ಕಾಯ್ದೆ ಯಾಕೆ?

ಇಷ್ಟು ದಿನಗಳ ಕಾಲ ಕೋರಿಯಾ ನಿರ್ಮಾತೃ ಕಿಮ್ ಸಂಗ್ ಹಾಗೂ ಕಿಮ್ ಜಂಗ್ ಪುತ್ಥಳಿಗಳ ಬಳಿ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದರು. ಇದನ್ನು ತಡೆಯಲು ಹೊಸ ಕಾಯ್ದೆ ಜಾರಿ ಮಾಡಲಾಗಿದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ತಪ್ಪಿದ್ರೆ ಜೈಲು ವಾಸ ಗ್ಯಾರಂಟಿ

ಹೊಸ ಕಾಯ್ದೆ ಜಾರಿ ಮಾಡಿರುವ ಕಿಮ್ ಜಂಗ್, ಪುತ್ಥಳಿಗಳ ಬಳಿ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡದೇ ಇದ್ದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಲಿದ್ದಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಈಗಾಗಲೇ ಕೆಲವು ಕಠಿಣ ಕಾಯ್ದೆಗಳನ್ನು ಜಾರಿಗೆ ತಂದಿರುವ ಕಿಮ್ ಜಂಗ್, ತನ್ನ ಹಿರಿಯರಿಗೆ ದೇಶದ ಪ್ರತಿಯೊಬ್ಬ ಪ್ರಜೆಯು ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾನೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಇನ್ನು ಹೊಸ ಕಾಯ್ದೆ ಪ್ರಕಾರ ವಾಹನ ಸವಾರರು ಕಿಮ್ ಸಂಗ್ ಪುತ್ಥಳಿಗಳ ಬಳಿ ಪ್ರತಿ ಗಂಟೆಗೆ 5 ಕಿಮಿ ವೇಗದಲ್ಲಿ ವಾಹನ ಚಲಾವಣೆ ಮಾಡಬೇಕಿದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಆದ್ರೆ ಕಿಮ್ ಜಂಗ್ ಆದೇಶವನ್ನು ದೇವರ ಕೊಟ್ಟ ವರ ಎಂಬುವಂತೆ ಸ್ವಿಕರಿಸಿರುವ ಅಲ್ಲಿನ ಜನ, ಕಿಮ್ ಜಂಗ್ ಸರ್ವಾಧಿಕಾರಕ್ಕೆ ತಲೆಭಾಗಿದ್ದಾರೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಹೊಸ ಕಾಯ್ದೆ ಜಾರಿಯಾದ ಬೆನ್ನಲ್ಲೆ ಇದಕ್ಕಾಗಿಯೇ ಪ್ರತ್ಯೇಕವಾಗಿ ಪೊಲೀಸ್ ವಿಂಗ್ ರಚನೆ ಮಾಡಲಾಗಿದ್ದು, ವಾಹನ ಸವಾರರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಕೇವಲ ಸ್ಥಳೀಯರು ಅಷ್ಟೇ ಅಲ್ಲದೇ ಪ್ರವಾಸಿಗರಿಗೂ ಈ ಹೊಸ ರೂಲ್ಸ್ ಅನ್ವಯವಾಗುತ್ತೆ. ಒಂದು ತಪ್ಪಿದ್ರೆ ಪ್ರವಾಸಿಗರಿಗೂ ಭಾರೀ ಪ್ರಮಾಣದ ದಂಡ ತಪ್ಪಿದ್ದಲ್ಲ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಹೀಗೆ ವಿಚಿತ್ರ ಆಜ್ಞೆಗಳನ್ನು ಹೊರಡಿಸುವ ಈ ಮೂಲಕ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಕಿಮ್ ಜಂಗ್, ದೇಶದಲ್ಲಿ ಬಡತನವಿದ್ದರು ಇಂತಹ ಕಾಯ್ದೆಗಳಿಗೆ ಯಾವುದೇ ಬರವಿಲ್ಲ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ್ದ ಕಿಮ್ ಜಂಗ್, ಇಡೀ ವಿಶ್ವವೇ ತನ್ನತ್ತ ಆತಂಕದಿಂದ ನೋಡುವಂತೆ ಮಾಡಿದ್ದ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಗುಪ್ತವಾಗಿ ಭೂಗರ್ಭದಲ್ಲಿ ಜಲಜನಕ ಬಾಂಬ್​ ಪರೀಕ್ಷೆ ನಡೆಸಿದ್ದ ಉತ್ತರ ಕೋರಿಯಾ,ಪರಮಾಣು ರಾಷ್ಟ್ರಗಳ ಸಾಲಿನಲ್ಲಿ ನಾವು ಕೂಡಾ ಮುಂಚೂಣಿಯಲ್ಲಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತ್ತು.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಪರಮಾಣು ಬಾಂಬ್​​ ಗಿಂತಲೂ ಹೈಡ್ರೋಜನ್ ಬಾಂಬ್ ಸಿಕ್ಕಾಪಟ್ಟೆ ಡೇಂಜರ್​. ಹೀಗಾಗಿ ಒಂದಿಡೀ ನಗರವನ್ನೇ ಕ್ಷಣಾರ್ಧದಲ್ಲಿ ಆಪೋಶನ ಪಡೆಯುವ ಸಾಮರ್ಥ್ಯ ಜಲಜನಕ ಬಾಂಬ್​'ಗೆ ಇದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಹಾಗ್ರೆ ನೋಡಿದರೆ ಪರಮಾಣು ಬಾಂಬ್​​'ಗೆ ಹೋಲಿಸಿದರೆ ಹೈಡ್ರೋ ಬಾಂಬ್ ತುಂಬಾ ಅತ್ಯಾಧುನಿಕ ಹಾಗೂ ತಯಾರಿಕೆಯೂ ಬಲು ಕಷ್ಟ. ಆದ್ರೆ ಉತ್ತರ ಕೋರಿಯಾದಲ್ಲಿ ಕಿಮ್ ಜಂಗ್ ಮಾಡಿದ್ದೆ ಆಟ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಉತ್ತರ ಕೊರಿಯಾದ ಈ ನಡೆಯನ್ನು ನೆರೆಯ ವೈರಿ ರಾಷ್ಟ್ರ ದಕ್ಷಿಣ ಕೊರಿಯಾ ಕೂಡಾ ಖಂಡಿಸಿದ್ದು, ಜಲಜನಕ ಬಾಂಬ್​ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದಿದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಇನ್ನು, ಅಮೆರಿಕಾ ಕಿಮ್​ ಜಂಗ್​ ವಿರುದ್ಧ ಗುಡುಗಿದ್ದು, ಉತ್ತರ ಕೊರಿಯಾವನ್ನು ಪರಮಾಣು ರಾಷ್ಟ್ರ ಎನ್ನುವುದನ್ನು ಅಮೆರಿಕಾ ಎಂದಿಗೂ ಒಪ್ಪುವುದಿಲ್ಲ ಎಂದು ಖಡಕ್ ವಾರ್ನ್ ಮಾಡಿತ್ತು.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

2006 ರಿಂದನಾಲ್ಕನೆ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ, ವಿಶ್ವಶಾಂತಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.

ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪಿಕಲಾಟ

ಹೀಗೇ ಒಂದಲ್ಲಾ ಒಂದು ದುಸಾಹಸಕ್ಕೆ ಕೈ ಹಾಕುವ ಕಿಮ್ ಜಂಗ್, ಇದೀಗ ವಾಹನ ಸವಾರರಿಗೆ ಬ್ರೇಕ್ ಹಾಕಿದ್ದಾನೆ. ಈ ಮೂಲಕ ದೇಶದ ಜನತೆಯ ಮೇಲೆ ತನ್ನ ದರ್ಪ ಪ್ರದರ್ಶನ ಮಾಡುತ್ತಲೇ ಇರುತ್ತಾನೆ.

English summary
Leader of North Korea, Kim Jong-un has ordered drivers to slow down their vehicles while passing through statues of his dad and granddad.
Please Wait while comments are loading...

Latest Photos