ಬಸ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನೇ ಕದ್ದ ಖತರ್ನಾಕ್ ಕಳ್ಳರು
ನಿಲ್ಲಿಸಿದ್ದ ವಾಹನಗಳ ಬಿಡಿ ಭಾಗಗಳು ಮತ್ತು ಇಂಧನವನ್ನು ಕಳ್ಳತನವ ವಾಗುತ್ತದೆ. ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಿದ್ದ ವಾಹನಗಳ ಇಂಧನ ಕಳ್ಳತನ ನಡೆಯುತ್ತಿರುತ್ತವೆ. ಅಲ್ಲದೇ ಕಾರು ಮತ್ತು ಬೈಕ್ ಕಳ್ಳತನವಾಗುವ ಸುದ್ದಿಗಳನ್ನು ನಾವು ಅಗಾಗ ಕೇಳಿಸಿಕೊಳ್ಳುತ್ತೇವೆ. ಆದರೆ ಬಸ್ ಕಳ್ಳತನ ಆಗುವುದು ಕೇಳಿದ್ದೀರಾ? ಇಲ್ಲಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನೇ ಕದ್ದೊಯ್ದಿದ್ದಾರೆ.
ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್ಟಿಸಿಗೆ (Kalyana Karnataka Road Transport Corporation) ಸೇರಿದ್ದ ಬಸನ್ನು ಬಸ್ ಅನ್ನೇ ಕಳ್ಳತನ ಮಾಡಿದ್ದಾರೆ. ಈ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಳ್ಳತನವಾಗಿರುವುದು ಬೀದರ್‌ನ ಬಸ್ ಡಿಪೋ 2ಕ್ಕೆ ಸೇರಿದ ಬಸ್ ಆಗಿದೆ. ಈ ಕೆಕೆಆರ್ಟಿಸಿ ಬಸ್ ನಂಬರ್ KA 38 F 971 ಆಗಿದೆ.

ಸೋಮವಾರ ರಾತ್ರಿ ಲಾಸ್ಟ್ ಟ್ರಿಪ್ ಮುಗಿಸಿ ಬಸ್ ಅನ್ನು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ತಿನಿತ್ಯ ಚೋಳಿಯಿಂದ ಮನ್ನಳ್ಳಿ ಮಾರ್ಗವಾಗಿ ಬೀದರ್'ಗೆ ಸಂಚರಿಸುತ್ತಿತ್ತು. ಈ ಬಸ್ ತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಲಾಗುತ್ತಿತ್ತು. ನಂತರ ಮುಂಜಾನೆ ಬಂದು ಬಸನ್ನು ಡ್ರೈವರ್ ಮತ್ತು ಕಂಡಕ್ಟರ್ ತೆಗೆದುಕೊಂಡು ಹೋಗುತ್ತಾರೆ. ನಿನ್ನೆ ರಾತ್ರಿ ಬೀದರ್ ನಿಂದ ಕೊನೆಯ ಟ್ರಿಪ್ ಮುಗಿಸಿ ಚಿಂಚೋಳಿ ಬಸ್ ನಿಲ್ಧಾಣದಲ್ಲಿ ನಿಲ್ಲಿಸಿದ್ದರು. ಡ್ವೈವರ್ ಅಯ್ಯುಬ್ ಖಾನ್ ಮತ್ತು ಕಂಡೆಕ್ಟರ್ ಈರಪ್ಪ ಡಿಪೋದಲ್ಲಿ ಮಲಗಿದ್ದರು.
ಮುಂಜಾನೆ ಎಂದಿನಂತೆ, ಬಸ್ ತೆಗೆಯಲ್ಲಿ ಬಂದಾಗ ಬಸ್ ನಿಲ್ದಾಣಕ್ಕೆ ಬಂದು ನೋಡಿದರೆ ಬಸ್ ಕಾಣಿಸುತ್ತಿರಲಿಲ್ಲ.ಇದರಿಂದ ಗಾಬರಿಯಾದ ಡ್ರೈವರ್ ಮತ್ತು ಕಂಡೆಕ್ಟರ್ ಬಸ್ ನಿಲ್ಲಿಸಿದ್ದ ಜಾಗವನ್ನು ಬಿಟ್ಟು ನಿಲ್ದಾಣದ ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಡಿದ್ದರು. ಆದರೆ ಬಸ್ ಮಾತ್ರ ಕಂಡಿಲ್ಲ. ನಂತರ ಬಸ್ ಕಾಣೆಯಾಗಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಸ್ ಕಳ್ಳತನವಾದ ಬಸ್ ನಿಲ್ದಾಣಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸಿಸಿ ಟಿವಿ ಪರಿಶೀಲಿಸಿದಾಗ ಮಂಗಳವಾರ ಬೆಳಗಿನ ಜಾವ 3.30 ರ ಸುಮಾರಿಗೆ ಬಸ್ ಕಳ್ಳತನವಾಗಿರುವುದರ ಬಗ್ಗೆ ತಿಳಿದುಬರುತ್ತದೆ. ಸರ್ಕಾರಿ ಬಸ್ ಕದ್ದ ಕಳ್ಳರು ಆ ಬಸ್ ಪೊಲೀಸರಿಗೆ ಕಾಣದಂತೆ ಮುಚ್ಚಿಡಲು ಪಕ್ಕದ ರಾಜ್ಯವಾದ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ಬಸ್ ಸಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ, ವರದಿಗಳ ಪ್ರಕಾರ, ಕಳ್ಳತನವಾಗಿರುವ ಕೆಎಸ್‌ಆರ್‌ಟಿಸಿ ಬಸ್ ಹುಡುಕಾಟದ ಸಲುವಾಗಿ ತೆಲಂಗಾಣಕ್ಕೆ ಎರಡು ಪೊಲೀಸ್ ತಂಡಗಳು ತೆರಳಿವೆ.
ಕಲರ್ಬುಗಿ ಸುತ್ತಮುತ್ತಲ ತೆಲಂಗಾಣಕ್ಕೆ ಸೇರಿದ ಜಿಲ್ಲೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬರ್ತಾರೆ. ಅಲ್ಲಿ ಯಾರು ಬರ್ತಾರೆ, ಹೋಗ್ತಾರೆ ಅನ್ನೋದನ್ನು ಗಮನಿಸೋದಿಲ್ಲಾ. ಇದನ್ನೇ ದುರುಪಯೋಗ ಮಾಡಿಕೊಂಡ ಖತರ್ನಾಕ್ ಕಳ್ಳರು ನಕಲಿ ಕೀ ಬಳಸಿ ಬಸ್ ಅನ್ನು ಕದ್ದೋಯ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಕಳ್ಳತನವಾಗುವ ಮಟ್ಟಕ್ಕೆ ಅಧಿಕಾರಿಗಳು, ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ
ಇನ್ನು ಕರ್ನಾಟಕ ರಸ್ತೆ ಸಾರಿಗೆ ನಿಗಮವು 50 ಹೊಸ ವೋಲ್ವೋ ಸ್ಲೀಪರ್ ಬಸ್‌ಗಳ ಪೈಕಿ ಮೊದಲ ಹಂತವಾಗಿ ಇಂದು 15 "ಅಂಬಾರಿ ಉತ್ಸವ" ಸ್ಲೀಪರ್ ಬಸ್ ಗಳ ಲೋಕಾರ್ಪಣೆ ಮಾಡಿದೆ. ಈ ಬಸ್‌ಗಳು ಹೈಟೆಕ್ ತಂತ್ರಜ್ಞಾನ, ಉತ್ತಮ ವಿನ್ಯಾಸ, ಐಷಾರಾಮಿ ಒಳಾಂಗಣ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೋಲ್ವೋ ಬಿಎಸ್- VI 9600s ಮಾದರಿಯ ಮಲ್ಟಿ ಆಕ್ಸಲ್ "ಅಂಬಾರಿ ಉತ್ಸವ" ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿದರು.
ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ - ಹಂತವಾಗಿ 350 ಎಲೆಕ್ಟ್ರಿಕ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ ಎಂದು ಇಲಾಖೆ ತಿಳಿಸಿದೆ. ಈ ಬಸ್‌ನಲ್ಲಿ 40 ಆಸನಗಳ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ. KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.


Click it and Unblock the Notifications