ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಕೇರಳದ ಯುವಕನೊಬ್ಬ ತಾನು ಖರೀದಿಸಿದ್ದ ರೂ.1.5 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಕಾರಿಗೆ ರೂ.9 ಲಕ್ಷ ನೀಡಿ ವಿಶೇಷವಾದ ನಂಬರ್ ವೊಂದನ್ನು ಖರೀದಿಸಿದ್ದಾನೆ. ಈ ಬಗ್ಗೆ ಮಲಪ್ಪುರಂ ಲೈಫ್‌ಸ್ಟೈಲ್ ಮಾಹಿತಿ ಪ್ರಕಟಿಸಿದೆ.

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಬಹುತೇಕ ಕೋಟ್ಯಾಧಿಪತಿಗಳು ಕಾರನ್ನು ಮಾತ್ರವಲ್ಲದೆ ತಮ್ಮ ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಸಹ ವಿಶೇಷವಾಗಿರಿಸಲು ಬಯಸುತ್ತಾರೆ. ಇದಕ್ಕಾಗಿ ಅವರು ಕಾರಿಗೆ ಸಮನಾದ ಮೊತ್ತವನ್ನು ಖರ್ಚು ಮಾಡುತ್ತಾರೆ. ಕೆಲವೊಮ್ಮೆ ಈ ಮೊತ್ತವು ಕಾರಿನ ಬೆಲೆಗಿಂತ ದುಬಾರಿಯಾಗಿರುತ್ತದೆ. ಇತ್ತೀಚೆಗೆ ಮಲಪ್ಪುರಂನಲ್ಲಿ ಕೊಂಡೊಟ್ಟಿ ಎಂಬ ಹೊಸ ಆರ್‌ಟಿಒ ಕಚೇರಿಯನ್ನು ತೆರೆಯಲಾಗಿದೆ.

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಈ ಆರ್‌ಟಿಒದ ಅಧಿಕಾರಿಗಳು ತಮ್ಮ ಕಚೇರಿಯ ಮೊದಲ ನೋಂದಣಿ ಸಂಖ್ಯೆಯಾದ ಕೆಎಲ್ 840001 ನಂಬರ್ ಅನ್ನು ಹರಾಜು ಹಾಕಲು ಬಯಸಿದ್ದರು. ಈ ಹರಾಜಿನಲ್ಲಿ ಭಾಗವಹಿಸಿದ್ದ ಮೊಹಮ್ಮದ್ ರಫೀಕ್ ಎಂಬ ಯುವಕ ಈ ನಂಬರ್ ಅನ್ನು ಖರೀದಿಸಿದ್ದಾನೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಮಹಮ್ಮದ್ ರಫೀಕ್ ರೂ.9,01,000 ನೀಡಿ ತನ್ನ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಇ 53 ಕೂಪೆ ಕಾರಿಗಾಗಿ ಈ ನಂಬರ್ ಖರೀದಿಸಿದ್ದಾನೆ. ಕೆಎಲ್ 840001 ಫ್ಯಾನ್ಸಿ ನಂಬರ್ ಗಾಗಿ ನಡೆದ ಹರಾಜಿನಲ್ಲಿ ಇಬ್ಬರು ಮಾತ್ರ ಭಾಗವಹಿಸಿದ್ದರು.

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ರಫೀಕ್ ತನ್ನ ಕಾರಿಗೆ ರಸ್ತೆ ತೆರಿಗೆಯಾಗಿ ರೂ.25 ಲಕ್ಷಗಳನ್ನು ಪಾವತಿಸಿದ್ದಾನೆ ಎಂದು ಹೇಳಲಾಗಿದೆ. ಮಲಪ್ಪುರಂ ಲೈಫ್ ಸ್ಟೈಲ್ ಪ್ರಕಟಿಸಿದ ಮಾಹಿತಿಯಲ್ಲಿ ಈ ಎಲ್ಲಾ ಅಂಶಗಳು ಬಹಿರಂಗವಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಎಎಂಜಿ ಜಿಎಲ್ಇ 53 ಕೂಪೆ ಕಾರನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.20 ಕೋಟಿಗಳಾಗಿದೆ.

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಹೊಸ ಎಎಂಜಿ ಜಿಎಲ್‌ಇ 53 ಕೂಪೆ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಹಗುರವಾದ ಹೈಬ್ರಿಡ್ ಸಿಸ್ಟಂ ಅನ್ನು ನೀಡಿದೆ. ಈ ಸಿಸ್ಟಂ ಎಂಜಿನ್‌ನ ದಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಈ ಕಾರಿನಲ್ಲಿ 3.0-ಲೀಟರಿನ ಟ್ವಿನ್-ಟರ್ಬೊ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಹೈಬ್ರಿಡ್ ಎಂಜಿನ್ 435 ಬಿಹೆಚ್‌ಪಿ ಪವರ್ ಹಾಗೂ 530 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9-ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯೂನಿಟ್ ಜೋಡಿಸಲಾಗಿದೆ.

ಮೊದಲ ಫ್ಯಾನ್ಸಿ ನಂಬರ್ ಹರಾಜಿನಲ್ಲಿಯೇ ಬಂಪರ್ ಹೊಡೆದ ಆರ್‌ಟಿಒ ಕಚೇರಿ

ಹೊಸ ಎಎಂಜಿ ಜಿಎಲ್‌ಇ 53 ಕೂಪೆ ಕಾರು ಗಂಟೆಗೆ 250 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಕಾರು 0 - 100 ಕಿ.ಮೀ ವೇಗವನ್ನು 5.3 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ.

Most Read Articles

Kannada
English summary
Kondotty RTO office gets huge amount in first registration number auction. Read in Kannada.
Story first published: Wednesday, November 4, 2020, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X