KSRTC: ಕೆಎಸ್‌ಆರ್‌ಟಿಸಿಗೆ ಬರಲಿವೆ 300 ಹೊಸ ಎಲೆಕ್ಟ್ರಿಕ್ ಬಸ್‌ಗಳು.. ನಿಮ್ಮೂರಿಗೆ ಬೇಗ ಹೋಗಬಹುದು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ - KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲಿದೆ. 225 ನಾನ್-ಎಸಿ ಹಾಗೂ 75 ಎಸಿ ಒಳಗೊಂಡಂತೆ ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳು ಗುತ್ತಿಗೆ ಮಾದರಿಯಲ್ಲಿ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಲಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು, 'ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಒಪ್ಪಂದದ ಮೇರೆಗೆ (Gross Cost Contract Model) ಪಡೆಯಲು ನಿರ್ಧರಿಸಲಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ' ಎಂದು ಹೇಳಿದ್ದಾರೆ.

ನೂತನ 300 ಎಲೆಕ್ಟ್ರಿಕ್ ಬಸ್‌ಗಳಲ್ಲಿ ನಾನ್-ಎಸಿ (ಹವಾನಿಯಂತ್ರಿತ ರಹಿತ) ಹಾಗೂ ಎಸಿ ಡಿಲಕ್ಸ್ (ಹವಾನಿಯಂತ್ರಿತ) ಬಸ್‌ಗಳು ಸೇರಿರಲಿವೆ. 12-ಮೀಟರ್‌ನ 205 ನಾನ್-ಎಸಿ ಇಂಟರ್‌ಸಿಟಿ ಬಸ್‌ಗಳು (2x3 ಆಸನ ವ್ಯವಸ್ಥೆ), 12-ಮೀಟರ್‌ನ 75 ಎಸಿ ಡಿಲಕ್ಸ್ ಇಂಟರ್‌ಸಿಟಿ ಬಸ್‌ಗಳು (2x2 ಆಸನ ವ್ಯವಸ್ಥೆ) ಮತ್ತು 12-ಮೀಟರ್‌ನ 20 ನಾನ್-ಎಸಿ ಸಿಟಿ ಬಸ್‌ಗಳು ( 2x2 ಆಸನ ವ್ಯವಸ್ಥೆ) ಇರಲಿವೆ.

Ksrtc Add 300 Electric Buses Soon Details

ಬೆಂಗಳೂರು - ತುಮಕೂರು, ಬೆಂಗಳೂರು - ಕೋಲಾರ ಹಾಗೂ ಬೆಂಗಳೂರು - ಚಿಕ್ಕಬಳ್ಳಾಪುರದಂತಹ ಮಾರ್ಗಗಳಲ್ಲಿ ಈ ಬಸ್‌ಗಳು ಸಂಚಾರ ನಡೆಸಲಿವೆ. ತುಮಕೂರು ವಿಭಾಗಕ್ಕೆ 50, ಕೋಲಾರ 45, ಮಂಗಳೂರು 45, ಚಿಕ್ಕಬಳ್ಳಾಪುರ 40, ಪುತ್ತೂರು 40, ಮೈಸೂರು ಗ್ರಾಮಾಂತರ 30, ಮೈಸೂರು ನಗರ 20 ಮತ್ತು ರಾಮನಗರ ವಿಭಾಗಕ್ಕೆ 20 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿಯು ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ನಿರ್ವಾಹಕರನ್ನು ಮಾತ್ರ ನಿಯೋಜಿಸಲಿದ್ದು, ಗುತ್ತಿಗೆ ಪಡೆದ ಕಂಪನಿಯು ಚಾಲಕರ ನೇಮಕ, ಬಸ್ ನಿರ್ವಹಣೆಯನ್ನು ಮಾಡಬೇಕು. ಸಾರಿಗೆ ಸಂಸ್ಥೆಯು ಪ್ರತಿ ಕಿ.ಮೀ. ಆಧಾರದ ಮೇಲೆ ಹಣವನ್ನು ಪಾವತಿಸಲಿದೆ. ಆ ಖಾಸಗಿ ಸಂಸ್ಥೆಯು ನೂತನ ಎಲೆಕ್ಟ್ರಿಕ್ ಬಸ್‌ಗಳನ್ನು ದಿನವೊಂದಕ್ಕೆ 250 ಕಿ.ಮೀ. ಓಡಿಸಬೇಕು. ಸುರಕ್ಷತೆಗಾಗಿ ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ಗಳು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸರಬೇಕು.

2023ರ ಜನವರಿಯಲ್ಲಿ ಕೆಎಸ್‌ಆರ್‌ಟಿಸಿ 'ಇವಿ ಪವರ್ ಪ್ಲಸ್' ಹೆಸರಿನಲ್ಲಿ ಇಂಟರ್‌ಸಿಟಿ ಎಸಿ ಎಲೆಕ್ಟ್ರಿಕ್ ಬಸ್‌ ಸೇವೆಯನ್ನು ಆರಂಭಿಸಿತ್ತು. ಕೇಂದ್ರ ಸರ್ಕಾರದ ಫೇಮ್-2 (FAME-II) ಸಬ್ಸಿಡಿ ಯೋಜನೆಯಡಿ ಸೇರ್ಪಡೆಗೊಂಡ ಒಟ್ಟು 50 ಎಲೆಕ್ಟ್ರಿಕ್ ಬಸ್‌ಗಳು, ರಾಜಧಾನಿ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುತ್ತವೆ.

ಈಚೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 30 ಸೀಟರ್-ಕಮ್-ಸ್ಲೀಪರ್ ಮತ್ತು 70 ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. ನೂತನ ಸೀಟರ್-ಕಮ್-ಸ್ಲೀಪರ್ ಬಸ್‌ಗಳ ಪ್ರಾಯೋಗಿಕ ಸಂಚಾರ ಶುರುವಾದ ನಂತರ, ಸಾರಿಗೆ ಸಂಸ್ಥೆಯ ತಾಂತ್ರಿಕ ಪರಿಣಿತರ ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ನೀಡಲಿದೆ. ಫಲಿತಾಂಶಗಳು ತೃಪ್ತಿಕರವಾಗಿದ್ದರೆ, ಸಾರಿಗೆ ಸಂಸ್ಥೆಯು ಮತ್ತಷ್ಟು ಬಸ್‌ಗಳನ್ನು ಖರೀದಿ ಮಾಡಲಿದೆ ಎಂದು ವರದಿಯಾಗಿತ್ತು.

ಕೆಎಸ್‌ಆರ್‌ಟಿಸಿಯು 1,000 ಪ್ರೀಮಿಯಂ ಸೇರಿದಂತೆ ಒಟ್ಟು 8,234 ಬಸ್‌ಗಳನ್ನು ಓಡಿಸುತ್ತಿದೆ. ದಿನನಿತ್ಯ 7,000 ಕಿಲೋಮೀಟರ್ ಕಾರ್ಯಾಚರಣೆ ನಡೆಸುವ ಸಾರಿಗೆ ಸಂಸ್ಥೆ ಬಸ್‌ಗಳು, 23 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಸುಮಾರು 34,904 ಸಿಬ್ಬಂದಿಗಳು ಹಗಲು - ರಾತ್ರಿ ಕೆಲಸ ಮಾಡುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 5, 2024, 10:34 [IST]
English summary
Ksrtc add 300 electric buses soon details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+