KSRTC: ಶೀಘ್ರ 100 ಪಲ್ಲಕ್ಕಿ ನಾನ್ - ಎಸಿ ಸ್ಲೀಪರ್ ಬಸ್‌​ ಸೇರ್ಪಡೆ, ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ - KSRTC), ಮತ್ತೆ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ, ಶೀಘ್ರದಲ್ಲೇ 100 ಪಲ್ಲಕ್ಕಿ (Pallakki) ನಾನ್ - ಎಸಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಸದ್ಯ, ರಾಜ್ಯಾದ್ಯಂತ 40 ಪಲ್ಲಕ್ಕಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಂತೋಷವು ಪ್ರಯಾಣಿಸುತ್ತಿದೆ (Happiness is travelling) ಎಂಬ ಅಡಿಬರಹ (Tagline)ವನ್ನು ಹೊಂದಿವೆ. ಈ ನಾನ್ - ಎಸಿ ಬಸ್‌ಗಳು ಲೋಕಾರ್ಪಣೆಗೊಂಡು ಮೂರು ತಿಂಗಳಾಗಿದೆ. ಅಂದಿನಿಂದಲೂ ಸಂಪೂರ್ಣ ಸಾಮರ್ಥ್ಯದೊಂದಿಗೆ ಓಡಾಟವನ್ನು ನಡೆಸುತ್ತಿದ್ದು, ಪಲ್ಲಕ್ಕಿ ಬಸ್‌ಗಳು ಬಜೆಟ್ ಸ್ನೇಹಿಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

KSRTC: ಶೀಘ್ರ 100 ಪಲ್ಲಕ್ಕಿ ನಾನ್ - ಎಸಿ ಸ್ಲೀಪರ್ ಬಸ್‌​ ಸೇರ್ಪಡೆ, ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು!

ಈ ಪಲ್ಲಕ್ಕಿ ಬಸ್‌ಗಳು 30 ಸ್ಲೀಪರ್ ಬರ್ತ್‌ಗಳನ್ನು ಹೊಂದಿದ್ದು, ಪ್ರೀಮಿಯಂ ಅಂಬಾರಿ ಉತ್ಸವ (Ambari Utsav) ಬಸ್‌ಗಳಂತೆಯೇ ಸೌಕರ್ಯವನ್ನು ಒಳಗೊಂಡಿವೆ. ಈ ಬಸ್‌ಗಳು ಸ್ಪೆಷಲ್ ಫೈರ್ ಡಿಟೆಕ್ಷನ್, ಸಪ್ಪೆರೇಶನ್ ಸಿಸ್ಟಮ್ ಅನ್ನು ಪಡೆದಿವೆ. ಇದು ಬಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಪ್ರಯಾಣಿಕರನ್ನು ಎಚ್ಚರಿಸಲು ಸಹಾಯಕವಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬು ಕುಮಾರ್ (Anbu Kumar) ಅವರು, 'ನಾವು ಅಕ್ಟೋಬರ್‌ನಲ್ಲಿ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿದ್ದೆವು. ಅಂದಿನಿಂದ ಈ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2024 ರಲ್ಲಿ ಇನ್ನೂ 100 ಪಲ್ಲಕ್ಕಿ ಬಸ್‌ಗಳನ್ನು ಬಿಡುತ್ತೇವೆ' ಎಂದು ಹೇಳಿದ್ದಾರೆ.

KSRTC: ಶೀಘ್ರ 100 ಪಲ್ಲಕ್ಕಿ ನಾನ್ - ಎಸಿ ಸ್ಲೀಪರ್ ಬಸ್‌​ ಸೇರ್ಪಡೆ, ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು!

ಕಳೆದ ವರ್ಷದ ಆ.28 ರಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆ​ಆರ್​ಟಿಸಿ), 'ಕಲ್ಯಾಣ ರಥ' ಹೆಸರಿನಲ್ಲಿ ನೂತನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್​ನ್ನು ಲೋಕಾರ್ಪಣೆಗೊಳಿಸಿತ್ತು. ಈ ಬಸ್ ಹವಾನಿಯಂತ್ರಿತ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿತ್ತು. ಅದೇ ರೀತಿಯಲ್ಲಿ 2023ರ ಫೆಬ್ರವರಿಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಪ್ರೀಮಿಯಂ 'ಅಂಬಾರಿ ಉತ್ಸವ' ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್​ಗಳನ್ನು ರಸ್ತೆಗಿಳಿಸಿತ್ತು.

ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳ ಪ್ರಯಾಣಕ್ಕಾಗಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಯೋಜಿಸುತ್ತಿದೆ. ಇದರಿಂದ ತುಮಕೂರು, ಮಂಡ್ಯ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ. ಮುಂಬರಲಿರುವ ಈ ನಾನ್ - ಎಸಿ ಎಲೆಕ್ಟ್ರಿಕ್ ಬಸ್‌ಗಳು, ಸಂಪೂರ್ಣ ಚಾರ್ಜ್ ನಲ್ಲಿ 180 ಕಿಲೋಮೀಟರ್ ವರೆಗೆ ಕ್ರಮಿಸಲಿವೆ ಎನ್ನಲಾಗಿದೆ.

KSRTC: ಶೀಘ್ರ 100 ಪಲ್ಲಕ್ಕಿ ನಾನ್ - ಎಸಿ ಸ್ಲೀಪರ್ ಬಸ್‌​ ಸೇರ್ಪಡೆ, ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು!

ಇನ್ನು, ಬೆಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಕೆಎಸ್​ಆರ್​ಟಿಸಿಯ ಪ್ರೀಮಿಯಂ ಅಂಬಾರಿ ಉತ್ಸವ (Ambari Utsav) ಮತ್ತು ಅಂಬಾರಿ ಡ್ರೀಮ್ ಕ್ಲಾಸ್ (Ambari Dream Class) ಹವಾನಿಯಂತ್ರಿತ (Air-Conditioned) ಬಸ್‌ಗಳು ಸಂಚರಿಸುತ್ತಿವೆ. ಆದರೆ, ಟಿಕೆಟ್ ದರಗಳು ಕೊಂಚ ಅಧಿಕವಿರುವುದರಿಂದ ಬಹುತೇಕರು ದೂರದ ಪ್ರಯಾಣಕ್ಕೆ ಕಡಿಮೆ ಖರ್ಚಿನ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ಆಯ್ದು ಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 15:37 [IST]
English summary
Ksrtc add soon 100 pallakki sleeper buses low cost journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+