ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ: ವನ್‌ ವೇನಲ್ಲಿ KSRTC ಡ್ರೈವರ್‌ ಚೆಲ್ಲಾಟ

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಲೋಕಾರ್ಪಣೆ ಆದಾಗಿನಿಂದ ಸದಾ ಸುದ್ದಿಯಲ್ಲಿದೆ. ಈ ಹೆದ್ದಾರಿಯಲ್ಲೇ ಈಗ ಅತೀ ಹೆಚ್ಚು ಅಪಘಾತಗಳು ದಾಖಲಾಗಿದ್ದು, ಹಲವು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಹಲವು ವಾಹನ ಚಾಲಕರ ಮಿತಿ ಮೀರಿದ ವೇಗದ ಚಾಲನೆಯೇ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ.

ಇದೀಗ ಇದೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಯಲ್ಲಿ (Bangalore Mysore Express Highway) ಕೆಎಸ್‌ಆರ್‌ಟಿಸಿ ಚಾಲಕ ರಾಂಗ್‌ಸೈಡ್‌ನಲ್ಲಿ ಬಸ್ ಚಲಾಯಿಸುತ್ತಾ ಪುಂಡಾಟ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಾಲಕ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಏಕಮುಖ ಸಂಚಾರ ರಸ್ತೆಯ ವನ್‌ ವೇ ನಲ್ಲಿ ಚಲಾಯಿಸಿದ್ದಾನೆ.

KSRTC Bus Driver Drives

ಘಟನೆಗೆ ಸಂಭಂಧಿಸಿದ ಕೆಎಸ್‌ಆರ್‌ಟಿಸಿ ಬಸ್‌ ವನ್‌ ವೇನಲ್ಲಿ ವಿರುದ್ದವಾಗಿ ಸಂಚರಿಸುತ್ತಿರುವುದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಡ್ರೈವರನ್ನು ಕೆಲಸದಿಂದ ತೆಗೆದು ಹಾಕುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಬೇಡಿಕೆ ಇಡುತ್ತಿರುವುದನ್ನು ವಿಡಿಯೋದ ಕಾಮೆಂಟ್‌ ಬಾಕ್ಸ್‌ನಲ್ಲಿ ಕಾಣಬಹುದಾಗಿದೆ.

ರಾಮನಗರದ ಬಿಡದಿ ಬಳಿ ಈ ಘಟನೆ ನಡೆದಿದ್ದು ಸರಿಯಾದ ಲೇನ್‌ನಲ್ಲಿ ಹೋಗುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ರಾಂಗ್ ಸೈಡ್‌, ವನ್‌ ವೇ ನಲ್ಲಿ ನೋ ಎಂಟ್ರಿಗೆ ನುಗ್ಗಿ ಶರವೇಗದಲ್ಲಿ ಹೋಗುತ್ತಿದ್ದ ಬಸ್‌ನ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

KSRTC Bus Driver Drives

ಅತಿ ಹೆಚ್ಚು ಅಪಘಾತದ ಆತಂಕದ ಮದ್ಯೆಯೇ ಈ ಕೆಎಸ್‌ಆರ್‌ಟಿಸಿ ಚಾಲಕ ಈ ರೀತಿಯಾಗಿ ಬಸ್‌ ಚಲಾವಣೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಈ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಯಲ್ಲಿ ಅಪಘಾತಗಳು ಧಾರಾಳವಾಗಿದೆ ಎಂದಬ ಸುದ್ದಿ ಎಲ್ಲರಿಗೂ ತಿಳಿದಿದ್ದು, ಇದರ ಮಧ್ಯೆ ಈ ಮೇಲೆ ತಿಳಿಸಿರುವ ಘಟನೆ ನಡೆದಿರುವುದರಿಂದ ಚಾಲಕನನ್ನು ವಜಾ ಮಾಡುವಂತೆ ಬೇಡಿಕೆಗಳು ಹೆಚ್ಚಾಗುತ್ತಿವೆ.

ಇನ್ನು ಇದಕ್ಕೆ ಸಂಭಧಿಸಿದಂತೆ ಘಟನೆಯ ವಿಡಿಯೋವನ್ನು ಟ್ವಿಟ್ಟರ್‌ಗೆ ಪೋಸ್ಟ್‌ ಮಾಡಿದ ಅಭಿಷೇಕ್‌ ಎಂಬ ವ್ಯಕ್ತಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರ ಟ್ವಿಟ್ಟರ್‌ ಖಾತೆಗೆ ಟ್ಯಾಗ್ ಮಾಡಿದ್ದು ಕರ್ತವ್ಯ ಲೋಪ ಎಸಗಿದ ಈ ಬಸ್‌ ಡ್ರೈವರ್‌ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಾಹಿತಿಗಳ ಪ್ರಕಾರ ಈ ಚಾಲಕನು ಸುಮಾರು ಎರಡು ಕಿಲೋ ಮೀಟರ್‌ ವರೆಗೂ ಇದೇ ರೀತಿ ಡ್ರೈವ್‌ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಬರುತ್ತಿರುವಾಗ ಈ ರೀತಿ ರಾಂಗ್‌ ಸೈಡ್‌ನಲ್ಲಿ ಪ್ರಯಾಣಿಕರು ತುಂಬಿದ ಬಸ್‌ ಓಡಿಸುವುದು ಅಪಾಯಕ್ಕೆ ಬಾಗೀನ ನೀಡಿ ಕರೆದಂತೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 19, 2023, 18:16 [IST]
English summary
Ksrtc bus driver drives at one way wrong side in bangalore mysore express highway
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+