ವಿಮಾನದಂತಹ ಸೌಕರ್ಯ: 20 KSRTC ಬಸ್ಸುಗಳಿಗೆ ಚಾಲನೆ: ಈ ಮಾರ್ಗಗಳಲ್ಲಿ ಕಾರ್ಯಾಚರಣೆ
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೆರಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೆಎಸ್‌ಆರ್‌ಟಿಸಿಗಾಗಿ 20 ಹೊಸ ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ. ಈ ಅತ್ಯಾಧುನಿಕ ಐರಾವತ್ ಕ್ಲಬ್ ಕ್ಲಾಸ್ 2.0 ಬಸ್ಸುಗಳ ಬೆಲೆಯು ತಲಾ 1.78 ಕೋಟಿ ರೂ.ಗಳಾಗಿದ್ದು, ಫೈರ್ ಅಲಾರಂ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್ಎಪಿಎಸ್) ಸೇರಿದಂತೆ ಹಲವಾರು ನವೀಕರಣಗಳನ್ನು ಒಳಗೊಂಡಿವೆ. ಬಸ್ ಮಾರ್ಗಗಳು ಸೇರಿದಂತೆ ಅದರ ಫೀಚರ್‌ಗಳನ್ನು ಇಲ್ಲಿ ನೋಡೋಣ.
ಐರಾವತ ಕ್ಲಬ್ ಕ್ಲಾಸ್ ವಾಹನಗಳನ್ನು ಈ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ. ಶಿವಮೊಗ್ಗ-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ತಿರುಪತಿ ನಡುವೆ 1 ಬಸ್, ದಾವಣಗೆರೆ-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ಬಳ್ಳಾರಿ ನಡುವೆ 1 ಬಸ್, ಕುಂದಾಪುರ-ಬೆಂಗಳೂರು ನಡುವೆ 1 ಬಸ್, ಮಂಗಳೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ತಿರುಪತಿ ನಡುವೆ 1 ಬಸ್ ಕಾರ್ಯಾಚರಿಸಲಿವೆ.

ಈ ಮಾರ್ಗಗಳಲ್ಲಿ ಮಾತ್ರವಲ್ಲದೆ ಮೈಸೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ಹೈದರಾಬಾದ್ ನಡುವೆ 1 ಬಸ್, ಮೈಸೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ಚನ್ನೈ ನಡುವೆ 1 ಬಸ್, ಬೆಂಗಳೂರು-ರಾಯಚೂರು ನಡುವೆ 2 ಬಸ್, ಬೆಂಗಳೂರು-ಶ್ರೀ ಹರಿಕೋಟಾ ನಡುವೆ 2 ಬಸ್, ಬೆಂಗಳೂರು-ಕಾಸರಗೂಡು ನಡುವೆ 2 ಬಸ್, ಬೆಂಗಳೂರು-ಕ್ಯಾಲಿಕಟ್ ನಡುವೆ 2 ಬಸ್ಸುಗಳು ಕಾರ್ಯಾಚರಿಸಲಿವೆ.
ಬಸ್ಸಿನ ವಿಶೇಷತೆಗಳು: ಈ ವಾಹನವು 15 ಮೀಟರ್ ಉದ್ದವಿದ್ದು, 51 ಆಸನಗಳು 2x2 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಶಕ್ತಿಯುತ ಹಾಲೋಜನ್ ಹೆಡ್‌ಲೈಟ್‌ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು (DRL) ಹೊಂದಿದೆ. ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್‌ಟೀರಿಯರ್ಸ್‌ನ್ನು ಹೊಂದಿದೆ. ಇದರ ಏರೋಡೈನಮಿಕ್ ವಿನ್ಯಾಸವು ಬಸ್‌ಗೆ ಉತ್ತಮ ಮೈಲೇಜ್ ಒದಗಿಸುತ್ತದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.

ಒಟ್ಟು ಬಸ್ ಉದ್ದದಲ್ಲಿ ಹಳೆಯ ಬಸ್‌ಗಳಿಗಿಂತ ಶೇ3.5 ರಷ್ಟು ಏರಿಕೆಯಾಗಿರುವುದರಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಒಟ್ಟು ಬಸ್ ಎತ್ತರದಲ್ಲಿ ಶೇ5.6 ರಷ್ಟು ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು ಶೇ9.5 ರಷ್ಟು ಅಗಲವಾಗಿದೆ.
ಹಳೆಯ ಬಸ್‌ಗಳಿಗಿಂತ ಶೇ20 ದೊಡ್ಡದಾಗಿರುವುದರಿಂದ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಲಗೇಜ್ ಸ್ಥಳವನ್ನು ಕೂಡ ಹೊಂದಿದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಿಗಾಗಿ ಯುಎಸ್‌ಬಿ ಮತ್ತು C-ಟೈಪ್ ಆಯ್ಕೆ ನೀಡಲಾಗಿದೆ. ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ ಹೊಂದಿದೆ. ಪ್ರಯಾಣಿಕರು ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನ ಸೌಕರ್ಯ ಪಡೆಯಬಹುದು.

ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್‌ಗಳು, ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್‌ಗಳನ್ನು ನೀಡಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರನ್ನು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್‌ಗಳ ನೀರು ಪೈಪುಗಳನ್ನು ಅಳವಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications