KSRTC: ಕ್ರಿಸ್‌ಮಸ್‌ ರಜೆ.. ಕೆಎಸ್‌ಆರ್‌ಟಿಸಿಯಿಂದ 1000 ವಿಶೇಷ ಬಸ್, ಶೇಕಡ 10% ರಿಯಾಯಿತಿ, ಎಲ್ಲಿಂದ ಎಲ್ಲಿಗೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕ್ರಿಸ್‌ಮಸ್‌ (Christmas) ಹಬ್ಬದ ಹಿನ್ನೆಲೆ, ಸಾಲು - ಸಾಲು ರಜೆಗಳು ಬರುವುದರಿಂದ ಕೆಎಸ್‌ಆರ್‌ಟಿಸಿ ಡಿಸೆಂಬರ್ 22 (December 22) ರಿಂದ ಹೆಚ್ಚುವರಿಯಾಗಿ 1,000 ವಿಶೇಷ ಬಸ್‌ಗಳನ್ನು ಓಡಿಸಲಿದೆ.

ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್, ತಿರುಪತಿ ಸೇರಿದಂತೆ ಇತರೆ ಸ್ಥಳಗಳಿಗೆ ಬಸ್‌ಗಳು ಸಂಚರಿಸಲಿವೆ.

KSRTC: ಕ್ರಿಸ್‌ಮಸ್‌ ರಜೆ.. ಕೆಎಸ್‌ಆರ್‌ಟಿಸಿಯಿಂದ 1000 ವಿಶೇಷ ಬಸ್, ಶೇಕಡ 10% ರಿಯಾಯಿತಿ, ಎಲ್ಲಿಂದ ಎಲ್ಲಿಗೆ?

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ (Mysuru Road Bus Station) ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿಗೆ ವಿಶೇಷ ಬಸ್‌ಗಳು ಕಾರ್ಯಚರಣೆ ನಡೆಸಲಿವೆ. ಶಾಂತಿನಗರ (Shanthinagar) ನಿಲ್ದಾಣದಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಝಿಕ್ಕೋಡ್ ಒಳಗೊಂಡಂತೆ ತಮಿಳುನಾಡು ಹಾಗೂ ಕೇರಳದ ವಿವಿಧ ಸ್ಥಳಗಳಿಗೆ ಪ್ರೀಮಿಯಂ ಬಸ್‌ಗಳು ಓಡಾಟ ನಡೆಸಲಿವೆ.

ಡಿಸೆಂಬರ್ 25 ರಂದು (December 25) ಇತರೆ ನಗರಗಳಿಂದ ಬೆಂಗಳೂರಿಗೆ ಬಸ್‌ಗಳು ಬರಲಿವೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ www.ksrtc.karnataka.gov.in ಗೆ ಭೇಟಿ ನೀಡಿ, 4 ಅದಕ್ಕಿಂತ ಹೆಚ್ಚಿನ ಜನರಿಗೆ ಒಟ್ಟಿಗೆ ಟಿಕೆಟ್ ಕಾಯ್ಡರಿಸಿದರೆ, ಶೇಕಡ 5% ರಿಯಾಯಿತಿ ದೊರೆಯಲಿದೆ. ಹೋಗಿ ಬರುವ ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ಶೇಕಡ 10% ಡಿಸ್ಕೌಂಟ್ ಲಭಿಸಲಿದೆ.

KSRTC: ಕ್ರಿಸ್‌ಮಸ್‌ ರಜೆ.. ಕೆಎಸ್‌ಆರ್‌ಟಿಸಿಯಿಂದ 1000 ವಿಶೇಷ ಬಸ್, ಶೇಕಡ 10% ರಿಯಾಯಿತಿ, ಎಲ್ಲಿಂದ ಎಲ್ಲಿಗೆ?

ಕೆಎಸ್‌ಆರ್‌ಟಿಸಿ ತನ್ನ ಆದಾಯವನ್ನು ವೃದ್ಧಿಸಿಕೊಳ್ಳಲು ಕಾರ್ಗೋ ಸೇವೆಯನ್ನು ಆರಂಭಿಸಿದ್ದು, ಡಿಸೆಂಬರ್‌ 23 ರಿಂದ 20 ಟ್ರಕ್‌ಗಳು ರಸ್ತೆಗಿಳಿಯಲಿವೆ. ಒಂದು ಟ್ರಕ್ ಖರೀದಿಗೆ ನಿಗಮವು ರೂ.22 ಲಕ್ಷ ವೆಚ್ಚವನ್ನು ಮಾಡಿದೆ. ಇವು '6 ಟನ್' ವರೆಗೆ ಸರಕನ್ನು ಸಾಗಿಸುವ ಸಾಮರ್ಥ್ಯವನ್ನು ಪಡೆದಿವೆ. 'ಈ ಕಾರ್ಗೋ ಸೇವೆ ಮೂಲಕ ವಾರ್ಷಿಕ ರೂ.100 ಕೋಟಿ ಆದಾಯ ಗಳಿಸುವ ಗುರಿ ಹೊಂದಿದ್ದೇವೆ' ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.

ಡಿಸೆಂಬರ್ 12 ರಂದು ಮದ್ರಾಸ್ ಹೈಕೋರ್ಟ್, ಕೆಎಸ್‌ಆರ್‌ಟಿಸಿ' ಸಂಕ್ಷೇಪಣ ಬಳಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಇದ್ದ ಎಲ್ಲ ಕಾನೂನು ಅಡೆತಡೆಗಳನ್ನು ತೆರವುಗೊಳಿಸಿದೆ. ಕೆಎಸ್‌ಆರ್‌ಟಿಸಿ ಸಂಕ್ಷೇಪಣ ಬಸರಬಾರದು ಎಂದು ಕೇರಳ ರಾಜ್ಯ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಕರ್ನಾಟಕ ಸಾರಿಗೆಗೆ ದೊಡ್ಡ ಜಯ ಸಿಕ್ಕಿದೆ.

KSRTC: ಕ್ರಿಸ್‌ಮಸ್‌ ರಜೆ.. ಕೆಎಸ್‌ಆರ್‌ಟಿಸಿಯಿಂದ 1000 ವಿಶೇಷ ಬಸ್, ಶೇಕಡ 10% ರಿಯಾಯಿತಿ, ಎಲ್ಲಿಂದ ಎಲ್ಲಿಗೆ?

ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳ ಪ್ರಯಾಣಕ್ಕಾಗಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲು ಯೋಜಿಸುತ್ತಿದೆ. ಹೊಸ ಎಲೆಕ್ಟ್ರಿಕ್ ಬಸ್‌ಗಳು, ಸಂಪೂರ್ಣ ಚಾರ್ಜ್ ನಲ್ಲಿ 180 ಕಿಲೋಮೀಟರ್ ವರೆಗೆ ಕ್ರಮಿಸಲಿವೆ. 12 - ಮೀಟರ್ ಉದ್ದವಿರುವ ಈ ನಾನ್ - ಎಸಿ ಬಸ್‌ಗಳು ಅಂಗವಿಕಲರ ಸ್ನೇಹಿ ವೈಶಿಷ್ಟ್ಯವನ್ನು ಹೊಂದಿರಲಿದ್ದು, ಬೆಂಗಳೂರಿನಿಂದ ಸಮೀಪದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿವೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 20, 2023, 12:30 [IST]
English summary
Ksrtc run 1000 special buses for christmas holidays 10 percent discount good news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+