ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಎಂಬ ಹೆಸರನ್ನು​ ಅನ್ನು ಇನ್ನು ಮುಂದೆ ಕರ್ನಾಟಕ ಬಳಸುವಂತಿಲ್ಲ. ಈಗ ಕೆಎಸ್​ಆರ್​ಟಿಸಿ ಟ್ರೇಡ್‌ಮಾರ್ಕ್‌ ಕೇರಳದ ಪಾಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ ಆದೇಶ ಹೊರಡಿಸಿದೆ.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ರಾಜ್ಯದಲ್ಲಿ ಕೆಎಸ್​ಆರ್​ಟಿಸಿ(ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್) ಎಂಬ ಹೆಸರಿನಲ್ಲಿ ಕರ್ನಾಟಕದ ಸಾರಿಗೆ ಬಸ್​ಗಳು ಸಂಚರಿಸುತ್ತಿದ್ದವು. ಜೊತೆಗೆ ಕೇರಳ ರಾಜ್ಯದಲ್ಲೂ ಕೆಎಸ್​ಆರ್​ಟಿಸಿ(ಕೇರಳ ಸ್ಟೇಟ್​ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್) ಎಂಬ ಅದೇ ಹೆಸರಿನಲ್ಲಿ ಬಸ್​ಗಳ ಸಂಚಾರ ನಡೆಯುತ್ತಿತ್ತು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್​ಗಳು ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದ್ದವು.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ) ರಚನೆಯಾದಾಗ ಬ್ರಿಟಿಷ್ ರಾಜನ ಅವಧಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1965 ರಲ್ಲಿ ರಚಿಸಲಾಯಿತು. ಅಂದಿನಿಂದ ಕೇರಳ ಕೆಎಸ್​ಆರ್​ಟಿಸಿ ಹೆಸರನ್ನು ಬಳಸಲಾರಂಭಿಸಿತು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಕರ್ನಾಟಕ ಸರ್ಕಾರ ಕೆಎಸ್‌ಆರ್‌ಟಿಸಿ ಹೆಸರನ್ನು 1973 ರಿಂದ ಬಳಸಲಾರಂಭಿಸಿತು. ಹೀಗಾಗಿ ನಾವು ಮೊದಲು ಕೆಎಸ್​ಆರ್​ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್​ ಕೊಡಬೇಕೆಂದು ಕೇರಳ ಮತ್ತು ಕರ್ನಾಟಕದ ದೀರ್ಘಕಾಲದಿಂದ ತಿಕ್ಕಾಟ ನಡೆಯುತ್ತಿತ್ತು.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಇದರ ನಡುವೆ 2014ರಲ್ಲಿ ಈ ಟ್ರೇಡ್ ಮಾರ್ಕ್ ಬಳಸದಂತೆ ಕೇರಳಕ್ಕೆ ಕರ್ನಾಟಕ ಸೂಚನೆ ನೀಡಿತ್ತು. ಈ ಬಗ್ಗೆ ಕೇರಳಕ್ಕೆ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೆ ಕೇರಳ ಸರ್ಕಾರ ಟ್ರೇಡ್​ ಮಾರ್ಕ್​ಗಳ ರಿಜಿಸ್ಟ್ರಾರ್​​ಗೆ ಅರ್ಜಿ ಸಲ್ಲಿಕೆ ಮಾಡಿತ್ತು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಟ್ರೇಡ್​ ಮಾರ್ಕ್​ಗಳ ಸಲ್ಲಿಕೆಯಾದ ಬಳಿಕ ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟ ನಡೆದಿತ್ತು. ಅಂತಿಮವಾಗಿ ಕೇರಳಕ್ಕೆ ಕೆಎಸ್​ಆರ್​ಟಿಸಿ ಟ್ರೇಡ್​ಮಾರ್ಕ್ ಲಭಿಸಿದೆ. ಕೆಎಸ್​​ಆರ್​ಟಿಸಿ ಟ್ರೇಡ್​ಮಾರ್ಕ್ ಕೇರಳ ರಾಜ್ಯಕ್ಕೆ ಒಲಿದ ಬಗ್ಗೆ ಕೇರಳ ರಸ್ತೆ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಕೇರಳಕ್ಕೆ ಕೆಎಸ್​ಆರ್​ಟಿಸಿ ಟ್ರೇಡ್​ಮಾರ್ಕ್ ಲಭಿಸಿದ್ದರೂ ಕೂಡ ದೇಶದಲ್ಲಿ ಕೆಎಸ್​ಆರ್​ಟಿಸಿ ಎಂಬ ಪದ ಕೇಳಿದಾಗ ಪ್ರತಿಯೊಬ್ಬರ ಮನಸ್ಸಿಗೆ ಮೊದಲು ಬರುವುದೇ ಕರ್ನಾಟಕ ಸಾರಿಗೆ. ನಮ್ಮ ರಾಜ್ಯದ ಕೆಎಸ್​ಆರ್​ಟಿಸಿಯ್ಗೆ ದೇಶದ ಅತ್ಯುತ್ತಮ ಸೇವೆ ಒದಗಿಸುತ್ತಿರುವ ಸಾರಿಗೆ ಸಂಸ್ಥೆ ಎಂಬ ಖ್ಯಾತಿಗೆ ಹಲವು ಬಾರಿ ಪಾತ್ರವಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಆದರೆ ವಿಪರ್ಯಾಸವೆಂದರೆ ಕೆಎಸ್‌ಆರ್‌ಟಿಸಿ ಹೆಸರು ಕೇರಳದ ಪಾಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಚೆ ಕಾಸರಗೋಡು ಹೋಯ್ತು ಇದೀಗ ಬಸ್ ಹೆಸರು ಕೂಡ ಅವರ ಪಾಲಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಈ ಕುರಿತಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಕೇರಳವು ಕೆಎಸ್ಆರ್‌ಟಿಸಿ ಎಂಬ ಶಬ್ದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕವು ಈ ಶಬ್ದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್‌ಮಾರ್ಕ್ ರೆಜಿಸ್ಟ್ರಿಯು ತೀರ್ಪು ನೀಡಿದೆ ಎಂದು ಮಾಹಿತಿ ಬಂದಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ,

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು. ಆದರೆ ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿದೆ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್‌ಮಾರ್ಕ್‌ ಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಆದರೆ ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆಯ ಮುಖ್ಯ, ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಕೆಎಸ್​​ಆರ್​ಟಿಸಿಯನ್ನು ಕಳೆದುಕೊಂಡ ಕರ್ನಾಟಕ, ಕೇರಳ ವಿರುದ್ಧ ಟ್ರೇಡ್‌ಮಾರ್ಕ್‌ ಹೋರಾಟದಲ್ಲಿ ಹಿನ್ನಡೆ

ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ಇದು ಕೇರಳಕ್ಕೆನು ಸಂಭ್ರಮಪಡುವಂತ ವಿಚಾರವೇನಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿದ್ದಿಲ್ಲ. ಎಂಬುದನ್ನು ಕೇರಳ ಮೊದಲು ಅರ್ಥಮಾಡಿಕೊಳ್ಳಬೇಕು. ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Most Read Articles

Kannada
English summary
Ksrtc Trademark Given To Kerala Says Trademark Registry. Read In Kannada.
Story first published: Thursday, June 3, 2021, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X