ಐಷಾರಾಮಿ ಕಾರು ಸಂಗ್ರಹದಲ್ಲಿ ಅಂಬಾನಿಗೆ ಸೆಡ್ಡು ಹೊಡೆಯಬಲ್ಲ ಭಾರತದ ಉದ್ಯಮಿ ಈತ!
ಇತ್ತೀಚೆಗೆ ನಡೆದ ರೋಲ್ಸ್ ರಾಯ್ಸ್ ಕಾರು ಅಪಘಾತವೊಂದು ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅಪಘಾತಕ್ಕೆ ಒಳಗಾಗಿರುವ ರೋಲ್ಸ್ ರಾಯ್ಸ್ ಕಾರಿನಲ್ಲಿ ಕುಬೇರ್ ಗ್ರೂಪ್ ನಿರ್ದೇಶಕ ವಿಕಾಸ್ ಮಾಲು ಕೂಡ ಇದ್ದರು. ಈ ಉದ್ಯಮಿಯ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ. ಸಿಂಪಲ್ ಆಗಿ ಹೇಳುವುದಾದ್ರೆ ಇವರು ಅಂಬಾನಿಯಷ್ಟೇ ಐಷಾರಾಮಿ ಕಾರುಗಳ ಒಡಯ.
ವಿಕಾಸ್ ಮಾಲು ಪ್ರಸ್ತುತ ಕುಬೇರ್ ಗ್ರೂಪ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ). ಇವರ ಕಂಪನಿಯು 45 ಕ್ಕೂ ಹೆಚ್ಚು ಕೈಗಾರಿಕೆಗಳೊಂದಿಗೆ 50 ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಕೆಲವು ವರದಿಗಳ ಪ್ರಕಾರ, ವಿಕಾಸ್ ಮಾಲು ಅವರು 100 ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ. ಇದನ್ನು ಖಚಿತಪಡಿಸುವಂತೆ YouTube ನಲ್ಲಿ Mo Vlogs ನಿಂದ ಒಂದು ವಿಡಿಯೋ ಕೂಡ ಮಾಡಲಾಗಿದೆ.

ವಿಕಾಸ್ ಮಲು ಅವರ ಮನೆಯ ಸುತ್ತಲೂ ನೂರಾರು ಸಂಖ್ಯೆಯ ಭದ್ರತಾ ಸಿಬ್ಬಂದಿ, ಬಂಗಲೆಗೆ ಹೋಗಲು ಅನೇಕ ಗೇಟ್‌ಗಳನ್ನು ದಾಟಬೇಕಾಗುತ್ತದೆ. ಆದರೆ ಅವರ ಪಾರ್ಕಿಂಗ್ ಸ್ಥಳಕ್ಕೆ ಬಂದ ನಂತರ ವಿಶೇಷ ಆವೃತ್ತಿಯ ಅಲ್ಟ್ರಾ-ಐಷಾರಾಮಿ ವಾಹನಗಳಿವೆ. ಕುತೂಹಲಕಾರಿಯಾಗಿ, ಭದ್ರತಾ ಕಾರಣಗಳಿಗಾಗಿ ಕಾರುಗಳು ಪೊಲೀಸ್ ಸೈರನ್‌ಗಳನ್ನು ಸಹ ಹೊಂದಿವೆ.
ವಿಶೇಷ ಆವೃತ್ತಿಯ ಐಷಾರಾಮಿ ಕಾರುಗಳು: ಇಲ್ಲಿ ತಿಳಿಸುವ ಎಲ್ಲಾ ಬ್ರಾಂಡ್‌ಗಳ ಕಾರುಗಳು ಎರಡು-ಮೂರರ ಸಂಖ್ಯೆಯಲ್ಲಿವೆ. ಲ್ಯಾಂಬೋರ್ಘಿನಿಗಳು, ಬೆಂಟ್ಲಿಗಳು, ರೋಲ್ಸ್ ರಾಯ್ಸ್, ಮರ್ಸಿಡಿಸ್, ಆಸ್ಟನ್ ಮಾರ್ಟಿನ್ಸ್, ಮಸ್ಟ್ಯಾಂಗ್‌ನಂತಹ ಬಹುಕೋಟಿಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವೆಲ್ಲವೂ ಒಂದೆಡೆಯಾದ್ರೆ, ಈ ಉದ್ಯಮಿಯ ಮನೆಯ ಹೊರಗಿನ ಬಯಲು ಪ್ರದೇಶದಲ್ಲಿ ನೂರಾರು ಕಾರುಗಳು ನಿಂತಿವೆ.

ಇವುಗಳಲ್ಲಿ ಕೆಲವು ಪ್ರಮುಖ ಮಾದರಿಗಳಲ್ಲಿ ಕಸ್ಟಮ್ ಲಂಬೋರ್ಘಿನಿ ಉರುಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿತ್ ಮ್ಯಾನ್ಸೋರಿ ಕಿಟ್ (100 ನೇ ವಾರ್ಷಿಕೋತ್ಸವ ಆವೃತ್ತಿ), ಬೆಂಟ್ಲಿ ಬೆಂಟೈಗಾ, ಬೆಂಟ್ಲೆ ಮುಲ್ಸಾನ್ನೆ, ಮರ್ಸಿಡಿಸ್ ಜಿಎಲ್ಎಸ್ 600 ಇದು ಬೌನ್ಸ್, ಫೋರ್ಡ್ ಮುಸ್ತಾಂಗ್ ರೋಸಿಯರ್ಸ್, ಲಂಬೋರ್ಘಿನಿ ಹುರಾಕನ್ STO, ಫೋರ್ಡ್ ಮುಸ್ತಾಂಗ್ ರೋಸಿಯರ್ಸ್, ಫಾರ್ಡ್ ಮುಸ್ತಾಂಗ್ ರೋಸಿಯರ್ಸ್, ಫ್ಯಾಂಟಮ್ ಕಸ್ಟಮ್ ಮಾದರಿಗಳು ಕೂಡ ಇವೆ.
ಇವೆಲ್ಲವೂ ದುಬಾರಿ ಕಾರುಗಳು ಇನ್ನೂ ಹಲವು ಕಾರುಗಳಿದ್ದರೂ ಅವುಗಳ ಬಗ್ಗೆ ವಿವರವಾದ ಮಾಹಿತಿಯಿಲ್ಲ. ಇನ್ನು ಸಾಮಾನ್ಯ ಕಾರುಗಳಿಗೆ ಲೆಕ್ಕವೇ ಇಲ್ಲದಷ್ಟಿವೆ. ಈ ಎಲ್ಲಾ ಕಾರುಗಳ ನಂಬರ್ ಪ್ಲೇಟ್‌ನಲ್ಲಿ 9 ಸಂಖ್ಯೆಯಿದೆ. ಒಟ್ಟಾರೆಯಾಗಿ, ಈ ಕಾರುಗಳ ನಿಖರವಾದ ಮೌಲ್ಯವನ್ನು ನಿರ್ಧರಿಸಲು ಕಷ್ಟ. ನಮಗೆ ತಿಳಿದಿರುವಂತೆ ಅಂಬಾನಿಯ ನಂತರ ಆ ಮಟ್ಟದ ಅತ್ಯಂತ ಪ್ರಭಾವಶಾಲಿ ಕಾರ್ ಸಂಗ್ರಹಣೆಯಾಗಿದೆ.

ವಿಕಾಸ್ ಮಾಲು ಅವರ ಕಾರುಗಳನ್ನು ಹೊರತುಪಡಿಸಿ, ಕೆಲ ಐಷಾರಾಮಿ ಕಾರುಗಳನ್ನು ಅವರ ಭದ್ರತಾ ಸಿಬ್ಬಂದಿಗೂ ಹಂಚಿಕೆ ಮಾಡಲಾಗಿದೆ. ಟೊಯೋಟಾ ಫಾರ್ಚೂನರ್ ನಂತಹ ಕಾರುಗಳಲ್ಲಿ ಭದ್ರತಾ ಸಿಬ್ಬಂದಿ ವಿಕಾಸ್ ಮಾಲು ಅವರಿಗೆ ರಕ್ಷಣೆ ನೀಡುತ್ತಾರೆ. ಈ ಕಾರುಗಳ ಜೊತೆಗೆ, ಇನ್ನೂ ಅನೇಕ ದುಬಾರಿ ಕಾರುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದೆ.
ಮೊದಲೇ ಹೇಳಿದಂತೆ ಕುಬೇರ್ ಗ್ರೂಪ್ ಸ್ಥಾಪಕರಾದ ವಿಕಾಸ್ ಮಾಲು, ನೂರಾರು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಇವರ ಕಾರ್ ಕಲೆಕ್ಷನ್ ನೋಡಿ ದಂಗಾಗಿರುವ ಜನಪ್ರಿಯ ಯೂಟ್ಯೂಬ್ ಚಾನೆಲ್‌ನ ಯುವತಿ ಮತ್ತು ಅವರ ತಂಡ ದುಬೈನಿಂದ ಖಾಸಗಿ ವಿಮಾನದಲ್ಲಿ ಆಗಮಿಸಿ ವಿಕಾಸ್ ಮಾಲು ಅವರ ಗ್ಯಾರೇಜ್ ಅನ್ನು ಷೂಟ್ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








