ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 3ರಂದು ಹಿಮಾಚಲ ಪ್ರದೇಶದಲ್ಲಿರುವ ವಿಶ್ವದ ಅತಿ ಉದ್ದದ ಅಟಲ್ ಸುರಂಗವನ್ನು ಉದ್ಘಾಟಿಸಿದ್ದರು. ಈ ಭಾಗದ ಜನರ ಕನಸಾಗಿದ್ದ ಈ ಸುರಂಗವು ಜಾಗತಿಕವಾಗಿ ಭಾರತದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಭಾರತದ ಹೆಮ್ಮೆಯಾದ ಈ ಸುರಂಗದೊಳಗೆ ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳು ಸಂಭವಿಸಿದೆ. ಅಟಲ್ ಸುರಂಗದೊಳಗೆ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡಿರುವುದೇ ಈ ಮೂರು ಅಪಘಾತಗಳಿಗೆ ಕಾರಣವಾಗಿದೆ.

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಈ ಅಪಘಾತಗಳು ಸಂಭವಿಸಿದ ನಂತರವೂ ಎಚ್ಚೆತ್ತಿ ಕೊಳ್ಳದ ವಾಹನ ಸವಾರರು ಇನ್ನೂ ಸಹ ಅಟಲ್ ಸುರಂಗದೊಳಗೆ ಅಡ್ಡಾ ದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ನಿಯಮಗಳ ಪ್ರಕಾರ ಅಟಲ್ ಸುರಂಗದಲ್ಲಿ ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಾಗಬೇಕು. ಆದರೆ ಈ ವೇಗದ ಮಿತಿ ನಿಯಮವನ್ನು ಕಡೆಗಣಿಸಿರುವ ವಾಹನ ಸವಾರರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆಂದು ಹೇಳಲಾಗಿದೆ.

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಇಷ್ಟು ಸಾಲದೆಂಬಂತೆ ಕೆಲವರು ಅಟಲ್ ಸುರಂಗದೊಳಗೆ ವಾಹನಗಳನ್ನು ನಿಲುಗಡೆ ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಬಗ್ಗೆಯೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಪೊಲೀಸರನ್ನು ಅಟಲ್ ಸುರಂಗದೊಳಗೆ ನಿಯೋಜಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಸುರಂಗದ ದಕ್ಷಿಣ ಭಾಗದ ಬಾಲ್ಜಾನ್‌ ಬಳಿ ವಾಹನ ಚಾಲಕರ ಸುರಕ್ಷತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಯಾವುದೇ ವಾಹನವನ್ನು ಸುರಂಗದೊಳಗೆ ನಿಲ್ಲಿಸುವಂತಿಲ್ಲ.

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಯಾರಾದರೂ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೌರವ್ ಸಿಂಗ್ ಹೇಳಿದರು. ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಸುರಂಗದೊಳಗೆ ಡಾಪ್ಲರ್ ರಾಡಾರ್ ಎಂಬ ವಾಹನ ವೇಗ ಪತ್ತೆಕಾರಕವನ್ನು ಬಳಸಲಾಗುವುದು ಎಂದು ಗೌರವ್ ಸಿಂಗ್ ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಕುಲು ಹಾಗೂ ಲಾಹಲ್-ಸ್ಪಿಟಿ ನಗರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ತಕ್ಷಣವೇ ಶಿಕ್ಷೆ ವಿಧಿಸಲು ಬೈಕ್ ಗಳಲ್ಲಿಯೂ ಪೊಲೀಸರು ಗಸ್ತು ತಿರುಗಲಿದ್ದಾರೆ.

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ರಸ್ತೆ ಅಪಘಾತ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲು ಎಸ್‌ಪಿ ಗೌರವ್ ಸಿಂಗ್ ತಮ್ಮ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಟಲ್ ಸುರಂಗದೊಳಗಿನ ಅಪಘಾತಗಳನ್ನು ತಡೆಯಲು ಮುಂದಾದ ಪೊಲೀಸರು

ಸುರಂಗವು ಉದ್ಘಾಟನೆಯಾದ ನಂತರ ಸುರಂಗದೊಳಗೆ ಬೈಕ್ ರೇಸಿಂಗ್ ನಡೆಯುತ್ತಿದೆ ಎಂದು ವರದಿಗಳಾಗಿದ್ದವು. ಈಗ ಅಟಲ್ ಸುರಂಗದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪೊಲೀಸರನ್ನು ನಿಯೋಜಿಸಲಾಗಿರುವುದರಿಂದ ಸಂಚಾರಿ ನಿಯಮಗಳ ಉಲ್ಲಂಘನೆಯು ಕಡಿಮೆಯಾಗಿ ಅಪಘಾತಗಳು ತಪ್ಪುವ ನಿರೀಕ್ಷೆಗಳಿವೆ.

Most Read Articles
 
Kannada
English summary
Kulu Police deployed in Atal Tunnel to stop accidents. Read in Kannada.
Story first published: Thursday, October 8, 2020, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X