ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ದೇಶದ ಅತ್ಯಂತ ಜನಪ್ರಿಯ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ರೆಟ್ರೊ ಶೈಲಿಯ ಬೈಕ್‌ಗಳಿಗೆ ಹೆಸರುವಾಸಿಯಾಗಿದೆ.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಕಂಪನಿಯು ಬುಲೆಟ್ 350, ಕ್ಲಾಸಿಕ್ 350, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650 ಸೇರಿದಂತೆ ಹಲವಾರು ಬೈಕುಗಳನ್ನು ಮಾರಾಟ ಮಾಡುತ್ತದೆ. ಇವುಗಳಲ್ಲಿ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ರಾಯಲ್ ಎನ್‌ಫೀಲ್ಡ್ ಬೈಕುಗಳು ಸಾರ್ವಜನಿಕರಲ್ಲಿ ಮಾತ್ರವಲ್ಲದೆ ಪೊಲೀಸರಲ್ಲಿಯೂ ಜನಪ್ರಿಯವಾಗಿವೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ರಾಯಲ್ ಎನ್‌ಫೀಲ್ಡ್ ಬೈಕ್‌ ಅನ್ನು ಮೂರನೇ ಬಾರಿಗೆ ಖರೀದಿಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಈ ಬಾರಿ ಆ ಅಧಿಕಾರಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕನ್ನು ಖರೀದಿಸಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ತೆಲಂಗಾಣ ಮಹಿಳಾ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಈ ವೀಡಿಯೊದಲ್ಲಿ ಮಹಿಳಾ ಅಧಿಕಾರಿ ತಮ್ಮ ಹೊಸ ಬೈಕಿನ ವಿತರಣೆಯನ್ನು ಪಡೆದು ಅದನ್ನು ಚಾಲನೆ ಮಾಡುವುದನ್ನು ಕಾಣಬಹುದು. ಇದರ ಫೋಟೋಗಳನ್ನು ಬೈಕರ್ ಪ್ರಕಾಶ್ ಚೌಧರಿ ಎಂಬುವವರು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ. ಒಬ್ಬಾತ ಈ ಬೈಕ್ ಖರೀದಿಸಿದ ಮಹಿಳಾ ಅಧಿಕಾರಿಯನ್ನು ಅಭಿನಂದಿಸುತ್ತಾ, ಈ ಬೈಕ್ ಏಕೆ ಖರೀದಿಸಿದಿರಿ ಎಂದು ಕೇಳುತ್ತಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಇದಕ್ಕೆ ಉತ್ತರಿಸುವ ಆ ಮಹಿಳಾ ಅಧಿಕಾರಿ ಬೈಕ್‌ ಸವಾರಿಯಲ್ಲಿ ಮಹಿಳೆಯರು ಪುರುಷರಿಗೆ ಸಮಾನರು ಎಂದು ಸಾಬೀತುಪಡಿಸಲು ಈ ಬೈಕ್ ಖರೀದಿಸಿರುವುದಾಗಿ ಹೇಳಿದ್ದಾರೆ. ಅಂದ ಹಾಗೆ ಇದು ಅವರ ಮೊದಲ ಬೈಕ್ ಅಲ್ಲ.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಮೊದಲು ಅವರು ಸ್ಕೂಟರ್ ಸವಾರಿ ಮಾಡುತ್ತಿದ್ದರು. ನಂತರ 2015ರಲ್ಲಿ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್ ಅನ್ನು ಖರೀದಿಸಿದರು. 2017ರಲ್ಲಿ ರಾಯಲ್ ಎನ್‌ಫೀಲ್ಡ್ ನ 500 ಸಿಸಿ ಬೈಕ್ ಅನ್ನು ಖರೀದಿಸಿದ್ದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಅವರು ರಾತ್ರಿ ವೇಳೆಯಲ್ಲಿ ಗಸ್ತು ತಿರುಗಲು ತಮ್ಮ ಬೈಕುಗಳನ್ನು ಬಳಸುತ್ತಾರೆ. ಅವರ ಕಾರ್ಯಕ್ಕೆ ಅವರ ಮೇಲಾಧಿಕಾರಿಗಳು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಮ್ಮೆ ಅವರು ಬೆಳಗಿನ ಉಪಾಹಾರಕ್ಕೆ ಹೋಗಿದ್ದಾಗ ಮೊದಲ ಬಾರಿಗೆ ಇಂಟರ್‌ಸೆಪ್ಟರ್ 650 ಬೈಕ್ ಅನ್ನು ಚಾಲನೆ ಮಾಡಿದ್ದರು.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ಇಂಟರ್‌ಸೆಪ್ಟರ್ 650 ಬೈಕ್ ಅವರಿಗೆ ಇಷ್ಟವಾಗಿದ್ದರೂ ಸಹ ಅದರ ತೂಕದ ಬಗ್ಗೆ ಚಿಂತಿತರಾಗಿದ್ದರು. ಆದರೆ ಇತರ ಬೈಕ್ ಸವಾರರ ಪ್ರೋತ್ಸಾಹದಿಂದ ಕೊನೆಗೂ ಈ ಬೈಕ್ ಅನ್ನು ಖರೀದಿಸಿದರು. ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650, ಈ ಸೆಗ್ ಮೆಂಟಿನಲ್ಲಿರುವ ಅಗ್ಗದ ಬೆಲೆಯ ಬೈಕ್ ಆಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನಲ್ಲಿ 650 ಸಿಸಿಯ ಟ್ವಿನ್ ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಬೈಕ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡಿನ ಗೇರ್‌ಬಾಕ್ಸ್ ಹೊಂದಿದೆ. ಈ ಬೈಕ್ ಅನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‌ಡೇಟ್‌ ಮಾಡಲಾಗಿದೆ.

ಮೂರು ರಾಯಲ್ ಎನ್‌ಫೀಲ್ಡ್ ಬೈಕುಗಳ ಒಡತಿ ಈ ಮಹಿಳಾ ಪೊಲೀಸ್ ಅಧಿಕಾರಿ

ರಾಯಲ್ ಎನ್‌ಫೀಲ್ಡ್ ಕಂಪನಿಯು ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಬಿಎಸ್ 6 ಅಪ್‌ಡೇಟ್‌ನ ನಂತರ ಮೊದಲ ಬಾರಿಗೆ ಈ ಬೈಕುಗಳ ಬೆಲೆಯನ್ನು ರೂ.1,836ಗಳಷ್ಟು ಹೆಚ್ಚಿಸಲಾಗಿದೆ.

Most Read Articles

Kannada
English summary
Lady police officer from Telangana buys Royal Enfield Interceptor 650. Read in Kannada.
Story first published: Thursday, September 17, 2020, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X