ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮದ್ಯೆ ಅಪಘಾತ

Written By:

ಇತ್ತೀಚಿಗೆ ಸೂಪರ್ ಕಾರುಗಳ ಅಪಘಾತಗಳು ಭಾರತದಲ್ಲಿ ಏರಿಕೆಯಾಗುತಿದ್ದು ಸೂಪರ್ ಕಾರುಗಳ ಮಾಲೀಕರು ಇಂತಹ ಅಪಘಾತದ ನಂತರ ಹೆಚ್ಚಿನ ಮಟ್ಟದ ತೊಂದರೆಗೆ ಸಿಲುಕುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಬೆಂಗಳೂರಿನಲ್ಲಿ ಇತ್ತೀಚಿಗೆ ನೆಡೆದ ಘಟನೆಯಲ್ಲಿ ಲಂಬೋರ್ಗಿನಿ ಕಾರು ಮತ್ತು ಇಂಡಿಕಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಕಾರಿನ ರಿಪೈರಿ ಮಾಡಿಸಲು ಐಷಾರಾಮಿ ಕಾರಿನ ಮಾಲೀಕ ಲಕ್ಷಾಂತರ ರೂ. ವ್ಯಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಲಂಬೋರ್ಗಿನಿ ಹರಾಕಾನ್ ಅಪಘಾತದ ಚಿತ್ರಗಳನ್ನು ಟೀಮ್ ಬಿಎಚ್‌ಪಿ ತನ್ನ ವೆಬ್ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಚಿತ್ರಗಳನ್ನು ಗಮನಿಸಿದರೆ ದುಬಾರಿ ಸೂಪರ್ ಕಾರಿನ ಮುಂಭಾಗದ ತುದಿಯು ತೀವ್ರವಾಗಿ ಹಾನಿಗೊಳಗಾಗಿದ್ದು, ಕಾರಿನ ಮಾಲೀಕ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎನ್ನಬಹುದು.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಕೇವಲ ಲಂಬೋರ್ಗಿನಿ ಕಾರಿನ ಚಿತ್ರಗಳು ಮಾತ್ರ ಲಭ್ಯವಾಗಿದ್ದು, ಟಾಟಾ ಇಂಡಿಕಾ ಕಾರಿನ ಚಿತ್ರಗಳು ಲಭ್ಯವಾಗಿಲ್ಲ, ಬಲ್ಲ ಮೂಲಗಳ ಪ್ರಕಾರ ಟಾಟಾ ಇಂಡಿಕಾ ಕಾರಿಗೂ ಕೊಂಚ ಮಟ್ಟಿನ ಹಾನಿಯಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಲಂಬೋರ್ಗಿನಿ ಕಾರಿನ ಮುಂಭಾಗದ ಬಂಪರ್ ತೀವ್ರ ಹಾನಿಯಾಗಿದ್ದು, ಕಾರಿನ ಅಲಾಯ್ ಚಕ್ರಗಳಿಗೂ ಕೂಡ ಈ ಪ್ರಭಾವ ಬೀರಿದೆ ಎನ್ನಬಹುದು.

ಬೆಂಗಳೂರಿನಲ್ಲಿ ಲಂಬೋರ್ಗಿನಿ ಮತ್ತು ಟಾಟಾ ಇಂಡಿಕಾ ಕಾರುಗಳ ಮಧ್ಯೆ ಅಪಘಾತ

ಅಪಘಾತದ ಪ್ರಭಾವದಿಂದಾಗಿ ಕಾರಿನ ಚಾಲಕನಿಗೆ ನೀಡಲಾಗುವ ಏರ್ ಬಗ್ಸ್ ಕೂಡ ತೊಂದರೆಗೊಳಗಾಗಿದ್ದು, ಹೆಚ್ಚು ಕಡಿಮೆ ಇದನ್ನು ಸರಿಪಡಿಸಲು ಬಹಳಷ್ಟು ಹಣ ಬೇಕಾಗಲಿದೆ ಎನ್ನಬಹುದು.

awdwd

ಆದರೆ ಅಪಘಾತದ ಕಾರಣ ಇಲ್ಲಿಯವರೆಗೂ ತಿಳಿದಿಲ್ಲ ಹಾಗು ಇದು ಯಾವ ಕಾರಿನ ಚಾಲಕನ ತಪ್ಪು ಎಂಬ ವಿಚಾರ ಕೂಡ ತಿಳಿಯದೆ ಇರುವುದು ಪರಿಸ್ಥಿತಿಯ ಅವಲೋಕನಕ್ಕೆ ತೊಂದರೆ ಉಂಟು ಮಾಡಿದೆ.

Read more on ಅಪಘಾತ accident
English summary
casd
Story first published: Thursday, June 8, 2017, 17:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark