ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಗುದ್ದಿದ ಲ್ಯಾಂಬೋರ್ಗಿನಿ: ದುಬಾರಿ ಕಾರಿಗಾದ ನಷ್ಟ ಎಷ್ಟು ಗೊತ್ತೇ?

ಭಾರತೀಯ ರಸ್ತೆಗಳಲ್ಲಿ ಲ್ಯಾಂಬೋರ್ಗಿನಿ, ರೋಲ್ಸ್‌ ರೋಯ್ಸ್‌ ನಂತಹ ದುಬಾರಿ ಕಾರುಗಳು ನೋಡ ಸಿಗುವುದೇ ಅಪರೂಪ. ಜೋರಾದ ಶಬ್ದ ಮಾಡುತ್ತಾ ಇಂತಹ ಕಾರುಗಳು ರಸ್ತೆಯಲ್ಲಿ ಹೋಗುವುದನ್ನು ನೋಡುವುದೇ ಚಂದ. ಹೀಗಿರುವಾಗ ಇಲ್ಲೊಂದು ಕಡೆ ಆಟೋ ರಿಕ್ಷಾ ಮತ್ತು ದುಬಾರಿ ಲ್ಯಾಂಬೋರ್ಗಿನಿ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.

ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿಯ ಜನಪ್ರಿಯ ಕಾರು ಮಾಡೆಲ್‌ ಆದ ಉರುಸ್‌ (Lamborghini Urus) ವೇಗವಾಗಿ ಚಲಿಸುವ ಸಂಧರ್ಭದಲ್ಲಿ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಗುದ್ದಿದ ಘಟನೆಯೊಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಚಿರಾಗ್‌ ದಿಲ್ಲಿ ಎಂಬಲ್ಲಿ ಘಟನೆ ಸಂಭವಿಸಿದ್ದು ಲ್ಯಾಂಬೋರ್ಗಿನಿ ಕಾರಿನ ಮಾಲೀಕನನ್ನು ರಾಜ್‌ಬಿರ್‌ ಸರ್ದಾನ (೨೧) ಎಂದು ಗುರುತಿಸಲಾಗಿದೆ.

Lamborghini Urus Crashes

ನಮಗೆ ತಿಳಿದಿರುವಂತೆ ಸೂಪರ್‌ ಕಾರುಗಳು ಇದರ ಹೈ ಪರ್ಫಾಮೆನ್ಸ್‌ ಮತ್ತು ಲಕ್ಷುರಿಗೆ ಹೆಸರುವಾಸಿಯಾದ ಕಾರುಗಳಾಗಿದೆ. ಹಾಗಾಗಿ ರಸ್ತೆಯಲ್ಲಿ ಸಾಧಾರಣವಾಗಿ ಎಲ್ಲಾ ಕಾರುಗಳು ಚಲಿಸುವುದಕ್ಕಿಂದ ಸ್ವಲ್ಪ ವೇಗದಲ್ಲೇ ಈ ಕಾರುಗಳನ್ನು ಚಲಾಯಿಸುತ್ತಾರೆ. ಹೀಗೆ ಮಾಡುವುದರಿಂದ ಭಾರತದಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ.

ಚಿರಾಗ್‌ ದಿಲ್ಲಿಯ ಫ್ಲೈ ಓವರ್‌ನಲ್ಲಿ ನಿಯಂತ್ರಣ ಕಳೆದುಕೊಂಡ ಲ್ಯಾಂಬೋರ್ಗಿನಿ ಚಾಲಕ ನೇರವಾಗಿ ಆಟೋ ರಿಕ್ಷಾಗೆ ಹೋಗಿ ಗುದ್ದಿದ್ದಾನೆ. ಇದರಿಂದ ಅಪಘಾತಕ್ಕೆ ಒಳಗಾದ ಆಟೋ ರಿಕ್ಷಾ ಓಡಿಸುತ್ತಿದ್ದ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕ ಇಬ್ಬರಿಗೂ ಗಾಯಗಳಾಗಿವೆ ಎಂದು ವರದಿಗಳ ಪ್ರಕಾರ ತಿಳಿದು ಬಂದಿದೆ.

Lamborghini Urus Crashes

ಇನ್ನು ಘಟನೆಗೆ ಸಂಭಂಧಿಸಿದಂತೆ ಲ್ಯಾಂಬೋರ್ಗಿನಿ ಉರುಸ್‌ ಚಲಾಯಿಸುತ್ತಿದ್ದ ಮಾಲೀಕ, ಒಂದು ಪಾರ್ಟಿ ಮುಗಿಸಿ ವಾಪಸ್‌ ಆಗುತ್ತಿದ್ದ ಸಂಧರ್ಭದಲ್ಲಿ ಈ ಯಡವಟ್ಟು ಮಾಡಿಕೊಂಡಿದ್ದಾನೆ. ಇನ್ನು ಇದೇ ಸಂಧರ್ಭದಲ್ಲಿ ಅಪಘಾತಕ್ಕೆ ಒಳಗಾದ ಆಟೋ ರಿಕ್ಷಾ ಚಾಲಕ ಮತ್ತು ಅದರ ಪ್ರಯಾಣಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಅಪಘಾತದ ಸಂಧರ್ಭದಲ್ಲಿ ಆಟೋ ರಿಕ್ಷಾ ಮತ್ತು ಲ್ಯಾಂಬೋರ್ಗಿನಿ ಉರುಸ್‌ ಎರಡೂ ವಾಹನಗಳು ಹಾನಿಗೊಳಗಾಗಿದ್ದು ಲ್ಯಾಂಬೋರ್ಗಿನಿ ಉರುಸ್‌ನ ಮುಂಭಾಗದ ಬಂಪರ್‌ಗೆ ಭಾರೀ ಹಾನಿಯಾಗಿದೆ. ಇನ್ನು ಈ ಕಾರಿನ ಎಡಭಾಗಕ್ಕೂ ಹಾನಿಯಾಗಿದ್ದು ಟೈರ್‌ನ ಬಳಿಯ ಭಾಗಗಳು ಸಂಪೂರ್ಣವಾಗಿ ಜಖಂ ಆಗಿರುವುದನ್ನು ನಾವು ಕಾಣಬಹುದು.

ಇನ್ನು ಆಟೋ ರಿಕ್ಷಾಗೂ ಸಹ ಹಾನಿಯಾಗಿದೆ. ಆಟೋ ರಿಕ್ಷಾದ ಹಿಂಭಾಗದ ಎಡ ಸೈಡ್‌ನಲ್ಲಿ ಜಖಂ ಆಗಿದೆ. ಆದರೆ ಎರಡಕ್ಕೂ ಹೋಲಿಸಿದರೆ ಲ್ಯಾಂಬೋರ್ಗಿನಿ ಉರುಸ್‌ಗೆ ನೇ ಹೆಚ್ಚಿನ ಹಾನಿಯಾಗಿರುವುದನ್ನು ನಾವು ಕಾಣಬಹುದು. ಇನ್ನು ಇದನ್ನೆಲ್ಲಾ ಸರಿ ಮಾಡಬೇಕಾದರೆ ಲ್ಯಾಂಬೋರ್ಗಿನಿಯ ಬಿಡಿ ಭಾಗಗಳು ದುಬಾರಿಯಾಗಿದ್ದು, ಲಕ್ಷಾಂತರ ರೂ ಖರ್ಚಾಗುವುದರಲ್ಲಿ ಸಂದೇಹವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 28, 2023, 11:06 [IST]
English summary
Lamborghini urus crashes into auto rickshaw and loss is huge
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+