50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಭಾರತದಲ್ಲಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಸಹ ಒಂದು. ಲ್ಯಾಂಡ್ ರೋವರ್ ಡಿಫೆಂಡರ್ ಸುದೀರ್ಘ ಇತಿಹಾಸವನ್ನು ಹೊಂದಿದೆ. ಈ ಎಸ್‌ಯುವಿಯ ಮೊದಲ ಸರಣಿಯನ್ನು ಸುಮಾರು 70 ವರ್ಷಗಳ ಹಿಂದೆ ಬಿಡುಗಡೆಗೊಳಿಸಲಾಯಿತು.

50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಸದ್ಯಕ್ಕೆ ಮೊದಲ ಸರಣಿಯ ಕೆಲವೇ ಕೆಲವು ಲ್ಯಾಂಡ್ ರೋವರ್ ಡಿಫೆಂಡರ್ ಗಳು ಭಾರತದಲ್ಲಿವೆ. ಭಾರತದ ಪೂರ್ವ ಭಾಗಗಳ ಪರ್ವತಗಳ ಮೇಲೆ ಈ ಸರಣಿಯ ಡಿಫೆಂಡರ್ ಎಸ್‌ಯುವಿಗಳನ್ನು ಕಾಣಬಹುದು. ಈ ಎಸ್‌ಯುವಿಯನ್ನು ಕೆಲವರು ಇನ್ನೂ ತಮ್ಮ ದೈನಂದಿನ ಕೆಲಸಗಳಿಗೆ ಬಳಸುತ್ತಿದ್ದಾರೆ. ಇತ್ತೀಚೆಗೆ ಲ್ಯಾಂಡ್ ರೋವರ್ ಡಿಫೆಂಡರ್ ಸರಣಿ 1ಕ್ಕೆ ಸಂಬಂಧಪಟ್ಟ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಈ ವೀಡಿಯೊದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಬಾಲಕಿಯೊಬ್ಬಳು ಚಾಲನೆ ಮಾಡುತ್ತಿದ್ದಾಳೆ. ತಾನು ಹಲವು ವರ್ಷಗಳಿಂದ ನಾಲ್ಕು ಚಕ್ರ ವಾಹನ ಹಾಗೂ ಬೈಕ್ ಗಳನ್ನು ಚಾಲನೆ ಮಾಡುತ್ತಿರುವುದಾಗಿ ಆ ಬಾಲಕಿ ತಿಳಿಸಿದ್ದಾಳೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಗಮನಿಸಬೇಕಾದ ಸಂಗತಿಯೆಂದರೆ ಈ ಲ್ಯಾಂಡ್ ರೋವರ್ ಡಿಫೆಂಡರ್ ತೀರಾ ಹಳೆಯದರಂತೆಯೂ ಇಲ್ಲ, ಹೊಸದರಂತೆಯೂ ಇಲ್ಲ. ಈ ಎಸ್‌ಯುವಿಯ ಹಲವು ಭಾಗಗಳಲ್ಲಿ ತುಕ್ಕು ಹಿಡಿದಿದೆ. ಈ ವಾಹನವು ತುಕ್ಕು ಹಿಡಿದಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಈ ಎಸ್‌ಯುವಿ ಮೊದಲು ಪೆಟ್ರೋಲ್ ಎಂಜಿನ್ ಹೊಂದಿತ್ತು. ಈಗ ಬೊಲೆರೊದ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ ಕೆಲವು ಮೂಲ ಫೀಚರ್ ಗಳನ್ನು ಮಾತ್ರ ಅಳವಡಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲ್ಯಾಂಡ್ ರೋವರ್, ಕಳೆದ ವರ್ಷವಷ್ಟೇ ಹೊಸ ಡಿಫೆಂಡರ್ ಎಸ್‌ಯುವಿಯನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕೆಲ ದಿನಗಳ ನಂತರ ದೇಶಿಯ ಮಾರುಕಟ್ಟೆಯಲ್ಲಿಯೂ ಹೊಸ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಈ ವೀಡಿಯೊದಲ್ಲಿರುವ ಡಿಫೆಂಡರ್, ಸರಣಿ 1ರ ಮೂಲ ಡಿಫೆಂಡರ್ ಗಿಂತ ಭಿನ್ನವಾಗಿದೆ.

50 ವರ್ಷ ಹಳೆಯ ಎಸ್‌ಯುವಿ ಚಾಲನೆ ಮಾಡಿದ ಬಾಲಕಿ

ಈ ಎಸ್‌ಯುವಿಯಲ್ಲಿ ಕೆಲವೇ ಫೀಚರ್ ಗಳನ್ನು ಅಳವಡಿಸಲಾಗಿದ್ದರೂ, ಅವುಗಳನ್ನು ದೂರದ ಸ್ಥಳಗಳಿಗೂ ತಲುಪುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ವಿಶ್ವ ಮಹಾ ಯುದ್ಧದ ಸಮಯದಲ್ಲಿ ಹೆಚ್ಚು ಬಳಸಲಾಗುತ್ತಿತ್ತು.

ಚಿತ್ರಕೃಪೆ : ಯುವ್ಲಾಗ್ಸ್ / ಯೂಟ್ಯೂಬ್

Most Read Articles

Kannada
English summary
Land rover defender series 1 suv driven by teenage girl. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X