1.6 ಕೋಟಿ ರೂ. ಬೆಲೆಯ ಐಷಾರಾಮಿ ಎಸ್‌ಯುವಿ ಬೆಂಕಿಗೆ ಆಹುತಿ: ಮಾಲೀಕ ಸೇಫ್?

ದುಬಾರಿ ಕಾರುಗಳನ್ನು ಖರೀದಿಸಿದ ಬಳಿಕ ಅವುಗಳನ್ನು ಜಾಗೃತವಾಗಿ ಕಾಪಾಡಿಕೊಳ್ಳುವುದೇ ಮಾಲೀಕರಿಗೆ ಸವಾಲಾಗಿರುತ್ತದೆ. ಅಂದರೆ ಅದಕ್ಕೆ ಗೀರುಗಳು ಅಥವಾ ಡ್ರೈವಿಂಗ್ ವೇಳೆ ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂದರ್ಭಗಳನ್ನು ತಪ್ಪಿಸುವಂತಹ ಕೆಲಸಗಳು ಸವಾಲಾಗಿರುತ್ತವೆ. ಇದಕ್ಕೆ ಕೆಲವರು ಸುಸ್ತಾದರೇ ಅಕಸ್ಮಾತ್ತಾಗಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡರೇ ಪರಿಸ್ಥಿತಿ ಏನೆಂಬುದನ್ನು ಒಮ್ಮೆ ಊಹಿಸಿ. ಇತ್ತೀಚೆಗೆ 1.6 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್‌ನಂತಹ ದುಬಾರಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಕಾರಿನ ಮಾಲೀಕರಿಗೆ ಯಾವುದೇ ಹಾನಿಯಾಗಿಲ್ಲ.

ಇತ್ತೀಚೆಗೆ ಗುಜರಾತ್‌ನಲ್ಲಿ ಈ ಘಟನೆ ನಡೆದಿದ್ದು, ಲ್ಯಾಂಡ್ ರೋವರ್ ಡಿಫೆಂಡರ್ ರಸ್ತೆಯ ಬದಿಯಲ್ಲಿ ಬೆಂಕಿಗೆ ಆಹುತಿಯಾಗಿದೆ. ಈ ಕುರಿತ ದೃಷ್ಯಗಳನ್ನು ತೋರಿಸುವ ವೀಡಿಯೊ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಬಿಳಿ ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ 110 (Land Rover Defender 110) ಎಸ್‌ಯುವಿ ರಸ್ತೆ ಬದಿಯಲ್ಲಿ ಉರಿಯುತ್ತಿರುವುದನ್ನು ನಾವು ಗಮನಿಸಬಹುದು.

land-rover-defender-suv-caught-fire-in-gujarat

ಬೆಂಕಿ ನಿರಂತರವಾಗಿ ಹೆಚ್ಚುತ್ತಿದ್ದ ವೇಳೆಗೆ ಸರಿಯಾಗಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಬೆಂಕಿ ಹರಡುವುದನ್ನು ತಪ್ಪಿಸಿದರು. ಆದ್ರೆ ದುರದೃಷ್ಟವಶಾತ್, ಅವರು ಡಿಫೆಂಡರ್ ಅನ್ನು ಉಳಿಸಲು ಸಾಧ್ಯವಾಗಲಿಲ್ಲ. ವೀಡಿಯೊದ ಪ್ರಕಾರ, ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ವಾಹನದೊಳಗೆ ಯಾರೂ ಇರಲಿಲ್ಲ. ಮಾಲೀಕರು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು ಎಂದು ವರದಿಯಾಗಿದೆ.

ಕಾರಣವೇನು?: ಸಾಮಾನ್ಯವಾಗಿ ದುಬಾರಿ ಕಾರುಗಳಲ್ಲಿ ಇಂತಹ ಬೆಂಕಿ ಅವಘಡಗಳು ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಒಂದು ವೇಳೆ ಕಾಣಿಸಿಕೊಂಡರೂ ಅದು ಆಫ್ಟರ್ ಮಾರ್ಕೆಟ್ ಮಾಡಿಫೀಕೇಷನ್ ಗಳಿಂದ ಇಂತಹ ಅವಘಡಗಳು ಸಂಭವಿಸಿರುವ ಹಲವು ಉದಾಹರಣೆಗಳು ಇವೆ. ಆದ್ರೆ ಲ್ಯಾಂಡ್ ರೋವರ್ ಡಿಫೆಂಡರ್ ನಂತಹ ಉನ್ನತ - ಮಟ್ಟದ ವಾಹನಗದಲ್ಲಿ ಯಾವುದೇ ಆಫ್ಟರ್ ಮಾರ್ಕೆಟ್ ಅಕ್ಸೆಸೊರಿ ಇರಲಿಲ್ಲ ಎಂದು ತಿಳಿದುಬಂದಿದೆ.

land-rover-defender-suv-caught-fire-in-gujarat

ಇಲ್ಲಿಯವರೆಗೆ, ಈ ಬೆಂಕಿಯ ಹಿಂದಿನ ನಿಜವಾದ ಕಾರಣ ತಿಳಿದುಬಂದಿಲ್ಲ. ಬೆಂಕಿಯು ಮುಖ್ಯವಾಗಿ ವಾಹನದ ಮಧ್ಯ ಭಾಗದಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಹಾಗಾಗಿ ಬಾನೆಟ್ ಅಡಿಯಲ್ಲಿ ಏನೂ ತಪ್ಪು ನಡೆದಿರಲು ಸಾಧ್ಯವಿಲ್ಲ. ಲ್ಯಾಂಡ್ ರೋವರ್ ಡಿಫೆಂಡರ್ ವಾಹನದೊಳಗಿನ ಯಾವುದಾದ್ರೂ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ರೀಕಾಲ್: ಕೆಲವು ತಿಂಗಳ ಹಿಂದೆ, ಲ್ಯಾಂಡ್ ರೋವರ್ ಮತ್ತು ಜಾಗ್ವಾರ್ ಎಸ್‌ಯುವಿಗಳನ್ನು ಅಮೆರಿಕಾದಲ್ಲಿ 2024 ರಲ್ಲಿ ತಯಾರಿಸಿದ ಮಾಡೆಲ್‌ಗಳನ್ನು ಕಂಪನಿಯು ಹಿಂತೆಗೆದುಕೊಂಡಿತ್ತು. ಏಕೆಂದರೆ ಇಲ್ಲಿ ತಿಳಿಸಿಲಾದ ನಿರ್ಧಿಷ್ಟ ಅವಧಿಯಲ್ಲಿ ತಯಾರಾಗಿರುವ ರೇಂಜ್ ರೋವರ್ ಕಾರುಗಳು ತೈಲ ಸೋರಿಕೆಯಿಂದಾಗಿ ಬೆಂಕಿ ಅವಘಡಗಳು ಸಂಭವಿಸಿದೆ ಎಂದು ಅಮೆರಿಕಾದಲ್ಲಿ ನಂಬಲಾಗಿತ್ತು, ಇದೇ ಕಾರಣಕ್ಕೆ ಒಟ್ಟು 2,128 ವಾಹನಗಳನ್ನು ಅಮೆರಿಕಾದಲ್ಲಿ ಹಿಂಪಡೆಯಲಾಗಿದೆ.

ಈ ವಾಹನಗಳಲ್ಲಿನ ಆಯಿಲ್ ಫಿಲ್ಟರ್ ಹೌಸಿಂಗ್‌ಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ, ಇವು ನಿರ್ದಿಷ್ಟತೆಗಳಿಗೆ ಅನುಗುಣವಾಗಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ತೈಲ ಸೋರಿಕೆಯಾಗುವ ಅಪಾಯವಿದೆ, ಇದು ಬೆಂಕಿಗೆ ಕಾರಣವಾಗುತ್ತದೆ ಎಂದು ಅಮೆರಿಕಾದಲ್ಲಿ ವರದಿಯಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಮಾಡೆಲ್‌ಗಳ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಲ್ಲಿಗೆ ಇಲ್ಲಿನ ಮಾದರಿಗಳಲ್ಲಿ ಯಾವುದೇ ಅಪಾಯವಿಲ್ಲ ಎಂದು ಹೇಳಬಹುದು, ಆದ್ರೂ ಇತ್ತೀಚಿನ ಅಪಾಯವು ರೇಂಜ್ ರೋವರ್ ಮಾಲೀಕರಲ್ಲಿ ಭಯ ಹುಟ್ಟಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 19, 2024, 11:29 [IST]
English summary
Land rover defender suv caught fire in gujarat viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+