100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

By Nagaraja

ಬರಿ ಒಂದು ಕಾರು ಅಬ್ಬಬ್ಬಾ ಅಂದರೆ ಎಷ್ಟು ಟನ್ ಭಾರವನ್ನು ಎಳೆದೊಯ್ಯುವ ಸಾಮರ್ಥ್ಯ ಹೊಂದಿರಬಹುದು? ಆದರೆ ಇಂದು ನಾವು ಪರಿಚಯಿಸುವ ಕಾರು ಬರೋಬ್ಬರಿ 100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರದ ವರೆಗೂ ಎಳೆದೊಯ್ಯುವ ಮೂಲಕ ಗಮನ ಸೆಳೆದಿದೆ.

ನಾವು ಮಾತನಾಡುತ್ತಿರುವುದು ಬೇರೆ ಯಾವ ಕಾರು ಅಲ್ಲ. ಪ್ರತಿಷ್ಠಿತ ರೇಂಜ್ ರೋವರ್ ಸಂಸ್ಥೆಯ ಐಕಾನಿಕ್ ಡಿಸ್ಕವರಿ ಸ್ಪೋರ್ಟ್ ಮಾಡೆಲ್ ಬಗ್ಗೆ. ಅದು ಕೂಡಾ ರೈಲು ಹಳಿಯಲ್ಲಿ ಇಂಹತದೊಂದು ಮಹತ್ತರ ಸಾಧನೆಯನ್ನು ಮಾಡಿ ತೋರಿಸಿದೆ. ಈ ಸಂಬಂಧ ರೋಚಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಹೇಳಿ ಕೇಳಿ 100 ಟನ್ ಭಾರದ ರೈಲನ್ನು ಎಳೆದಾಡಲು ಶಕ್ತಿಶಾಲಿ ಎಂಜಿನ್ ಗಳೇನು ಬಳಕೆ ಮಾಡಿರಲಿಲ್ಲ. ಬದಲಾಗಿ 2.0 ಲೀಟರ್ ಇಗ್ನೇನಿಯಂ ಡೀಸೆಲ್ ಎಂಜಿನ್ ಇದರಲ್ಲಿ ಜೋಡಣೆ ಮಾಡಲಾಗಿತ್ತು.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಇದರ ಶಕ್ತಿಶಾಲಿ ಎಂಜಿನ್ 430 ಎನ್ ಎಂ ತಿರುಗುಬದಲಲ್ಲಿ 180 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. ಹಾಗೆಯೇ ಒಂಬತ್ತು ಸ್ಪೀಡ್ ಗೇರ್ ಬಾಕ್ಸ್ ಬಹಳ ಸಲೀಸಾಗಿ ರೈಲನ್ನು ಎಳೆದಾಡಲು ಸಹಕರಿಸಿದೆ.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಡ್ರೈವರ್ ಸೀಟಿನಲ್ಲಿದ್ದ ಚಾಲಕ ಕಾರ್ಲ್ ರಿಚರ್ಡ್ ಗೆ ಹೆಚ್ಚು ಬೆವರು ಸುರಿಸುವ ಅಗತ್ಯವೇ ಬರಲಿಲ್ಲ. ಅಲ್ಲದೆ 2.5 ಟನ್ ಭಾರದ ಕಾರು 10 ಕೀ.ಮೀ. ಉದ್ದಕ್ಕೂ ಸ್ಥಿರವಾದ ಆವೇಗವನ್ನು ಕಾಪಾಡಿಕೊಂಡಿತ್ತು.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಸ್ವಿಜರ್ಲೆಂಡ್ ನಲ್ಲಿರುವ ಮ್ಯೂಸಿಯಂಬಾನ್ ಸ್ಟೇನಾಮ್ ರೈನ್ ನಲ್ಲಿರುವ ರೈಲು ಹಳಿಯಲ್ಲಿ ಈ ವಿನೂತನ ಸಾಧನೆ ಮಾಡಲಾಗಿದೆ.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಇದಕ್ಕಾಗಿ ಕಡಿಮೆ ವೇಗದಲ್ಲ ಎಲ್ಲ ಭೂಪ್ರದೇಶದಲ್ಲೂ ಕೆಲಸ ಮಾಡುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿನಲ್ಲಿರುವ ಆಲ್ ಟರೈನ್ ಪ್ರೊಗ್ರೇಸ್ ಕಂಟ್ರೋಲ್ ಸಿಸ್ಟಂಗೆ ಮೆಚ್ಚುಗೆ ವ್ಯಕ್ತಪಡಿಸಬೇಕು.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಕಾರಿನಲ್ಲಿ ತರಲಾಗಿರುವ ಏಕೈಕ ಬದಲಾವಣೆಯೆಂದರೆ ರೈಲು ಹಳಿಯಲ್ಲಿ ಸಂಚರಿಸುವ ನಿಟ್ಟಿನಲ್ಲಿ ಅಕ್ವಾರಿಯಸ್ ರೈಲ್ ಬೋರ್ಡ್ ಟೆಕ್ನಾಲಾಜೀಸ್ ನಿಂದ ಸಣ್ಣ ಚಕ್ರಗಳನ್ನು ಜೋಡಣೆ ಮಾಡಲಾಗಿತ್ತು.

100 ಟನ್ ಭಾರದ ರೈಲನ್ನೇ 10 ಕೀ.ಮೀ. ದೂರ ಎಳೆದೊಯ್ದ ಕಾರ್..!

ಒಟ್ಟಿನಲ್ಲಿ 10 ಕೀ.ಮೀ. ದೂರದ ಎಳೆದೂಯ್ದಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ತಾನ್ಯಾಕೆ ನೈಜ ಆಫ್ ರೋಡ್ ಗಾಡಿ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ.

ರೋಚಕ ವಿಡಿಯೋ ವೀಕ್ಷಿಸಿ


More from DriveSpark

Article Published On: Friday, June 17, 2016, 16:08 [IST]
English summary
Video: Land Rover Discovery Sport Pulls A 100-Ton Train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+