ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ನೆರೆಯ ಚೀನಾ ದೇಶದಲ್ಲಿ ಅಸಲಿಗಿಂತಲೂ ನಕಲಿ ವಸ್ತುಗಳೇ ಜಾಸ್ತಿಯಾಗಿ ಮಾರಾಟಕ್ಕೆ ಲಭ್ಯವಾಗುತ್ತದೆ. ಚೀನಾದಿಂದ ಉತ್ಪಾದಿಸುವ ಇಂತಹ ಉತ್ಪನ್ನಗಳು ವಿಶ್ವದ್ಯಾಂತ ಮಾರಾಟ ವಲಯವನ್ನು ಹರಡಿದೆ.

ಮೊಬೈಲ್ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ವ್ಯಾಪಿಸಿರುವ ನಕಲಿ ಉತ್ಪನ್ನಗಳ ಮಾರಾಟವು ಕಾರು ಲೋಕವನ್ನು ಸುಮ್ಮನೇ ಬಿಟ್ಟಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯೆಂಬಂತೆ ಚೀನಾದಲ್ಲಿ ನಕಲಿ ಮತ್ತು ಅಸಲಿ ರೇಂಜ್ ರೋವರ್ ಇವೊಕ್ ಕಾರುಗಳ ಮುಖಾಮುಖಿ ಢಿಕ್ಕಿಯಾದ ಪ್ರಸಂಗವು ಎದುರಾಗಿದೆ.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ಚೀನಾದಲ್ಲಿ ನೈಜ ರೇಂಜ್ ರೋವರ್ ಇವೊಕ್ ಮತ್ತು ಥೇಟ್ ಇದೇ ಕಾರಿನ ತರಹನೇ ಕಾಣಿಸುವ ತದ್ರೂಪ ಲ್ಯಾಂಡ್ ವಿಂಡ್ ಎಕ್ಸ್7 ಕಾರುಗಳು ಮುಖಾಮುಖಿ ಢಿಕ್ಕಿಯಾಗಿದೆ.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಎರಡು ಕಾರುಗಳು ಸಮಾನ ಕೆಂಪು ದೇಹ ಬಣ್ಣವನ್ನು ಹೊಂದಿದೆ. ಇದು ನೆರೆದಿದ್ದ ವಾಹನ ಪ್ರೇಮಿಗಳಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿತ್ತು.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ಚೀನಾದ ಚಾಂಗ್ ಖಿಂಗ್ ನಗರದಲ್ಲಿ ಘಟನೆ ನಡೆದಿದೆ. ಇಲ್ಲಿಯೂ ನಕಲಿ ರೇಂಜ್ ರೋವರ್ ಕಾರಿನ ಚಾಲಕನೇ ತಪ್ಪು ಎಸಗಿದ್ದಾನೆ ಎಂಬುದನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ಒಟ್ಟಿನಲ್ಲಿ ನಕಲಿ ರೇಂಜ್ ರೋವರ್ ತಪ್ಪಿನಿಂದಾಗಿ ಅಸಲಿ ರೇಂಜ್ ರೋವರ್ ಕಾರು ಶಿಕ್ಷೆ ಅನುಭವಿಸಬೇಕಾಗಿದೆ. ಎರಡು ಕಾರಿಗೂ ರಿಪೇರಿ ಕೆಲಸದ ಅಗತ್ಯವಿದೆ.

ಇವೊಕ್ vs ಲ್ಯಾಂಡ್ ವಿಂಡ್

ಇವೊಕ್ vs ಲ್ಯಾಂಡ್ ವಿಂಡ್

ಭಾರತೀಯ ಮೂಲದ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ನ ಐಕಾನಿಕ್ ರೇಂಜ್ ರೋವರ್ ಸಂಸ್ಥೆಯು ಅಗಾಧ ವಾಹನ ಪರಂಪರೆಯನ್ನು ಹೊಂದಿದ್ದು, ಚೀನಾದಲ್ಲಿ ನಕಲಿ ವಿನ್ಯಾಸಕ್ಕಾಗಿ ಲ್ಯಾಂಡ್ ವಿಂಡ್ ವಿರುದ್ಧ ನ್ಯಾಯಲದಲ್ಲಿ ದೂರನ್ನು ದಾಖಲಿಸಿಕೊಂಡಿದೆ.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ಬೀಜಿಂಗ್ ನ್ಯಾಯಾಲಯದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ದೂರು ದಾಖಲಿಸಿಕೊಂಡಿತ್ತು. ಆದರೆ ಆಶ್ಚರ್ಯದ ಸಂಗತಿ ಏನೆಂದರೆ ಎರಡು ಸಂಸ್ಥೆಗಳ ಹಕ್ಕುಪತ್ರಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಚೀನಾದಲ್ಲಿ ಅಸಲಿ ಮತ್ತು ನಕಲಿ ರೇಂಜ್ ರೋವರ್ ಕಾರುಗಳ ಮುಖಾಮುಖಿ

ನಕಲಿ ಹಾಗೂ ಅಸಲಿ ರೇಂಜ್ ರೋವರ್ ಕಾರುಗಳ ಬೆಲೆಗಳಲ್ಲೂ ಅಜ-ಗಜಾಂತರ ವ್ಯತ್ಯಾಸವಿದೆ. ಅಸಲಿ ರೇಂಜ್ ರೋವರ್ ಇವೊಕ್ ಚೀನಾದಲ್ಲಿ 68,000 ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸಿದ್ದರೆ ನಕಲಿ ಕಾರು ಬರಿ 19,600 ಅಮೆರಿಕನ್ ಡಾಲರ್ ರುಪಾಯಿಗಳಿಗೆ ನಿಮ್ಮ ಕೈ ಸೇರಲಿದೆ.

More from DriveSpark

Article Published On: Friday, August 5, 2016, 15:57 [IST]
English summary
The Landwind X7 Bumps Into Its Original Counterpart, The Range Rover Evoque
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+