ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಕಾನ್ಸಾಸ್ ಅಮೆರಿಕಾದ ಮಧ್ಯ ಪಶ್ಚಿಮ ರಾಜ್ಯಗಳಲ್ಲಿ ಒಂದಾಗಿದೆ. ಇತ್ತೀಚಿಗೆ ಈ ರಾಜ್ಯದ ವೇವರ್ಲಿ ಎಂಬ ಸಣ್ಣ ಪಟ್ಟಣದಲ್ಲಿರುವ ಹೆದ್ದಾರಿಯಲ್ಲಿ ವಾಹನಗಳು ಹಾದು ಹೋಗುತ್ತಿದ್ದವು. ಆ ವೇಳೆ ಮಳೆ ಬೀಳುತ್ತಿದ್ದ ಕಾರಣ ರಸ್ತೆಯಲ್ಲಿ ಹೆಚ್ಚಿನ ವಾಹನಗಳಿರಲಿಲ್ಲ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳೂ ನಿಧಾನವಾಗಿ ಚಲಿಸುತ್ತಿದ್ದವು. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರೊಂದಕ್ಕೆ ಮಿಂಚು ಬಂದು ಅಪ್ಪಳಿಸಿದೆ. ತಕ್ಷಣವೇ ಕಾರು ನಿಂತಿದೆ. ಮಿಂಚಿನ ಹೊಡೆತವು ಕಾರಿನ ಮೇಲೆ ಕಿಡಿ ಹೊತ್ತಿಸಿದೆ. ಇದನ್ನು ನೋಡಿದ ಇತರ ವಾಹನಗಳಲ್ಲಿ ಸಾಗುತ್ತಿದ್ದವರು ತಕ್ಷಣವೇ ಕಾರಿನ ಬಳಿ ಹೋಗಿ ಏನಾಯಿತು ಎಂದು ನೋಡಿದ್ದಾರೆ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಅದೃಷ್ಟವಶಾತ್ ಕಾರಿಗೆ ಹಾನಿಯಾಗಿರುವುದನ್ನು ಹೊರತುಪಡಿಸಿದರೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಕಾರಿನಲ್ಲಿ 8 ತಿಂಗಳಮಗು, 1.5 ವರ್ಷದ ಮಗು, 3 ವರ್ಷದ ಮಗು ಸೇರಿದಂತೆ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಮಿಂಚು ನೇರವಾಗಿ ಕಾರಿಗೆ ಅಪ್ಪಳಿಸಿದರೂ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲವೆಂದು ವರದಿಗಳು ತಿಳಿಸಿವೆ. ಈ ಘಟನೆ ಕಾರಿನ ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನಲ್ಲಿ ಅಳವಡಿಸಲಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಈ ಘಟನೆ ಜೂನ್ 25ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಇಡೀ ಕುಟುಂಬ ಭಯಭೀತವಾಗಿತ್ತು. ಕಾರಿಗೆ ಮಿಂಚು ಅಪ್ಪಳಿಸಿದ ತಕ್ಷಣ ಕಾರಿನಲ್ಲಿದ್ದ ಮಕ್ಕಳು ಚೆನ್ನಾಗಿದ್ದಾರೆಯೇ ಎಂದು ನೋಡಿದೆವು ಎಂದು ಕಾರು ಮಾಲೀಕರು ಹೇಳಿದ್ದಾರೆ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಮಿಂಚು ಕೇವಲ ಒಂದು ಸೆಕೆಂಡ್ ಮಾತ್ರ ಕಾರಿಗೆ ಅಪ್ಪಳಿಸಿ ಮಾಯವಾಗಿದೆ. ಆದರೆ ಮಿಂಚಿನ ಹೊಡೆತಕ್ಕೆ ಕಾರಿಗೆ ಹಾನಿಯಾಗಿದೆ. ಕಾರನ್ನು ಸ್ಥಳದಿಂದ ತೆಗೆಯದಷ್ಟು ಕಾರಿಗೆ ಹಾನಿಯಾಗಿತ್ತು.

ಎಷ್ಟರ ಮಟ್ಟಿಗೆ, ಅಲ್ಲಿಂದ ಕಾರನ್ನು ತೆಗೆದುಕೊಳ್ಳಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಮಿಂಚು ಕಾರಿನ ಎಂಜಿನ್'ಗೆ ಬಡಿದಿರಬೇಕು ಎಂದು ಹೇಳಲಾಗಿದೆ. ಕಾರು ಗೇರ್'ನಲ್ಲಿ ಸಿಲುಕಿಕೊಂಡಿತ್ತು. ಅದನ್ನು ನ್ಯೂಟ್ರಲ್ ಗೇರ್'ಗೆ ತರಲು ನಮಗೆ ಸಾಧ್ಯವಾಗಲಿಲ್ಲ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದ ಮಿಂಚು

ಆಗ ಕಾರನ್ನು ಆಫ್ ರೋಡ್'ಗೆ ಸರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲವೆಂದು ಕಾರ್ ಅನ್ನು ಚಾಲನೆ ಮಾಡುತ್ತಿದ್ದವರು ಹೇಳಿದ್ದಾರೆ. ಈ ಕಾರಣಕ್ಕೆ ಮಿಂಚು ಉಂಟಾಗುವ ಸಂದರ್ಭದಲ್ಲಿ ಕಾರಿನಲ್ಲಿ ಸಂಚರಿಸುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
Lightning strikes the car moving on highway in USA. Read in Kannada.
Story first published: Saturday, July 3, 2021, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X