'ಗೋಲ್ಡನ್ ಬಾಲ್' ಪುರಸ್ಕೃತ ಮೆಸ್ಸಿ ಕಾರು ಕ್ರೇಜ್

By Nagaraja

ಲಯನೆಲ್ ಮೆಸ್ಸಿ ನೇತೃತ್ವದ ಅರ್ಜೈಂಟೀನಾ ತಂಡವು ಬ್ರೆಜಿಲ್‌ನಲ್ಲಿ ನಡೆದ 2014 ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಪ್ರಬಲ ಜರ್ಮನಿ ವಿರುದ್ಧ ಸೋಲೊಪ್ಪಿಕೊಂಡಿರಬಹುದು. ಆದರೆ ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸತತ ನಾಲ್ಕು ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಅರ್ಹರಾಗಿರುವ ಮೆಸ್ಸಿ 'ಗೋಲ್ಡನ್ ಬಾಲ್' ಪ್ರಶಸ್ತಿಗೆ ಭಾಜನರಾಗಿದ್ದರು. ಒಟ್ಟು ನಾಲ್ಕು ಗೋಲುಗಳನ್ನು ಸಿಡಿಸಿದ್ದ ಮೆಸ್ಸಿ ಅತಿ ಹೆಚ್ಚು ಗೋಲು ಸಿಡಿಸಿದವರ ಪೈಕಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು.

ನೇಮಾರ್ ಕುರಿತಾಗಿನ ವಿಶೇಷ ಲೇಖನ

ಒಂದೆಡೆ ಮೆಸ್ಸಿ ಸಾಧನೆ ಬಗ್ಗೆ ಅಭಿಮಾನಿಗಳು ಹೆಮ್ಮೆಪಡುತ್ತಿದ್ದರೆ ಅತ್ತ ಫುಟ್ಬಾಲ್ ದಂತಕಥೆ ಅರ್ಜೈಂಟೀನಾದವರೇ ಆಗಿರುವ ಮರಡೋನಾ ಅವರು, ಮೆಸ್ಸಿ ಸರಣಿ ಶ್ರೇಷ್ಠ ಪುರಸ್ಕಾರಕ್ಕೆ ಅರ್ಹರಲ್ಲ ಎಂಬ ವಿವಾದತ್ಮಾಕ ಹೇಳಿಕೆ ಕೊಟ್ಟಿರುವುದು ಅಚ್ಚರಿ ಮೂಡಿಸಿತ್ತು. ಈ ಎಲ್ಲ ವಿಚಾರಗಳು ಒಂದೆಡೆಯಾದರೆ ಮೆಸ್ಸಿ ಅವರ ಸಾಧನೆಗಳನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ. ಅಂದ ಹಾಗೆ 27ರ ಹರೆಯದ ಮೆಸ್ಸಿ ಈಗಾಗಲೇ ಹಲವಾರು ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಅನೇಕ ದುಬಾರಿ ಕಾರುಗಳಿವೆ. ಈ ಲೇಖನ ಮುಖಾಂತರ ಮೆಸ್ಸಿ ಕಾರು ಸಂಗ್ರಹಗಳನ್ನು ನಿಮ್ಮ ಮುಂದಿಡಲಿದ್ದೇವೆ.

ಲಯನೆಲ್ ಮೆಸ್ಸಿ ಕಾರು ಸಂಗ್ರಹ

ಲಯನೆಲ್ ಮೆಸ್ಸಿ ಅವರ ಬಳಿ ಮಸೆರಟಿ, ಆಡಿ, ಫೆರಾರಿ ಸೇರಿದಂತೆ ಇನ್ನಿತರ ದುಬಾರಿ ಸ್ಪೋರ್ಟ್ಸ್ ಕಾರುಗಳಿವೆ. ಈ ಎಲ್ಲದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಮುಂದಿನ ಪುಟದತ್ತ ಕಣ್ಣಾಯಿಸಿರಿ.

ಮಸೆರಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್

ಮಸೆರಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್

ಲಯನೆಲ್ ಮೆಸ್ಸಿ ಬಳಿಯಿರುವ ಕಾರು ಸಂಗ್ರಹಗಳ ಪೈಕಿ ಮಸೆರಿಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್ ಪ್ರಮುಖವಾಗಿದೆ. ಇದು ಕೇವಲ 4.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಅಂತೆಯೇ ಗರಿಷ್ಠ 187 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ 4.6 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದೆ.

2011 ಟೊಯೊಟಾ ಪ್ರಯಾಸ್

2011 ಟೊಯೊಟಾ ಪ್ರಯಾಸ್

2011ರಲ್ಲಿ ಜಪಾನ್‌ನಲ್ಲಿ ನಡೆದ ಕ್ಲಬ್ ವಿಶ್ವಕಪ್‌ನಲ್ಲಿ ಅತ್ಯಮೂಲ್ಯ ಆಟಗಾರನಾಗಿ ಹೊರಹೊಮ್ಮಿದ್ದ ಮೆಸ್ಸಿ ಅವರಿಗೆ ಟೊಯೊಟಾ ಪ್ರಯಾಸ್ ಉಡುಗೊರೆಯಾಗಿ ಲಭಿಸಿತ್ತು. ಇದು ಫೋರ್ ಸಿಲಿಂಡರ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿದೆ.

ಲೆಕ್ಸಸ್ 4x4

ಲೆಕ್ಸಸ್ 4x4

ಲಯನೆಲ್ ಮೆಸ್ಸಿ ಬಳಿಯಿರುವ ಲೆಕ್ಸಸ್ 4x4, ಸ್ಪೋರ್ಟ್ ಟ್ಯೂನ್ಡ್ ಸಸ್ಪೆಷನ್, ಅಲ್ಯೂಮಿನಿಯಂ ಟ್ರಿಮ್, 18 ಇಂಚು ಅಲಾಯ್ ವೀಲ್ ಮತ್ತು ಲೆಥರ್ ಇಂಟಿರಿಯರ್ ಪಡೆದುಕೊಂಡಿದೆ. ಅಲ್ಲದೆ ಆಧುನಿಕ ನೇವಿಗೇಷನ್, ಪಾರ್ಕಿಂಗ್ ಅಸಿಸ್ಟನ್ಸ್, ಸನ್ ರೂಫ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲದೆ ನಿರ್ದಿಷ್ಠ ದೂರದ ವರೆಗೂ ಬರಿ ಎಲೆಕ್ಟ್ರಿಕ್‌ ಮೋಟಾರ್‌ನಲ್ಲಿ ಸಂಚರಿಸಲಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಲಿದೆ.

ಆಡಿ ಆರ್8 ಸ್ಪೈಡರ್

ಆಡಿ ಆರ್8 ಸ್ಪೈಡರ್

ಮೆಸ್ಸಿ ಬಳಿ ಎರಡು ಸೀಟಿನ ಆಡಿ8 ಸ್ಪೈಡರ್ ಸ್ಪೋರ್ಟ್ಸ್ ಕಾರು ಸಹ ಇದೆ. ಆಲ್ ವೀಲ್ ಡ್ರೈವ್ ತಂತ್ರಜ್ಞಾನದ ಈ ಕಾರು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಆಡಿ ಕ್ಯೂ7

ಆಡಿ ಕ್ಯೂ7

2005ರಲ್ಲಿ ನಡೆದ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಆಡಿ ಕ್ಯೂ7, 2007ರಲ್ಲಿ ಮಾರಾಟ ಆರಂಭಿಸಿತ್ತು. ಅಷ್ಟೇ ಅಲ್ಲದೆ ಸೈಡ್ ಅಸಿಸ್ಟ್, ವಾರ್ನಿಂಗ್ ಸಿಸ್ಟಂಗಳಂತಹ ವಿಶಿಷ್ಟಗಳನ್ನು ಪಡೆದ ಮೊದಲ ಆಡಿ ಮಾದರಿ ಎನಿಸಿಕೊಂಡಿತ್ತು.

ಡೊಡ್ಜ್ ಚಾರ್ಜರ್ ಎಸ್‌ಆರ್‌ಟಿ8

ಡೊಡ್ಜ್ ಚಾರ್ಜರ್ ಎಸ್‌ಆರ್‌ಟಿ8

ಡೊಡ್ಜ್ ಚಾರ್ಜರ್ ಎಸ್‌ಆರ್‌ಟಿ8 ಮೊದಲ ಬಾರಿಗೆ 2005 ನ್ಯೂಯಾರ್ಕ್ ಆಟೋ ಶೋದಲ್ಲಿ ಅನಾವರಣಗೊಂಡಿತ್ತು. ಇದು 425 ಅಶ್ವಶಕ್ತಿ ಉತ್ಪಾದಿಸುವ 6.1 ಲೀಟರ್ ಹೆಮಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಮಸೆರಟಿ ಗ್ರ್ಯಾನ್ ಟರಿಸ್ಮೊ ಎಸ್

ಮಸೆರಟಿ ಗ್ರ್ಯಾನ್ ಟರಿಸ್ಮೊ ಎಸ್

ಮಸೆರಟಿ ಗ್ರ್ಯಾನ್ ಟರಿಸ್ಮೊ ಎಸ್ ಕಾಂಪಾಕ್ಟ್ ಸ್ಪೋರ್ಟ್ಸ್ ಕಾರು 4.7 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 6 ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಇರಲಿದೆ. ಇದು ಪ್ರಭಾವತ್ಮಾಕ ಕೇವಲ 4.8 ಸೆಕೆಂಡುಗಳಲ್ಲೇ ಗಂಟೆಗೆ 0-60 ಮೈಲ್ ವೇಗದಲ್ಲಿ ಸಂಚರಿಸಲಿದೆ.

ಫೆರಾರಿ ಎಫ್430 ಸ್ಪೈಡರ್

ಫೆರಾರಿ ಎಫ್430 ಸ್ಪೈಡರ್

ಫೆರಾರಿ ಕಾರುಗಳನ್ನು ಇಷ್ಟಪಡದ ಸೆಲೆಬ್ರಿಟಿಗಳು ಯಾರು? ಲಯನೆಲ್ ಮೆಸ್ಸಿ ಕೂಡಾ ಇದರಿಂದ ಹೊರತಾಗಿಲ್ಲ. ಕೋಟಿ ಬೆಲೆ ಬಾಳುವ ಫೆರಾರಿ ಎಫ್430 ಸ್ಪೈಡರ್ ಹೊಂದಿರುವ ಮೆಸ್ಸಿ ಅವರ ಕಾರು ಕ್ರೇಜ್ ಇದರಿಂದಲೇ ವ್ಯಕ್ತವಾಗುತ್ತಿದೆ.

ಲಯನೆಲ್ ಮೆಸ್ಸಿ ಕಾರು ಸಂಗ್ರಹ

ಇದೀಗ ವಿಶ್ವದ ಪ್ರಖ್ಯಾತ ಫುಟ್ಬಾಲಿಗರ ಸಾಲಿನಲ್ಲಿ ಗುರುತಿಸಿಕೊಂಡಿರುವ ಲಯನೆಲ್ ಮೆಸ್ಸಿ ಅವರ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


More from DriveSpark

Article Published On: Tuesday, July 15, 2014, 11:20 [IST]
English summary
Here is the list of Lionel Messi’s Amazing Car Collection. Have a look at this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+