ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ವಿಶ್ವದ ಅತಿದೊಡ್ಡ ರೈಲ್ವೇ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ನಿತ್ಯ ಕೋಟ್ಯಾಂತರ ಜನರು ಭಾರತೀಯ ರೈಲ್ವೇ ಸೇವೆಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಲಕ್ಷಾಂತರ ಮಂದಿಗೆ ರೈಲ್ವೇ ಇಲಾಖೆ ಉದ್ಯೋಗ ಕಲ್ಪಿಸಿದೆ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಪ್ರಮುಖ ಸಾರ್ವಜನಿಕ ಸಾರಿಗೆಯಾಗಿರುವ ರೈಲು ಭಾರತದಲ್ಲಿ ಸಾವಿರಾರು ಕಿ.ಮೀ ಪ್ರಯಾಣಿಸಿ ಸಾರ್ವಜನಿಕರನ್ನು ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ಇದಕ್ಕಾಗಿ ಭಾರತದಲ್ಲಿ ಪ್ರತಿದಿನ ಸಾವಿರಾರು ರೈಲುಗಳು ಸಂಚರಿಸುತ್ತವೆ. ಪ್ರತಿದಿನ ಲಕ್ಷಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಾರೆ. ಈ ರೈಲುಗಳು ಇಲ್ಲದಿದ್ದರೆ ಭಾರತದ ಅಭಿವೃದ್ಧಿಯೇ ಪ್ರಶ್ನೆಯಾಗುತ್ತಿತ್ತು.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಆದರೆ ರೈಲ್ವೇ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವ ಹಲವು ಕಾನೂನುಗಳು ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಅದರಲ್ಲೂ ಮಹಿಳೆಯರು ರೈಲುಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ರೈಲ್ವೇ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳೋಣ...

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಭಾರತದಲ್ಲಿ ದೂರದ ಪ್ರಯಾಣ ಮಾಡುವ ರೈಲುಗಳು ಹೆಚ್ಚಾಗಿ ರಾತ್ರಿಯಲ್ಲಿ ಸಂಚರಿಸುತ್ತವೆ. ಇಂತಹ ರೈಲುಗಳಲ್ಲಿ ಸ್ಲೀಪರ್ ಕೋಚ್ ಸೌಲಭ್ಯವಿರುವುದರಿಂದ ಹೆಚ್ಚಿನ ಪ್ರಯಾಣಿಕರು ರಾತ್ರಿಯಲ್ಲಿ ಪ್ರಯಾಣಿಸಲು ಬಯಸುತ್ತಾರೆ. ರಾತ್ರಿ ಪ್ರಯಾಣ ಎಷ್ಟು ಮಧುರವೋ ಅಷ್ಟೇ ಅಪಾಯಕಾರಿ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ರೈಲು ನಿಲ್ದಾಣಗಳು ಸಾಮಾನ್ಯವಾಗಿ ನಗರದ ಹೊರ ವಲಯದಲ್ಲಿರುತ್ತವೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ರೈಲು ನಿಲ್ದಾಣಗಳಲ್ಲಿ ರಾತ್ರಿ ವೇಳೆ ಅಪರಾಧ ಕೃತ್ಯಗಳು ನಡೆದಿವೆ. ಹಾಗಾಗಿ ರಾತ್ರಿ ರೈಲಿನಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ತುಂಬಾ ಅಪಾಯಕಾರಿ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಈ ದೃಷ್ಟಿಯಿಂದ ಭಾರತೀಯ ರೈಲ್ವೇ ಕಾಯಿದೆ 1989 ಮಹಿಳೆಯರಿಗೆ ಹಲವಾರು ರಿಯಾಯಿತಿಗಳನ್ನು ಒದಗಿಸುತ್ತದೆ. ರೈಲಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ಪ್ರಯಾಣಿಸಲು ಕಾನೂನು ಏನು ಹೇಳುತ್ತದೆ ಎಂದರೆ, ಎಲ್ಲಾ ರೈಲುಗಳಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಪ್ರತ್ಯೇಕ ಕಂಪಾರ್ಟ್‌ಮೆಂಟ್ ಇರಲಿದೆ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಈ ಕಂಪಾರ್ಟ್‌ಮೆಂಟ್‌ಗೆ ಪುರುಷರಿಗೆ ಪ್ರವೇಶವಿಲ್ಲ. ಆ ಪೆಟ್ಟಿಗೆಯಲ್ಲಿ ಮಹಿಳೆಯರು ಮಾತ್ರ ಪ್ರಯಾಣಿಸಬೇಕು. ಆ ರೈಲಿನಲ್ಲಿ ಟಿಕೆಟ್ ಪರೀಕ್ಷಕ ಪುರುಷನಾಗಿದ್ದರೆ, ರೈಲು ನಿಲ್ದಾಣದಲ್ಲಿ ಮಹಿಳೆಯರು ರೈಲಿನಿಂದ ಇಳಿದಾಗ ಮಾತ್ರ ಟಿಕೆಟ್ ಪರಿಶೀಲಿಸಬೇಕು. ರೈಲು ಚಾಲನೆಯಲ್ಲಿರುವಾಗ ಮಹಿಳೆಯರ ಕಂಪಾರ್ಟ್‌ಮೆಂಟ್‌ನಲ್ಲಿ ಪುರುಷ ಟಿಕೆಟ್ ಪರಿವೀಕ್ಷಕರು ಇರಬಾರದು.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಭಾರತೀಯ ರೈಲ್ವೇ ಕಾಯಿದೆ, 1989 ರ ಸೆಕ್ಷನ್ 139 ರ ಪ್ರಕಾರ, ಒಬ್ಬ ಮಹಿಳೆ ರಾತ್ರಿಯಲ್ಲಿ ಒಬ್ಬಂಟಿಯಾಗಿ ಅಥವಾ ಮಗುವಿನೊಂದಿಗೆ ರೈಲಿನಲ್ಲಿ ಪುರುಷ ಸಂಗಾತಿಯಿಲ್ಲದೆ ಪ್ರಯಾಣಿಸಿದರೆ ಮತ್ತು ರೈಲು ಪ್ರಯಾಣಕ್ಕೆ ಟಿಕೆಟ್ ಇಲ್ಲದಿದ್ದರೆ, ಟಿಕೆಟ್ ಪರಿವೀಕ್ಷಕರು ಆ ಮಹಿಳೆಯನ್ನು ಇಳಿಯಲು ಆದೇಶಿಸುವಂತಿಲ್ಲ. ಜೊತೆಗೆ ಆ ಮಹಿಳೆ ರೈಲಿನಲ್ಲಿ ಟಿಕೆಟ್ ಇಲ್ಲದೆ ತನ್ನ ಗಮ್ಯಸ್ಥಾನಕ್ಕೆ ಹೋಗಬಹುದು.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಅದೇ ಸಮಯದಲ್ಲಿ, ಯಾವುದೇ ರೈಲು ನಿಲ್ದಾಣದಲ್ಲಿ ಮಹಿಳಾ ರೈಲ್ವೆ ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರೆ, ಟಿಕೆಟ್ ಇಲ್ಲದ ಅಪರಾಧಕ್ಕಾಗಿ ಮಹಿಳೆಯನ್ನು ಅವರಿಗೆ ಒಪ್ಪಿಸಬಹುದು. ಆದರೆ ರೈಲ್ವೆ ಮಹಿಳಾ ಪೊಲೀಸರು ರಾತ್ರಿ ವೇಳೆ ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ಉಲ್ಲೇಖಾರ್ಹ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಅದೇ ರೀತಿ, ಭಾರತೀಯ ರೈಲ್ವೇ ಕಾಯಿದೆಯ ಸೆಕ್ಷನ್ 311ರ ಅಡಿಯಲ್ಲಿ, ರೈಲಿನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಕಂಪಾರ್ಟ್‌ಮೆಂಟ್‌ ಹತ್ತಿದ ಭಾರತೀಯ ಸೈನಿಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಮುಂದಿನ ರೈಲು ನಿಲ್ದಾಣದಲ್ಲಿ ಇಳಿದು ಇನ್ನೊಂದು ಭೋಗಿ ಹತ್ತುವಂತೆ ಹೇಳಿದರೆ ಸಾಕು.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಭಾರತೀಯ ರೈಲ್ವೆ ಕಾಯಿದೆಯ ಸೆಕ್ಷನ್ 162ರ ಪ್ರಕಾರ, ಮಹಿಳೆಯರಿಗೆ ಮೀಸಲಾದ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ರೈಲುಗಳಲ್ಲಿ ಪ್ರಯಾಣಿಸಬಹುದು. ಗಂಡು ಮಕ್ಕಳು 12 ವರ್ಷ ವಯಸ್ಸಿನವರೆಗೆ ಪ್ರಯಾಣಿಸಬಹುದು. ಮಹಿಳೆಯರ ಪೆಟ್ಟಿಗೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರನ್ನು ಅನುಮತಿಸಲಾಗುವುದಿಲ್ಲ.

ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹಬುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!

ಇಷ್ಟು ಮಾತ್ರವಲ್ಲದೆ, ಪ್ರಸ್ತುತ ಭಾರತದಾದ್ಯಂತ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ 24 ಗಂಟೆಗಳ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುವಂತೆ ಆದೇಶಿಸಲಾಗಿದೆ. ಅದರಂತೆ ರೈಲು ನಿಲ್ದಾಣದಲ್ಲಿ ತಂಗುದಾಣವಿದ್ದರೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆದೇಶಿಸಲಾಗಿದೆ. ಇದನ್ನೂ ಮಹಿಳೆಯರ ರಕ್ಷಣೆಗಾಗಿ ಮಾಡಲಾಗಿದೆ.

Most Read Articles

Kannada
English summary
List of laws to protect women passengers in train travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X