ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಪೊಲೀಸ್ ಸ್ಟೇಷನ್ ಎನ್ನುವುದು ಹಲವು ಜನರಿಗೆ ಭಯಾನಕ ಅನುಭವ. ಸಾರ್ವಜನಿಕರು ಪೊಲೀಸರನ್ನು ಹಾಗೂ ಪೊಲೀಸ್ ಠಾಣೆಯಲ್ಲಿ ನಡೆಯುವ ಘಟನೆಗಳನ್ನು ಆಗಾಗ ಟೀಕಿಸುತ್ತಲೇ ಇರುತ್ತಾರೆ. ಹಲವೆಡೆ ಅಮಾನವೀಯ ಎನ್ನುವಂತಹ ಘಟನೆಗಳು ಸಹ ನಡೆಯುತ್ತವೆ.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಹಲವಾರು ಸಿನಿಮಾಗಳಲ್ಲಿ ಪೊಲೀಸ್ ಸ್ಟೇಷನ್‍‍ಗಳೆಂದರೆ ಲಂಚ ಹಾಗೂ ಭ್ರಷ್ಟಾಚಾರದ ಕೂಪಗಳೆಂಬಂತೆ ಚಿತ್ರಿಸಲಾಗಿದೆ. ಕೆಲವು ಸಿನಿಮಾಗಳನ್ನು ಹೊರತುಪಡಿಸಿ ಬಹುತೇಕ ಸಿನಿಮಾಗಳಲ್ಲಿ ಪೊಲೀಸರೆಂದರೆ ಕಟುಕರು ಎಂಬಂತೆ ತೋರಿಸಲಾಗಿದೆ.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಈ ಕಾರಣಗಳಿಗಾಗಿ ಪೊಲೀಸರು ಹಾಗೂ ಪೊಲೀಸ್ ಠಾಣೆಗಳೆಂದರೆ ಜನರು ಹೆದರುವ ಪರಿಸ್ಥಿತಿಯುಂಟಾಗಿದೆ. ಈ ಲೇಖನವನ್ನು ಓದಿದ ನಂತರ ಪೊಲೀಸ್ ಠಾಣೆಗಳೆಡೆಗೆ ಜನರು ಹೊಂದಿರುವ ಮನಸ್ಥಿತಿ ಬದಲಾಗಬಹುದು.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಜನರು ತಾವು ಭೇಟಿ ನೀಡುವ ಹೋಟೆಲ್, ಥಿಯೇಟರ್, ದೇವಸ್ಥಾನ ಮುಂತಾದ ಸ್ಥಳಗಳ ಫೋಟೊಗಳನ್ನು ಇಂಟರ್‍‍ನೆಟ್‍‍ನಲ್ಲಿ ಅಪ್‍‍ಲೋಡ್ ಮಾಡಿ ಅವುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆಯುವುದನ್ನು ನೋಡಿದ್ದೇವೆ.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಗೂಗಲ್ ರಿವ್ಯೂನಲ್ಲಿ ಜನರು ತಾವು ಭೇಟಿ ನೀಡಿದ ಸ್ಥಳದ, ಕಂಪನಿಯ ನೈಜ ಚಿತ್ರಣವನ್ನು ಬರೆಯಬಹುದು. ಆದರೆ ಇದೇ ಗೂಗಲ್ ರಿವ್ಯೂನಲ್ಲಿ ಚೆನ್ನೈ ಹೊರವಲಯದಲ್ಲಿರುವ ಟಿ 10 ತಿರುಮುಲೈವಾಯಿಲ್ ಪೊಲೀಸ್ ಠಾಣೆಯ ಬಗ್ಗೆ ಬರೆಯಲಾಗಿದೆ.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಈ ರಿವ್ಯೂ ಬಹುತೇಕ ಜನರ ಗಮನ ಸೆಳೆದಿದೆ. ಅಂದ ಹಾಗೆ ಲೋಕೇಶ್ವರನ್‍‍ರವರೇ ಟಿ 10 ಪೊಲೀಸ್ ಠಾಣೆಯ ಬಗ್ಗೆ ಗೂಗಲ್ ರಿವ್ಯೂನಲ್ಲಿ ತಮ್ಮ ಅನುಭವವನ್ನು ದಾಖಲಿಸಿರುವ ಭೂಪ. ಈ ರಿವ್ಯೂ ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರ ಗಮನವನ್ನು ತನ್ನತ್ತ ಸೆಳೆದಿದೆ.

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಲೋಕೇಶ್ವರನ್‍‍‍ರವರನ್ನು ಬೈಕ್ ಕಾಣೆಯಾದ ಪ್ರಕರಣದಲ್ಲಿ ವಿಚಾರಣೆಗಾಗಿ ಈ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಬಗ್ಗೆ ಅವರು ಗೂಗಲ್ ರಿವ್ಯೂನಲ್ಲಿ ಬರೆದಿದ್ದಾರೆ. ಈ ಪೊಲೀಸ್ ಠಾಣೆ ಮೇನ್ ರೋಡಿನಲ್ಲಿದ್ದು, ಸ್ವಚ್ಛತೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಪೊಲೀಸರೂ ಸಹ ಒಳ್ಳೆಯವರಾಗಿದ್ದು, ಯಾವುದೇ ತೊಂದರೆಯನ್ನು ನೀಡಿಲ್ಲ. ಸಂಬಂಧಪಟ್ಟ ದಾಖಲೆಗಳನ್ನು ನೀಡಿದ ನಂತರ ಯಾವುದೇ ಲಂಚ ಪಡೆಯದೇ ತಮ್ಮನ್ನು ಠಾಣೆಯಿಂದ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಕೊನೆಯಲ್ಲಿ ಅವರು ಹೇಳಿರುವ ಮಾತೆಂದರೆ, ಇದು ಜೀವಮಾನದಲ್ಲಿ ಒಮ್ಮೆ ನಡೆಯುವ ಘಟನೆ ಎಂದು. ಲೋಕೇಶ್ವರನ್‍‍ರವರು ಮಾತ್ರವಲ್ಲದೇ ಬೇರೆ 18 ಜನರೂ ಸಹ ಈ ಪೊಲೀಸ್ ಠಾಣೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಗೂಗಲ್ ರಿವ್ಯೂನಲ್ಲಿ ನೀಡಿದ್ದಾರೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಪೊಲೀಸ್ ಸ್ಟೇಷನ್ ಅನುಭವವನ್ನು ಬೆಸ್ಟ್ ಎಂದ ಭೂಪ..!

ಈ ಪೊಲೀಸ್ ಠಾಣೆಗೆ ಗೂಗಲ್ ರಿವ್ಯೂನಲ್ಲಿ 5ಕ್ಕೆ 3.7 ರೇಟಿಂಗ್ ನೀಡಲಾಗಿದೆ. 5 ಜನರು 5 ಸ್ಟಾರ್ ರೇಟಿಂಗ್ ನೀಡಿದ್ದರೆ, 4 ಜನರು 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಇದೇ ವೇಳೆ ಈ ಠಾಣೆಯ ಪೊಲೀಸರು ಲೋಕೇಶ್ವರನ್‍‍ರವರನ್ನು ಬಂಧಿಸಿಲ್ಲವೆಂದು ತಿಳಿಸಿದ್ದಾರೆ.

Most Read Articles

Kannada
English summary
Chennai bike rider Logeshwaran has shared his lock up experience about Thirumullaivoyal police station on google review - Read in Kannada
Story first published: Thursday, November 28, 2019, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X