ಮುದ್ದಿನ ನಾಯಿಯಿಂದ ಸರ್ಫಿಂಗ್ ಗಿನ್ನೆಸ್ ದಾಖಲೆ
ನಾವಿಂದು ವಿಶೇಷ ಶ್ವಾನ ದಾಖಲೆಯೊಂದರ ಬಗ್ಗೆ ಚರ್ಚಿಸಲಿದ್ದೇವೆ. ಅದೇನೆಂದರೆ ಅಮೆರಿಕದಲ್ಲಿ ಶ್ವಾನವೊಂದು ವಿನೂತನ ಸರ್ಫಿಂಗ್ ಗಿನ್ನೆಸ್ ದಾಖಲೆಯೊಂದನ್ನು ಬರೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಆಕರ್ಷಕ ಚಿತ್ರಗಳು ಹಾಗೂ ವೀಡಿಯೋವನ್ನು ಚಿತ್ರಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಸರ್ಫಿಂಗ್ ಅಂದರೆ ಕಡಲ ಕಿನಾರೆಯಲ್ಲಿ ಸಮುದ್ರದ ದೈತ್ಯ ಅಲೆಗಳ ನಡುವೆ ನಡೆಸುವ ಮೋಜಿನ ವಿಹಾರ ಕ್ರೀಡೆ. ಇದರಲ್ಲೀಗ ಪರಿಣತಿ ಸಾಧಿಸಿರುವ ನಾಯಿ ಸಹ ತನ್ನ ಸಾಧನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಸಮುದ್ರ ಅಲೆಗಳ ನಡುವೆ ಅತಿ ಹೆಚ್ಚು ದೂರ ಸರ್ಫಿಂಗ್ ಮಾಡಿದ ಗಿನ್ನೆಸ್ ದಾಖಲೆಗೀಗ ಅಬಿ ಗರ್ಲ್ ಎನ್ನುವ ಶ್ವಾನ ಪಾತ್ರವಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ಓಷಿಯನ್ ಬೀಚ್‌ನಲ್ಲಿ ಈ ದಾಖಲೆ ಬರೆಯಲಾಗಿದೆ.

ಲೈಫ್ ಜಾಕೆಟ್ ಧರಿಸಿದ ಬಳಿಕ ಸಮುದ್ರಕ್ಕಿಳಿದ ನಾಯಿಯು 351 ಅಡಿ ಹಾಗೂ ಎಂಟು ಇಂಚುಗಳಷ್ಟು ದೂರ ಸರ್ಫಿಂಗ್ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾದ ಕೆಲ್ಪಿಸ್ ಶ್ವಾನ ತಳಿಗೆ ಸೇರಿರುವ ನಾಯಿ ಇದಾಗಿದ್ದು, ಸ್ವಾಮಿನಿಷ್ಠೆ ಪ್ರೀತಿ ಪಾತ್ರವಾಗಿದೆ.

ಸರ್ಫಿಂಗ್ ಹೊರತಾಗಿ ಸ್ಕೈಡೈವಿಂಗ್ ನಲ್ಲೂ ಅಬಿ ನಿಸ್ಸೀಮವೆನಿಸಿದೆ ಎಂದು ಮಾಲಿಕ ಮೈಕಲ್ ಯುವೈ ಅಭಿಪ್ರಾಯಪಡುತ್ತಾರೆ.

ಒಟ್ಟಾರೆಯಾಗಿ ನಾಲ್ಕು ವರ್ಷಗಳ ಹಿಂದೆಯೇ ಈ ಸರ್ಫಿಂಗ್ ದಾಖಲೆಯನ್ನು ಬರೆದಿರುವುದು ಮಗದೊಂದು ವಿಶೇಷ. ಅಲ್ಲದೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದುಕೊಂಡಿದೆ.


Click it and Unblock the Notifications








