ನಿರುದ್ಯೋಗಿ ಟೆಕ್ಕಿಯ ಡೇರ್‌ಡೆವಿಲ್ ಡ್ರೈವ್: ಅರ್ಧ ಗಂಟೆ ರೈಲುಗಳನ್ನು ನಿಲ್ಲಿಸಿದ ಮಹಿಳೆ!

ಹೈದರಾಬಾದ್ ಬಳಿ ನಡೆದ ಆಘಾತಕಾರಿ ಘಟನೆಯೊಂದು ಎಲ್ಲರನ್ನು ಶಾಕ್‌ಗೆ ಗುರಿಮಾಡಿದೆ. ಕೆಲಸ ಕಳೆದುಕೊಂಡಿದ್ದ ಲಕ್ನೋದ ಮಹಿಳಾ ನಿರುದ್ಯೋಗಿ ಟೆಕ್ಕಿಯೊಬ್ಬರು ತಮ್ಮ ಕಾರನ್ನು ರೈಲ್ವೆ ಹಳಿಗಳ ಮೇಲೆ ಓಡಿಸಿದ್ದಾರೆ. ಇದರಿಂದಾಗಿ ಜೂನ್ 26, 2025 ರಂದು 45 ನಿಮಿಷಗಳ ಕಾಲ ರೈಲು ಸೇವೆಗಳಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾದ ಮಾಜಿ ಐಟಿ ಉದ್ಯೋಗಿ ಎಂದು ಗುರುತಿಸಲ್ಪಟ್ಟ ಮಹಿಳೆ, ತೆಲಂಗಾಣದ ನಾಗುಲಪಲ್ಲಿ ಮತ್ತು ಶಂಕರಪಲ್ಲಿ ನಡುವಿನ ಹಳಿಗಳ ಉದ್ದಕ್ಕೂ ಹಲವಾರು ಕಿಲೋಮೀಟರ್ ತಮ್ಮ ಕಾರನ್ನು ಓಡಿಸಿದ್ದಾರೆ.

ರೈಲ್ವೆ ಹಳಿಗಳ ಮೇಲೆ ಕಾರನ್ನು ಚಲಾಯಿಸಿ ಅವಾಂತರ ಸೃಷ್ಟಿಸಿದ್ದ ಮಹಿಳೆಯನ್ನು ಲಕ್ನೋ ಮೂಲದ ವೊಮಿಕಾ (ಅಥವಾ ರವಿಕಾ) ಸೋನಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಐಟಿ ಕೆಲಸವನ್ನು ಕಳೆದುಕೊಂಡಿದ್ದರು. ಅವರು ಮಾನಸಿಕವಾಗಿ ನೊಂದಿದ್ದರು, ಘಟನೆಯ ಸಮಯದಲ್ಲಿ ಮದ್ಯದ ಪ್ರಭಾವದಲ್ಲಿ ಇದ್ದಿರಬಹುದು ಎಂದು ವರದಿಯಾಗಿದೆ.

lucknow-techie-drives-suv-on-hyderabad-railway-tracks-trains-halted

ಆಗಿದ್ದೇನು?

ಬೆಳಿಗ್ಗೆ 7:30 ರ ಸುಮಾರಿಗೆ, ಮಹಿಳೆ ತನ್ನ ಕಿಯಾ ಸೋನೆಟ್ ಎಸ್‌ಯುವಿಯನ್ನು ಕೊಂಡಕಲ್‌ನಲ್ಲಿರುವ ರೈಲ್ವೆ ಹಳಿಗಳ ಮೇಲೆ ಓಡಿಸಿ, ಶಂಕರಪಲ್ಲಿ ಕಡೆಗೆ 6 ರಿಂದ 7 ಕಿ.ಮೀ ಮುಂದುವರೆದರು. ಸ್ಥಳೀಯರು ಮತ್ತು ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಪ್ರಯತ್ನಿಸಿದರು, ಆದರೆ ಆಕೆ ವೇಗ ಹೆಚ್ಚಿಸಿದ್ದರು. ಕಾರು ಸ್ಥಗಿತಗೊಂಡ ನಂತರ ಕಲ್ಲು ಮತ್ತು ಕಬ್ಬಿಣದ ರಾಡ್‌ನಿಂದ ಪಕ್ಕದಲ್ಲಿದ್ದವರಿಗೆ ಬೆದರಿಕೆ ಹಾಕಿದ್ದರು.

ರೈಲ್ವೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ನಾಗುಲಪಲ್ಲಿ ಮತ್ತು ಶಂಕರಪಲ್ಲಿ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಿ, ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಜನನಿಬಿಡ ಬೆಂಗಳೂರು - ಹೈದರಾಬಾದ್ ಮಾರ್ಗದಲ್ಲಿ ರೈಲುಗಳು 30 ರಿಂದ 45 ನಿಮಿಷಗಳ ಕಾಲ ವಿಳಂಬವಾಗಿವೆ ಎಂದು ರೈಲ್ವೆ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

lucknow-techie-drives-suv-on-hyderabad-railway-tracks-trains-halted

ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ವಶಕ್ಕೆ ಪಡೆದಿದ್ದಾರೆ. ನಂತರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಧಿಕಾರಿಗಳು ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಸಂಭಾವ್ಯ ಮಾದಕತೆಯ ಬಗ್ಗೆ ಶಂಕಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಹಿಳೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಕಾರು ಹಳಿಗಳನ್ನು ಹೇಗೆ ಪ್ರವೇಶಿಸಿತು ಮತ್ತು ಮಹಿಳೆಯ ಉದ್ದೇಶಗಳು - ಅದು ಆತ್ಮಹತ್ಯಾ ಪ್ರಯತ್ನವೋ ಅಥವಾ ಸಾಮಾಜಿಕ ಮಾಧ್ಯಮದ ಸಾಹಸವೋ ಎಂಬುದನ್ನು ಒಳಗೊಂಡಂತೆ ಪೊಲೀಸರು ಭದ್ರತಾ ಉಲ್ಲಂಘನೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಉಲ್ಲಂಘನೆಯ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಕಾರನ್ನು ಹಳಿಗಳಿಂದ ತೆಗೆದುಹಾಕಿದ ಬಳಿಕ, ಆ ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಿದ ನಂತರ ರೈಲು ಸೇವೆಗಳು ಪುನರಾರಂಭಗೊಂಡವು. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ಸಂಭವಿಸಿಲ್ಲ, ಆದರೆ ಈ ಘಟನೆಯು ತನಿಖೆಗಳನ್ನು ಪ್ರೇರೇಪಿಸಿದೆ. ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜಾಗರೂಕತೆ ಹೆಚ್ಚಿಸಲು ಕಾರಣವಾಗಿದೆ. ಹಳಿಗಳ ಮೇಲೆ SUV ಚಾಲನೆ ಮಾಡುತ್ತಿರುವ ವೀಡಿಯೊಗಳು ಈಗ ಫುಲ್ ವೈರಲ್ ಆಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 26, 2025, 18:10 [IST]
English summary
Lucknow techie drives suv on hyderabad railway tracks trains halted
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+