ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ: ಕಳ್ಳ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

ಐಷಾರಾಮಿ ವಾಹನಗಳು ಪ್ರಪಂಚದಾದ್ಯಂತದ ಕಳ್ಳರ ಟಾರ್ಗೆಟ್ ಆಗಿರುತ್ತದೆ. ಅದೇ ರೀತಿ ಕೆಲವು ವಾರಗಳ ಹಿಂದೆ ಲಂಡನ್‌ನಿಂದ 3,00,000 ಡಾಲರ್‌ ಅಂದರೆ ಸುಮಾರು 2.39 ಕೋಟಿ ಬೆಲೆಯ ಬೆಂಟ್ಲಿ ಕಾರ್ ಕಳುವಾಗಿತ್ತು. ಆ ಬೆಂಟ್ಲಿ ಕಾರು ಈಗ ಪಾಕಿಸ್ತಾನದ ಕರಾಚಿಯ ಬಂಗಲೆಯೊಂದರಲ್ಲಿ ಪತ್ತೆಯಾಗಿದೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ಗೆ ಲಂಡನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯಾದ ಯುಕೆ ನ್ಯಾಷನಲ್ ಕ್ರೈಮ್ ಏಜೆನ್ಸಿಯು ಲಂಡನ್‌ನಿಂದ ಕದ್ದ ಬೆಂಟ್ಲಿ ಕಾರು ಕರಾಚಿ ನಗರದ ಐಷಾರಾಮಿ ವಸತಿ ಪ್ರದೇಶವಾದ ಡಿಎಚ್‌ಎ ಪ್ರದೇಶದ ಮನೆಯೊಂದರ ಮುಂದೆ ಎಂದು ಮಾಹಿತಿಯನ್ನು ನೀಡುತ್ತಾರೆ. ಈ ಮಾಹಿತಿಯ ಆಧಾರದ ಮೇಲೆ ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ ದಾಳಿ ನಡೆಸಿತು. ಈ ವೇಳೆ ದುಬಾರಿ ಬೆಲೆಯ ಕದ್ದ ಬೆಂಟ್ಲಿ ಕಾರು ಪತ್ತೆಯಾಗಿದೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೆಂಟ್ಲಿಯಂತಹ ಐಷಾರಾಮಿ ಕಾರನ್ನು ಕದ್ದ ಖದೀಮರು ಅದರಲ್ಲಿರುವ ಟ್ರ್ಯಾಕರ್ ಸಿಸ್ಟಂ ಅನ್ನು ಆಫ್ ಮಾಡಿರಲಿಲ್ಲ. ಪರಿಣಾಮ ಈ ಐಷಾರಾಮಿ ಕಾರನ್ನು ಲಂಡನ್‌ ತನಿಖಾಧಿಕಾರಿಗಳಿಗೆ ಪತ್ತೆ ಮಾಡಲು ಸುಲಭವಾಯಿತು.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಈ ಐಷಾರಾಮಿ ಬೆಂಟ್ಲಿ ಕಾರಿನಲ್ಲಿದ್ದ ಅತ್ಯಾಧುನಿಕ ಟ್ರ್ಯಾಕಿಂಗ್‌ ತಂತ್ರಜ್ಞಾನದಿಂದ ಲಂಡನ್‌ ತನಿಖಾಧಿಕಾರಿಗಳು ನಿಖರವಾದ ಸ್ಥಳವನ್ನು ಪರಿಶೀಲಿಸಿದರು. ನಂತರ ಲಂಡನ್‌ ಅಧಿಕಾರಿಗಳು ವಾಹನವನ್ನು ಪಾಕಿಸ್ತಾನ ಸರ್ಕಾರಕ್ಕೆ ವಿವರಗಳನ್ನು ನೀಡಿದರು.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಕಾರು ಪಾಕಿಸ್ತಾನದ ರಿಜಿಸ್ಟ್ರೇಷನ್ ಮತ್ತು ನಂಬರ್ ಪ್ಲೇಟ್ ಹೊಂದಿರುವ ಬೆಂಟ್ಲಿಯನ್ನು ಪತ್ತೆಯಾಯ್ತು. ಹೆಚ್ಚಿನ ತಪಾಸಣೆಯ ನಂತರ, ಬೆಂಟ್ಲಿಯ ಚಾಸಿಸ್ ಸಂಖ್ಯೆಯು ಯುಕೆಯಿಂದ ಕದ್ದ ಬೆಂಟ್ಲಿಯ ಸಂಖ್ಯೆಗೆ ಹೊಂದಿಕೆಯಾಗುತ್ತಿದೆ ಎಂದು ಅವರು ಪತ್ತೆ ಮಾಡಿದರು.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ನಂತರ ಈ ಕಾರಿನ ಬಗ್ಗೆ ದಾಖಲೆಗಳನ್ನು ಕೇಳಿದಾಗ ನಿವಾಸದ ಮಾಲೀಕರು ಸಮರ್ಪಕ ದಾಖಲೆಗಳನ್ನು ನೀಡಲಿಲ್ಲ. ಹೀಗಾಗಿ ಪಾಕಿಸ್ತಾನಿ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡರು. ಆತನನ್ನು ಮತ್ತು ಆತನಿಗೆ ಅತ್ಯಾಧುನಿಕ ಕಾರನ್ನು ಮಾರಾಟ ಮಾಡಿದ ದಲ್ಲಾಳಿಯನ್ನೂ ಕೂಡ ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಈ ವಾಹನದ ನೋಂದಣಿ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಈ ವಾಹನಗಳ ಅಕ್ರಮ ಕಳ್ಳಸಾಗಣೆ ಮಾಫಿಯಾದಲ್ಲಿ ಭಾಗಿಯಾದವರು ಪೂರ್ವ ಯುರೋಪಿಯನ್ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ದಾಖಲೆಗಳನ್ನು ಬಳಸಿ ಈ ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕದ್ದ ವಾಹನದ ಕಳ್ಳಸಾಗಣೆಯಿಂದಾಗಿ 300 ಮಿಲಿಯನ್‌ಗೂ ಹೆಚ್ಚು ಪಾಕಿಸ್ತಾನಿ ರೂಪಾಯಿ ತೆರಿಗೆ ವಂಚಿಸಲಾಗಿದೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಅಂತರಾಷ್ಟ್ರೀಯ ಗಡಿಗಳಲ್ಲಿ ಇಂತಹ ಅನೇಕ ರಾಕೆಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕದ್ದ ಕಾರುಗಳನ್ನು ತುಂಡುಗಳಾಗಿ ಕತ್ತರಿಸಿ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಕದ್ದ ಅನೇಕ ಕಾರುಗಳು ನೇಪಾಳ ಮತ್ತು ಬಾಂಗ್ಲಾದೇಶದಂತಹ ನೆರೆಯ ದೇಶಗಳಲ್ಲಿ ಕೊನೆಗೊಳ್ಳುತ್ತವೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ದೂರದ ಲಂಡನ್ ನಲ್ಲಿ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಯಶಸ್ವಿಯಾಗಿದರು. ಆದರೆ ಕದ್ದ ಕಳ್ಳರಿಗೆ ಕಾರಿನಲ್ಲಿ ಟ್ರ್ಯಾಕರ್ ಇದೆ ಎಂದು ಗೊತ್ತಿರಲಿಲ್ಲ. ಕೊನೆಗೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಕಳ್ಳರು ಜೈಲು ಪಾಲಾಗಿದ್ದಾರೆ. ಇನ್ನು ಐಷಾರಾಮಿ ಬೆಂಟ್ಲಿ ಕಾರು ಮತ್ತೆ ಲಂಡನ್ ಮಾಲೀಕನನ್ನು ಸೇರಿದೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಇಂದು ತಂತ್ರಜ್ಞಾನಗಳು ಸಾಕಷ್ಟು ಮುಂದುವರೆದಿವೆ. ನೀವು ಕುಳಿದ ಜಾಗದಿಂದ ಟಿವಿ, ಫ್ಯಾನ್, ಎಸಿ ಮುಂತಾದ ಎಲೆಕ್ಟ್ರಿಕ್ ವಸ್ತುಗಳನ್ನು ನಿಯಂತ್ರಣ ಮಾಡಬಹುದು. ಇನ್ನು ಕದ್ದ ಮೊಬೈಲ್‌ನ್ನು ಕೂಡ ಟ್ರ್ಯಾಕ್‌ ಮಾಡಬಹುದು. ಇನ್ನು ಅನೇಕ ಆಧುನಿಕ-ದಿನದ ಕಾರುಗಳು ಫ್ಯಾಕ್ಟರಿ-ಅಳವಡಿಕೆಯ ಟ್ರ್ಯಾಕಿಂಗ್ ಸಾಧನಗಳನ್ನು ನೀಡುತ್ತವೆಯಾದರೂ, ಡ್ಯಾಶ್‌ಬೋರ್ಡ್ ಅಡಿಯಲ್ಲಿ ಮರೆಮಾಡಲಾಗಿರುವ ಹಾರ್ಡ್‌ವೈರ್ಡ್ ಟ್ರ್ಯಾಕರ್ ಅನ್ನು ಸ್ಥಾಪಿಸುವುದು ಯಾವಾಗಲೂ ಒಳ್ಳೆಯದು. ಕಾರಿನ ಇಸಿಯುಗೆ ವೈರ್ ಮಾಡಬಹುದಾದ ಇಂತಹ ಹಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ

ಅಂತಹ ಸಾಧನಗಳು ಎಂಜಿನ್ ಸ್ಟಾರ್ಟ್ ಆಗುವುದು, ಕಾರಿನ ವೇಗ ಮತ್ತು ಕಾರು ನಿರ್ದಿಷ್ಟ ಪ್ರದೇಶವನ್ನು ಮೀರಿ ಹೋದರೆ ಬಳಕೆದಾರರಿಗೆ ತಿಳಿಸುತ್ತದೆ. ಈ ಸಾಧನಗಳು ವಾಹನದ ಇಗ್ನಿಷನ್ ಅನ್ನು ದೂರದಿಂದಲೇ ಸ್ವಿಚ್ ಆಫ್ ಮಾಡಬಹುದು. ಈ ಕೆಲವು ಸಾಧನಗಳು ಎಂಜಿನ್ ಅನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಬಹುದು. ಮಾಲೀಕರು ಜಿಪಿಎಸ್ ಅನ್ನು ಸಹ ಹೊಂದಿಸಬಹುದು,

ಲಂಡನ್‌ನಲ್ಲಿ ಕದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ: ಕಳ್ಳ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

ವಾಹನವು ನಿರ್ದಿಷ್ಟ ಪ್ರದೇಶವನ್ನು ದಾಟಿದರೆ ಎಂಜಿನ್ ಅನ್ನು ಆಟೋಮ್ಯಾಟಿಕ್ ಆಗಿ ಆಫ್ ಮಾಡುತ್ತದೆ. ಈ ಸಾಧನಗಳು ಎಲ್ಲಾ ರೀತಿಯ ವಾಹನಗಳಿಗೆ ಲಭ್ಯವಿರುತ್ತವೆ ಮತ್ತು ಜಿಪಿಎಸ್ ಸಿಸ್ತಂ ಮತ್ತು ಇಂಟರ್ನೆಟ್ ಚಟುವಟಿಕೆಯನ್ನು ಇರಿಸಿಕೊಳ್ಳಲು ಚಂದಾದಾರಿಕೆ ಶುಲ್ಕವನ್ನು ನೀಡಬೇಕು. ಇಂತಹ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಕಾರು ಕಳ್ಳತನವಾದ ಸಂದರ್ಭದಲ್ಲಿ ಸುಲಭವಾಗಿ ಪತ್ತೆ ಮಾಡಬಹುದು.

Most Read Articles

Kannada
English summary
Luxury bently mulsanne car stolen from uk recovered in pakistan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X