ಸದ್ಗುರು ಓಡಿಸಿದ ದುಬಾರಿ ಕಾರು, ಬೈಕ್ ಗೆ ಜನ ಶಾಕ್: ಡುಕಾಟಿ ಟು ಲ್ಯಾಂಡ್‌ರೋವರ್ ಕಂಪ್ಲೀಟ್ ಲಿಸ್ಟ್!
ಜಗ್ಗಿ ವಾಸುದೇವ್ ಅಂದರೆ ಹಲವರಿಗೆ ತಿಳಿಯದು, ಆದರೆ ಸದ್ಗುರು (Sadguru) ಎಂಬ ಹೆಸರನ್ನು ಕೇಳದೆ ಇರುವವರು ನಮ್ಮ ನಿಮ ಮಧ್ಯೆ ತುಂಬಾ ಕಮ್ಮಿ ಎಂದೇ ಹೇಳಬಹುದು. ವಿಶ್ವದ ನಾನಾ ಕಡೆ ಜಗ್ಗಿ ವಾಸುದೇವ್ ಸದ್ಗುರು ಆಧ್ಯಾತ್ಮಿಕ ವಿಚಾರಗಳನ್ನು ಹಂಚುತ್ತಾ ಹಲವರ ನೆಚ್ಚಿನ ಗುರುವಾಗಿ ಬದಲಾಗಿದ್ದಾರೆ.
ಅವರು ಆಧ್ಯಾತ್ಮದ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದಾರೋ, ಅಷ್ಟೇ ವಾಹನಗಳ ಬಗ್ಗೆಯೂ ಗಮನ ಹರಿಸಿದ್ದಾರೆ. ಈಗಾಗಲೇ ಸದ್ಗುರು ತಮ್ಮ ದುಬಾರಿ ಬೈಕ್‌ನಲ್ಲಿ ಕಾಶ್ಮೀರ ಮುಗಿಸಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇಂದಿನ ಈ ಲೇಖನದಲ್ಲಿ ಅವರ ಬಳಿ ಯಾವುದೆಲ್ಲಾ ವಾಹನಗಳನ್ನು ಓಡಿಸಿದ್ದಾರೆ ಎಂಬುದನ್ನು ವಿವರವಾಗಿ ನೋಡೋಣ. ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಮರ್ಸಿಡಿಸ್ ಬೆಂಝ್ G63 AMG: ಈ ಹೊಸ ಮರ್ಸಿಡಿಸ್ ಎಎಂಜಿ ಜಿ63 (Mercedes-AMG G63) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.3 ಕೋಟಿಯಾಗಿದೆ. ಮರ್ಸಿಡಿಸ್ ಎಎಂಜಿ ಜಿ63 ಕಾರು ನಾಲ್ಕು ಲೀಟರ್ ಬೈಟರ್ಬೋ ವಿ೮ ಎಂಜಿನ್ ಬರುತ್ತಿದ್ದು ಸುಮಾರು 576 ಬಿಹೆಚ್‌ಪಿ ಪವರ್, 850 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಮರ್ಸಿಡಿಸ್ ಕಂಪನಿಯು ತನ್ನ ಇತರ ಎಎಂಜಿ ಕಾರುಗಳಲ್ಲಿಯೂ ಬಳಸಿದ್ದು, ಅತ್ಯಂತ ಪವರ್‌ಫುಲ್ ಎಂಜಿನ್‌ಗಳಲ್ಲಿ ಒಂದಾಗಿದೆ.
ಲ್ಯಾಂಡ್ ರೋವರ್ ಡಿಫೆಂಡರ್ 110: ಈ ಎಸ್‌ಯುವಿಯಲ್ಲಿ (Land Rover Defender) ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಂ, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್ ಸೆನ್ಸಿಂಗ್, ಡ್ರೈವರ್ ಕಂಡಿಷನ್ ಮಾನಿಟರಿಂಗ್, ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಫೀಚರ್'ಗಳನ್ನು ನೀಡಲಾಗಿದೆ. 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಸುಮಾರು 300 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಟೊಯೋಟಾ ಲ್ಯಾಂಡ್ ಕ್ರೂಸರ್: ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಇದರಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸತ್ತದೆ.
ಇನ್ನು ಭಾರತದಲ್ಲಿ ಕೇವಲ ಇದು 3.3-ಲೀಟರ್, V6 ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 305bhp ಪವರ್ ಮತ್ತು 700Nm ಟಾರ್ಕ್ ಉತ್ಪಾದಿಸುತ್ತದೆ. ಈ ಮೋಟಾರ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ದೊಂದಿಗೆ ಜೋಡಿಸಲಾಗಿದೆ. ಇನ್ನು ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರ್ಯಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ.

ಡುಕಾಟಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್: ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕಿನಲ್ಲಿ 803cc, L-ಟ್ವಿನ್ ಸಿಲಿಂಡರ್ ಮತ್ತು ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 75 ಬಿಹೆಚ್‍ಪಿ ಪವರ್ ಮತ್ತು 68 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 11 ಲಕ್ಷ ರೂ.ಗಳಿಂದ 13.7 ಲಕ್ಷ ರೂ.ಗಳವರೆಗೆ ಇದೆ. ಇದು ಎಕ್ಸ್ ಶೋರೂಂ ಬೆಲೆಹಯಾಗಿದ್ದು, ಆನ್-ರೋಡ್ ಬೆಲೆ ಇನ್ನೂ ಹೆಚ್ಚಾಗಲಿದೆ.
ಡುಕಾಟಿ ಮಲ್ಟಿಸ್ಟ್ರಾಡಾ ೧೨೬೦: ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ 1,158 ಸಿಸಿ, 90 ಡಿಗ್ರಿ ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 168 ಬಿಹೆಚ್ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ.

ಹೋಂಡಾ ಆಫ್ರಿಕಾ ಟ್ವಿನ್: ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನಲ್ಲಿ 1082.96 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 98 ಬಿಹೆಚ್ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 103 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಆಫ್ರಿಕಾ ಟ್ವಿನ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications