ಭಾರತದಲ್ಲಿ ಅನ್ಯಲೋಕದ ವಾಹನ? ನೆಟ್ಟಿಗರು ನೋಡಿ ಬೆಚ್ಚಿಬಿದ್ದ ಈ ವಾಹನ ಯಾವುದು ಗೊತ್ತಾ?

ವಾಹನಗಳ ನಿರ್ಮಾಣದಲ್ಲಿ ಅದರ ವಿನ್ಯಾಸವು ಪ್ರಮುಖ ಸಂಗತಿಯಾಗಿದೆ. ನೋಡುಗರನ್ನು ಮತ್ತು ಗ್ರಾಹಕರನ್ನು ಸೆಳೆಯುವ ಮೊದಲ ವಿಷಯವೆಂದರೆ ಅದರ ವಿನ್ಯಾಸ. ಅದಕ್ಕಾಗಿಯೇ ಕಾರು ಕಂಪನಿಗಳು ಡಿಸೈನಿಂಗ್‌ನಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಾರೆ. ವಿವಿಧ ವಿನ್ಯಾಸಗಳಲ್ಲಿ ಬರುವ ವಾಹನಗಳು ಸುಲಭವಾಗಿ ಜನರನ್ನು ಸೆಳೆಯುತ್ತದೆ. ಇಂತಹ ವಿಭಿನ್ನ ವಿನ್ಯಾಸದ ಕಾರಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ನಾವು ಯಾರೂ ನೋಡದ ವಿಶಿಷ್ಟ ವಾಹನವನ್ನು ನೋಡಬಹುದು. ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಣ್ಮನ ಸೆಳೆಯುವ ವಿನ್ಯಾಸದ ವಾಹನವೊಂದು ಕಾಣಿಸಿಕೊಂಡಿದೆ. ಈ ವಾಹನವನ್ನು ಕಂಡರೆ ತಕ್ಷಣಕ್ಕೆ ಇದು ಕಾರ್ ಅಥವಾ ಬೈಕ್ ಎಂಬ ಗೊಂದಲ ಕಾಡುತ್ತದೆ. ಇಂತಹ ವಾಹನವನ್ನು ಹಿಂದೆಂದೂ ನೋಡಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಹೇಳಿಕೊಂಡಿದ್ದಾರೆ. ಈ ಕಾರು ಯಾವುದು ಎಂದು ತಿಳಿಯಲು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದಾರೆ.

Lynx Lean Electric

ವಿಚಿತ್ರವಾಗಿ ವಿನ್ಯಾಸಗೊಳಿಸಲಾದ ವಾಹನಗಳ ಬಗ್ಗೆ ಕೇಳಲು ಆಸಕ್ತಿದಾಯಕ ಪ್ರಶ್ನೆಯೆಂದರೆ ಅದು ಕೆಲವು ರೀತಿಯ ಅನ್ಯಲೋಕದ ವಾಹನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದು ಅನ್ಯಲೋಕದ ವಾಹನವಲ್ಲ. ಇದು ಡ್ಯಾನಿಶ್ ಕಂಪನಿ ಲಿಂಕ್ಸ್ ಕಾರ್ಸ್‌ನ ವಾಹನವಾಗಿದೆ. ಮುಂಬೈನ ಟ್ರಾಫಿಕ್‌ನಲ್ಲಿ ಕಂಡುಬಂದ ವಾಹನದ ಮೇಲೆ ಸೋಷಿಯಲ್ ಮೀಡಿಯಾಗಳಲ್ಲಿ ಕಂಡು ಗಾಬರಿಯಾಗಿದ್ದಾರೆ. ಕೆಲವರು ಇದನ್ನು ನೈಜ-ಜೀವನದ ಬ್ಯಾಟ್‌ಮೊಬೈಲ್ ಎಂದು ಕರೆದರೆ, ಇತರರು ಇದನ್ನು ಅತ್ಯಾಧುನಿಕ ಇ-ರಿಕ್ಷಾ ಎಂದು ಕರೆಯುತ್ತಾರೆ.

ಆದರೆ ಇದು ಏನು? ಇದು ಲಿಂಕ್ಸ್ ಲೀನ್ ಎಲೆಕ್ಟ್ರಿಕ್ (Lynx Lean Electric) ತ್ರಿಚಕ್ರ ವಾಹನವಾಗಿದೆ. ಈ ಎಲೆಕ್ಟ್ರಿಕ್ ವಾಹನದ ಹೆಸರು ಲಿಂಕ್ಸ್ ಲೀನ್. ಸಾಂಪ್ರದಾಯಿಕ ಎಲೆಕ್ಟ್ರಿಕ್ ಕಾರುಗಳಂತೆ ಇದು ನಾಲ್ಕು ಚಕ್ರಗಳನ್ನು ಹೊಂದಿಲ್ಲ. ಬದಲಾಗಿ ಮೂರು ಚಕ್ರಗಳ ವಾಹನವಾಗಿದೆ. ಈ ಎಲೆಕ್ಟ್ರಿಕ್ ವಾಹನದ ಮುಂಭಾಗದಲ್ಲಿ ಎರಡು ಒಂದು ಚಕ್ರವನ್ನು ಮತ್ತು ಹಿಂಭಾಗದಲ್ಲಿ ಚಕ್ರಗಳನ್ನು ಹೊಂದಿದೆ. ಆದರೆ ಬಾಂದ್ರಾದಲ್ಲಿ ಕಂಡುಬಂದ ಈ ವಾಹನವು ಸಾಂಪ್ರದಾಯಿಕ ತ್ರಿಚಕ್ರ ವಾಹನದಂತಿಲ್ಲ.

Lynx Lean Electric

ಲಿಂಕ್ಸ್ ಲೀನ್ ಎಂಬ ಈ ವಿಧದ ಎಲೆಕ್ಟ್ರಿಕ್ ವಾಹನದಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು. ಲಿಂಕ್ಸ್ ಲೀನ್ ಎಲೆಕ್ಟ್ರಿಕ್ ಒಂದು ಟಿಲ್ಟಿಂಗ್ ವಾಹನವಾಗಿದೆ ಎಂಬುದು ಗಮನಾರ್ಹವಾಗಿದೆ. ಇದರರ್ಥ ಈ ಎಲೆಕ್ಟ್ರಿಕ್ ವಾಹನವು ಸಾಕಷ್ಟು ಇಳಿಜಾರುಗಳಲ್ಲಿ ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ವಾಹನ ಗರಿಷ್ಠ 45 ಡಿಗ್ರಿಗಳಷ್ಟು ಟಿಲ್ಟ್ ಕೋನದಲ್ಲಿ ಚಲಿಸಬಹುದು ಎಂದು ವರದಿಯಾಗಿದೆ.

ಹಾಗಾಗಿ ಈ ಎಲೆಕ್ಟ್ರಿಕ್ ವಾಹನವನ್ನು ಚಾಲನೆ ಮಾಡುವುದು ನಿಮಗೆ ರೋಮಾಂಚಕ ಚಾಲನೆಯ ಅನುಭವವನ್ನು ನೀಡುವುದು ಖಚಿತ. ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಲಿಂಕ್ಸ್ ಲೀನ್ ಎಲೆಕ್ಟ್ರಿಕ್ ಕೇವಲ ಏಳು ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಅದೇ ಸಮಯದಲ್ಲಿ, ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಟಾಪ್ ಸ್ಪೀಡ್ ಗಂಟೆಗೆ 169 ಕಿ.ಮೀ ಆಗಿದೆ.

Lynx Lean Electric

ಈ ಎಲೆಕ್ಟ್ರಿಕ್ ವಾಹನದಲ್ಲಿ 12 kWh ಲಿಥಿಯಂ-ಮ್ಯಾಂಗನೀಸ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ವಾಹನ 300,000 ಕಿಮೀ ಅಥವಾ 5 ವರ್ಷಗಳ ನಂತರ ಮೂಲ ಸಾಮರ್ಥ್ಯದ 80% ಬ್ಯಾಟರಿ ವಾರಂಟಿ ಗ್ಯಾರೆಂಟಿ ನೀಡುತ್ತದೆ. ಈ ಎಲೆಕ್ಟ್ರಿಕ್ ವಾಹನ ಹಲವಾರು ಗ್ರಾಹಕೀಕರಣ ಆಯ್ಕೆಗಳೊಂದಿಗೆ ಬರುತ್ತದೆ. ಇದರ ಬೆಲೆಯು 35,000 ಯುರೋಗಳು. ಭಾರತದಲ್ಲಿ ಈ ಇವಿ ಬೆಲೆಯು ಆಮದು ಸುಂಕದ ಜೊತೆಗೆ 31 ಲಕ್ಷ ರೂ. ಆಗಿದೆ.

ಈ ಲಿಂಕ್ಸ್ ಲೀನ್ ಎಲೆಕ್ಟ್ರಿಕ್ ವಾಹನದಲ್ಲಿ ಫುಲ್ ಲೆದರ್ ಇಂಟೀರಿಯರ್, ಮೆಟಾಲಿಕ್ ಎಕ್ಸ್ಟೀರಿಯರ್ ಪೇಂಟ್, ವಿಶೇಷ ಬಾಹ್ಯ ಬಣ್ಣಗಳು, ರಿಯರ್ ಸ್ಪಾಯ್ಲರ್, ವಿಭಿನ್ನ ವೀಲ್ ಪ್ಯಾಕ್‌ಗಳು, ಯುಎಸ್‌ಬಿ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ರೇಡಿಯೋ/ಸಿಡಿ/ಎಂಪಿ3 ಪ್ಲೇಯರ್ ಮತ್ತು ಡಿವಿಸಿ ಮೋಡ್ ಸೆಲೆಕ್ಟರ್ ಎಚ್‌ಯುಡಿ ಡಿಸ್ ಪ್ಲೇಯನ್ನು ಹೊಂದಿದೆ.

Lynx Lean Electric

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 24, 2024, 18:04 [IST]
English summary
Lynx lean electric spotted in mumbai details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+