ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಫಾಸ್ಟ್ ಅಂಡ್ ಫ್ಯೂರಿಯಸ್ ಸೇರಿದಂತೆ ಹಲವಾರು ಹಾಲಿವುಡ್ ಸಿನಿಮಾಗಳಲ್ಲಿ ಕಾರ್ ಸ್ಟಂಟ್ ದೃಶ್ಯಗಳನ್ನು ಹೆಚ್ಚಾಗಿ ಕಾಣಬಹುದು. ಆ ದೃಶ್ಯಗಳು ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ.

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ನಿಜ ಜೀವನದಲ್ಲಿ ಈ ರೀತಿಯ ಸಾಹಸಗಳನ್ನು ಮಾಡುವುದು ತುಂಬಾ ಅಪಾಯಕಾರಿ. ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ ಸಿನಿಮಾಗಳಲ್ಲಿದ್ದ ಇಂಧನ ಕಳ್ಳತನದ ದೃಶ್ಯವು ಬಹಳ ಜನಪ್ರಿಯವಾಗಿದೆ. ವೇಗವಾಗಿ ಚಲಿಸುವ ಟ್ರಕ್‌ನಿಂದ ಇಂಧನವನ್ನು ಕದಿಯುವ ಸಲುವಾಗಿ ಕಾರಿನಿಂದ ಟ್ರಕ್ ಮೇಲೆ ಹಾರುತ್ತಾರೆ. ಈ ದೃಶ್ಯವನ್ನು ನೆನಪಿಸುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಲಾರಿಯೊಂದು ಹೆಚ್ಚು ದಟ್ಟಣೆಯಿಲ್ಲದೆ ಹೆದ್ದಾರಿಯ ಮಧ್ಯದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬೈಕ್‌ನಿಂದ ಟ್ರಕ್‌ ಮೇಲೆ ಹಾರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ದೃಶ್ಯಗಳನ್ನು ಮತ್ತೊಂದು ಕಾರಿನಿಂದ ಸೆರೆ ಹಿಡಿಯಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಟ್ರಕ್ ಮೇಲೆ ಹಾರುವ ವ್ಯಕ್ತಿ ಬೋಲ್ಟ್ ಕಟ್ಟರ್ ನಿಂದ ಲಾಕ್ ಮುರಿದು ಕಂಟೇನರ್ ಬಾಗಿಲು ತೆರೆಯುತ್ತಾನೆ. ಈ ವಿಡಿಯೋದಲ್ಲಿ ಆತನ ಜೊತೆಗೆ ಇನ್ನಿಬ್ಬರು ಬೈಕಿನಲ್ಲಿ ಬರುತ್ತಿರುವುದನ್ನು ಕಾಣಬಹುದು. ಆ ಇಬ್ಬರು ಟ್ರಕ್ ಮೇಲೆ ಹಾರಿರುವ ವ್ಯಕ್ತಿಗೆ ನೆರವಾಗುತ್ತಾರೆ.

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಈ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಕಾರು ಬೈಕ್ ಪಕ್ಕದಲ್ಲಿ ಬಂದಾಗ ಬೈಕಿನಲ್ಲಿದ್ದವನು ನಿನ್ನ ಕೆಲಸ ನೋಡಿಕೊಂಡು ಹೋಗು ಎನ್ನುವಂತೆ ಸನ್ನೆ ಮಾಡುತ್ತಾನೆ. ಕಾರು ಚಾಲಕ ಮುಂದೆ ಹೋಗಿ ಲಾರಿ ಚಾಲಕನಿಗೆ ಕಳ್ಳತನ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ನಂತರ ಏನಾಯಿತು ಎಂಬುದರ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ವೀಡಿಯೊದಲ್ಲಿ ವರದಿಯಾದ ಮಾಹಿತಿಯ ಪ್ರಕಾರ, ಅವರು ಕಂಟೇನರ್‌ನಿಂದ ಅಡುಗೆ ಎಣ್ಣೆಯನ್ನು ಕದ್ದಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಕಂಟೇನರ್‌ಗಳನ್ನು ಸೀಲ್ ಮಾಡಿ ಸುರಕ್ಷಿತವಾಗಿ ಸಾಗಿಸಲಾಗುತ್ತದೆ. ಆದರೂ ಕಂಟೇನರ್‌ನ ಲಾಕ್ ಮುರಿಯುವುದನ್ನು ನೋಡಿದರೆ ಬೈಕ್‌ನಲ್ಲಿದ್ದವರಿಗೆ ಇವುಗಳನ್ನು ಮುರಿಯುವ ಅನುಭವವಿರುವಂತೆ ಕಾಣುತ್ತದೆ.

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ವ್ಯಕ್ತಿಯೊಬ್ಬ ಬೈಕಿನಿಂದ ಹಾರಿ ಟ್ರಕ್‌ ಅನ್ನು ದೋಚಲು ಯತ್ನಿಸಿದ ಮತ್ತೊಂದು ಘಟನೆ ವರದಿಯಾಗಿತ್ತು. ಚಲನಚಿತ್ರಗಳಲ್ಲಿ ಈ ರೀತಿಯ ಸ್ಟಂಟ್ ದೃಶ್ಯಗಳನ್ನು ಸರಿಯಾಗಿ ತರಬೇತಿ ಪಡೆದ ವೃತ್ತಿಪರ ಕಲಾವಿದರ ಮೂಲಕ ಮಾಡಿಸಲಾಗುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಜೊತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರಲಾಗುತ್ತದೆ. ಈ ವೀಡಿಯೊದಲ್ಲಿರುವ ದರೋಡೆಕೋರರು ಹೆಲ್ಮೆಟ್ ಕೂಡ ಧರಿಸಲಿಲ್ಲ. ಸಣ್ಣದೊಂದು ಅಚಾತುರ್ಯವು ಸಹ ಅವರ ಜೀವಕ್ಕೆ ಮುಳುವಾಗುವ ಸಾಧ್ಯತೆಗಳಿದ್ದವು.

ಇದು ರಸ್ತೆಯಲ್ಲಿ ಪ್ರಯಾಣಿಸುವ ಇತರ ವಾಹನ ಚಾಲಕರ ಮೇಲೂ ಪರಿಣಾಮ ಬೀರಬಹುದು. ತಾನು ಚಾಲನೆ ಮಾಡುತ್ತಿರುವ ಟ್ರಕ್ ಹಿಂದೆ ಏನಾಗುತ್ತಿದೆ ಎಂಬುದರ ಅರಿವು ಟ್ರಕ್ ಚಾಲಕನಿಗೆ ಇಲ್ಲದೇ ಇರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿದೇಶಗಳಲ್ಲಿ ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಟ್ರಕ್ ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಭಾರತದ ಹೆದ್ದಾರಿಗಳಲ್ಲಿ ಈ ರೀತಿಯ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ.

ಸಿನಿಮೀಯ ರೀತಿಯಲ್ಲಿ ಕಂಟೇನರ್ ಟ್ರಕ್ ದೋಚಿದ ಬೈಕ್ ಸವಾರರು

ಇಂತಹ ಘಟನೆಗಳಲ್ಲಿ ಬೈಕ್ ಚಾಲಕರು ಹೆಚ್ಚಾಗಿ ಭಾಗಿಯಾಗುತ್ತಾರೆ. ಹೆಚ್ಚು ದಟ್ಟಣೆ ಇಲ್ಲದ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ದರೋಡೆಕೋರರು ವಿಭಿನ್ನ ತಂತ್ರಗಳ ಮೂಲಕ ವಾಹನ ಚಾಲಕರನ್ನು ಸುಲಿಗೆ ಮಾಡುತ್ತಿದ್ದಾರೆ.

Most Read Articles

Kannada
English summary
Madhya Pradesh bikers robs truck in Hollywood movie style. Read in Kannada.
Story first published: Saturday, October 3, 2020, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X