ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಆ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ತಾವು ಚಲಿಸುತ್ತಿದ್ದ ಮಹೀಂದ್ರಾ ಬೊಲೆರೊ ಕಾರಿನ ಬಾಗಿಲು ತೆರೆಯುತ್ತಾರೆ.

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಇದರಿಂದ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿದ್ದ ಇಬ್ಬರು ಬಾಗಿಲಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಾರೆ. ಸಾಮಾನ್ಯವಾಗಿ ಕಾರಿನ ಬಾಗಿಲು ತೆರೆಯುವಾಗ ಹಿಂದೆ, ಮುಂದೆ ನೋಡಿದರೆ ಒಳ್ಳೆಯದು. ಇಲ್ಲದಿದ್ದರೆ ದಾರಿಯಲ್ಲಿ ಸಾಗುವವರು ಕಾರಿನ ಬಾಗಿಲಿಗೆ ಅಪ್ಪಳಿಸಿ ಈ ರೀತಿ ಕೆಳಗೆ ಬೀಳುವ ಸಾಧ್ಯತೆಗಳಿರುತ್ತವೆ.

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಆದರೆ ಈ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿ ಹಿಂದೆ ಮುಂದೆ ನೋಡದೆ ಕಾರಿನ ಬಾಗಿಲು ತೆರೆದಿದ್ದಾರೆ. ಬೈಕ್ ಕೆಳಗೆ ಬಿದ್ದ ನಂತರ ಬೈಕಿನ ಹಿಂಭಾಗದಲ್ಲಿದ್ದ ವ್ಯಕ್ತಿ ಕಾರಿನ ಬಳಿಗೆ ಸಾಗಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಆ ಪೊಲೀಸ್ ಅಧಿಕಾರಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕಾರಿನ ಹಿಂದಿನ ಬಾಗಿಲು ತೆರೆದು, ಅಲ್ಲಿದ್ದ ಲಾಠಿಯನ್ನು ಹೊರ ತೆಗೆದು ಹಲ್ಲೆ ಮಾಡಿದ್ದಾರೆ.

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಘಟನಾ ಸ್ಥಳಕ್ಕೆ ಇನ್ನೊಬ್ಬ ಪೊಲೀಸ್ ಅಧಿಕಾರಿ ಆಗಮಿಸುತ್ತಾರೆ. ಬೈಕ್‌ನಲ್ಲಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ ಅವರು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಪೊಲೀಸಪ್ಪನಿಂದ ಒದೆ ತಿನ್ನುತ್ತಿದ್ದ ವ್ಯಕ್ತಿ ಕೈ ಮುಗಿಯುತ್ತಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಅಷ್ಟಕ್ಕೂ ಸುಮ್ಮನಾಗದ ಪೊಲೀಸಪ್ಪ ಆ ವ್ಯಕ್ತಿಯನ್ನು ಎಳೆದೊಯ್ದು ತಮ್ಮ ಪೊಲೀಸ್ ವಾಹನದಲ್ಲಿ ಕೂರಿಸುತ್ತಾರೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಬೈಕಿನಲ್ಲಿ ಬಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಸಬ್ ಇನ್ಸ್‌ಪೆಕ್ಟರ್ ರನ್ನು ಅಮಾನತುಗೊಳಿಸಲಾಗಿದೆ.

ಇದು ಈ ಪೊಲೀಸ್ ಅಧಿಕಾರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬಹುತೇಕ ಮಂದಿ ಕಾರಿನಲ್ಲಿರುವ ಮೀರರ್ ಗಳನ್ನು ಗಮನಿಸದೇ ಹಿಂದೆ, ಮುಂದೆ ನೋಡದೇ ಕಾರಿನ ಬಾಗಿಲುಗಳನ್ನು ತೆರೆಯುತ್ತಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆದ ಕಾರಣ ಜನರು ಬಲಗಡೆ ಸ್ಟೀಯರಿಂಗ್ ಇರುವಾಗ ತಮ್ಮ ಬಲಗೈಗಳಿಂದ ಬಾಗಿಲುಗಳನ್ನು ತೆರೆಯುವ ಬದಲು ಎಡಗೈಗಳಿಂದ, ಎಡಗಡೆ ಸ್ಟೀಯರಿಂಗ್ ಇರುವಾಗ ತಮ್ಮ ಬಲಗೈನಿಂದ ಬಾಗಿಲುಗಳನ್ನು ತೆರೆಯುವುದು ಉತ್ತಮ. ಇದರಿಂದ ಬಾಗಿಲು ತೆರೆಯುವ ವೇಳೆ ಹಿಂದಕ್ಕೆ ತಿರುಗಿ ನೋಡಬಹುದು ಅಥವಾ ಮಿರರ್ ನಲ್ಲಿ ಹಿಂದೆ ಬರುತ್ತಿರುವವರನ್ನು ಕಾಣಬಹುದು.

ತಾನು ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಥಳಿಸಿದ ಸಬ್ ಇನ್ಸ್‌ಪೆಕ್ಟರ್

ಈ ಸರಳ ವಿಧಾನವು ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತದೆ. ಭಾರತದಂತಹ ದೇಶಗಳಲ್ಲಿ ಇಂತಹ ತಂತ್ರಗಳನ್ನು ಅನುಸರಿಸುವುದು ಬಹಳ ಮುಖ್ಯ. ಆದ್ದರಿಂದ ಕಾರಿನ ಬಾಗಿಲನ್ನು ಸುರಕ್ಷಿತವಾಗಿ ತೆರೆಯುವ ಈ ಸರಳ ವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.

Most Read Articles

Kannada
English summary
Madhya Pradesh Police beats hero splendor pillion rider for his mistake. Read in Kannada.
Story first published: Tuesday, November 10, 2020, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X