20 ಕೋಟಿ ರೂ. ಸಿನಿಮಾಗೆ 100 ಕೋಟಿ ಕಲೆಕ್ಷನ್: ನಿರ್ದೇಶಕನಿಗೆ 72 ಲಕ್ಷದ ಕಾರು ಗಿಫ್ಟ್!
ಭಾರತೀಯ ಚಿತ್ರರಂಗವೇ ಹಾಗೆ ನೋಡಿ, ಸಿನಿಮಾ ಯಶಸ್ಸು ಕಂಡರೆ ತಲೆ ಮೇಲೆ ಕೂರಿಸಿಕೊಳ್ಳುತ್ತಾರೆ. ಅದೇ ಸಿನಿಮಾ ಫ್ಲಾಪ್ ಆದ್ರೆ ಅದರ ಬಗ್ಗೆ ಮಾತನಾಡುವವರೇ ಇರೋದಿಲ್ಲ. ಹಿಟ್ ಆದ್ರೆ ಚಿತ್ರ ನಿರ್ದೇಶಕ ಸೇರಿದಂತೆ ನಟ-ನಟಿಯರಿಗೆ ದುಬಾರಿ ಉಡುಗೊರೆ ಕೊಡುವ ಸಾಂಪ್ರದಾಯವೂ ಇದೆ. ಇತ್ತೀಚೆಗೆ ತಮಿಳುನಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಗಳಿಸಿರುವ ಮಹಾರಾಜ ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಸಿನಿಮಾ ಈಗ OTT ಪ್ಲಾಟ್‌ಫಾರ್ಟ್ ಆಗಿರುವ ನೆಟ್‌ಫ್ಲಿಕ್ಸ್‌ನಲ್ಲೂ ಭರ್ಜರಿ ಪ್ರತಿಕ್ರಿಯೆ ಗಳಿಸಿರುವುದು ವಿಶೇಷ.
ವಿಜಯ್ ಸೇತುಪತಿ ಮಹಾರಾಜ ಚಿತ್ರದ ನಾಯಕ ನಟನಾಗಿದ್ದು, ಈ ಚಿತ್ರದ ಯಶಸ್ಸನ್ನು ಆಚರಿಸಲು ಚಿತ್ರದ ನಿರ್ಮಾಪಕರೊಂದಿಗೆ ಸೇರಿ ನಿರ್ದೇಶಕ ನಿತಿಲನ್ ಸ್ವಾಮಿನಾಥನ್ ಅವರಿಗೆ ಬಿಎಂಡಬ್ಲ್ಯು 5 ಸೀರಿಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಹಾರಾಜ ಸಿನಿಮಾ 100ನೇ ದಿನದ ವಾರ್ಷಿಕೋತ್ಸವವನ್ನು ಆಚರಿಸುವ ಭಾಗವಾಗಿ ನಿರ್ದೇಶಕರಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

ನಿಜಕ್ಕೆ ಈ ಸಿನಿಮಾ ಬಜೆಟ್ 20 ಕೋಟಿ ರೂ. ಆಗಿದ್ದು, ಹಾಕಿದ ಬಂಡವಾಳಕ್ಕೆ ದುಪ್ಪಟ್ಟು ಹಣ ಗಳಿಸಿ ಸದ್ದು ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂ. ಗಳಿಸಿದೆ. ಅಲ್ಲದೇ ತಮಿಳು ಚಿತ್ರರಂಗದಲ್ಲಿ 2024ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಸಿನಿಮಾಗಳಲ್ಲಿ ಮಹಾರಾಜ ಕೂಡ ಒಂದಾಗಿ ಗುರ್ತಿಸಿಕೊಂಡಿದೆ.
ನಟ ವಿಜಯ್ ಸೇತುಪತಿ ಮತ್ತು ನಿರ್ಮಾಪಕರಾದ ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸ್ವಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ಜೂನ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಸದ್ಯ ಮಹಾರಾಜ ಸಿನಿಮಾ ನೆಟ್‌ಫ್ಲಿಕ್ಸ್‌ಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

ಈ ಉಡುಗೊರೆ ಸಾಂಪ್ರದಾಯವು ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲ, ನಮ್ಮ ಸ್ಯಾಂಡಲ್‌ವುಡ್‌ನಲ್ಲೂ ರೂಢಿಯಲ್ಲಿದೆ. ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿರುವ, 'ಅಜಾಗ್ರತ' ಚಿತ್ರದ ನಿರ್ದೇಶಕರಿಗೂ ಕಾರಿನ ಉಡುಗೊರೆ ಸಿಕ್ಕಿದೆ. ಅದುಕೂಡ ಚಿತ್ರ ಬಿಡುಗಡೆ ಮುನ್ನವೇ ನಿರ್ಮಾಪಕರು ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ರವಿರಾಜ್ ನಿರ್ಮಾಣ ಹಾಗೂ ಎಂ.ಶಶಿಧರ್ ನಿರ್ದೇಶನದ 'ಅಜಾಗ್ರತ' ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದು ಚಿತ್ರದ ರಫ್ ಕಾಪಿ ಬಂದಿದೆ. ಇದನ್ನು ನೋಡಿದ ನಿರ್ಮಾಪಕರಿಗೆ ಚಿತ್ರ ತುಂಬಾ ಇಷ್ಟವಾಗಿದ್ದು, ನಿರ್ಮಾಪಕ ರವಿರಾಜ್ ನಿರ್ದೇಶಕ ಶಶಿಧರ್ ಅವರಿಗೆ ದುಬಾರಿ ಕಾರು ನೀಡುವ ಮೂಲಕ ಚಿತ್ರ ಉತ್ತಮವಾಗಿ ಮೂಡಿಬಂದಿರುವ ಖುಷಿಯನ್ನು ವ್ಯಕ್ತಪಡಿಸಿದ್ದರು.
ಬಿಎಂಡಬ್ಲ್ಯು 5 ಸೀರಿಸ್ ವಿಶೇಷತೆಗಳು: ಇದು ಸೆಡಾನ್ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಇದರ ಆರಂಭಿಕ ಬೆಲೆಯು ರೂ.72.90 (ಎಕ್ಸ್ ರೂಂ) ಲಕ್ಷಗಳಾಗಿದೆ. ಈ ಕಾರು ಭಾರತದಲ್ಲಿ 530Li M ಸ್ಪೋರ್ಟ್ ಟೈಟಾನಿಯಂ ಬ್ರಾಂಜ್ ಮತ್ತು 530Li M ಸ್ಪೋರ್ಟ್ ಅಲ್ಯೂಮಿನಿಯಂ ಟೈಟಾನೇಟೆಡ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ 5 ಸೀರಿಸ್ ಕಾರಿನಲ್ಲಿ ಡ್ರೈವಿಂಗ್ ಅಸಿಸ್ಟೆಂಟ್, ಪಾರ್ಕಿಂಗ್ ಅಸಿಸ್ಟೆಂಟ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್, ಕಾರ್ ಕನೆಕ್ಟಿವಿಟಿ ಫೀಚರ್, ಡಿಜಿಟಲ್ ಕೀ ಮತ್ತು ಬಿಎಂಡಬ್ಲ್ಯು ಲೈವ್ ಕಾಕ್ ಪಿಟ್‌ಪ್ಲಸ್ ಅನ್ನು ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟ್, ಡ್ಯುಯಲ್-ಟೋನ್ ಸೀಟುಗಳು ಮತ್ತು ವುಡ್ ಪ್ಯಾನಲ್‌ಗಳು ಸೇರಿವೆ.


Click it and Unblock the Notifications