ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಅನ್ನು ಜಾರಿಗೆ ತಂದಿದೆ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಮಹಾರಾಷ್ಟ್ರದಲ್ಲಿ ನಡೆಯುವ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗಷ್ಟೇ ಅಧಿಸೂಚನೆಯನ್ನು ಹೊರಡಿಸಿದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಅದರ ಪ್ರಕಾರ ಪರಿಷ್ಕೃತ ದಂಡದ ಮೊತ್ತವು ಡಿಸೆಂಬರ್ 1ರಿಂದ ಜಾರಿಗೆ ಬಂದಿದೆ. ಈ ಅಧಿಸೂಚನೆಯ ಪ್ರಕಾರ, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದರಿಂದ ಹಿಡಿದು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸುವವರೆಗಿನ ಅಪರಾಧಗಳಿಗೆ ಇನ್ನು ಮುಂದೆ ಹೆಚ್ಚು ದಂಡ ವಿಧಿಸಲಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸಿದರೆ ರೂ. 10,000 ದಂಡ ವಿಧಿಸಲಾಗುತ್ತದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಇನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 5,000 ದಂಡ ವಿಧಿಸಲಾಗುತ್ತದೆ. ಮತ್ತೊಂದೆಡೆ, ವಾಹನದ ವಿಮೆ ಇಲ್ಲದೇ ವಾಹನ ಚಾಲನೆ ಮಾಡಿದರೆ ನಂತರ ರೂ 2,000 ದಂಡ ವಿಧಿಸಲಾದರೆ, ವಾಹನಕ್ಕೆ ಯಾವುದೇ ಅನಧಿಕೃತ ಹಸ್ತಕ್ಷೇಪ ಕಂಡು ಬಂದರೆ ರೂ.1,000 ದಂಡ ವಿಧಿಸಲಾಗುತ್ತದೆ. ಇನ್ನು ರಸ್ತೆಗಳಲ್ಲಿ ರೇಸಿಂಗ್ ಮಾಡುವಾಗ ಸಿಕ್ಕಿಬಿದ್ದರೆ ಮೊದಲ ಬಾರಿ ರೂ. 5,000, ಎರಡನೇ ಬಾರಿ ರೂ. 10,000 ದಂಡ ವಿಧಿಸಲಾಗುತ್ತದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಜೊತೆಗೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದು. ರಿಫ್ಲೆಕ್ಟರ್‌, ಟೇಲ್ ಲ್ಯಾಂಪ್‌ ಅಥವಾ ಟರ್ನ್ ಇಂಡಿಕೇಟರ್‌ಗಳಿಲ್ಲದೆ ವಾಹನ ಚಾಲನೆ ಮಾಡಿದರೆ ರೂ. 1,000 ದಂಡ ವಿಧಿಸಲಾಗುತ್ತದೆ. ವಾಹನದಲ್ಲಿ ನಂಬರ್ ಪ್ಲೇಟ್ ತಪ್ಪಾಗಿ ಅಳವಡಿಸಿದ್ದರೆ ರೂ. 1,000 ದಂಡ ವಿಧಿಸಲಾಗುತ್ತದೆ. ಮತ್ತೊಂದೆಡೆ ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವಾಗ ಸಿಕ್ಕಿಬಿದ್ದವರು ರೂ. 500 ದಂಡ ತೆರಬೇಕಾಗುತ್ತದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಇವುಗಳ ಜೊತೆಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ರ ಅಡಿಯಲ್ಲಿ ಮೊದಲ ಅಪರಾಧಕ್ಕೆ ಕಾಂಪೌಂಡಿಂಗ್ ಶುಲ್ಕವನ್ನು ರೂ. 500 ಗಳಿಗೆ ಹೆಚ್ಚಿಸಲಾಗಿದೆ. ಎರಡನೇ ಹಾಗೂ ನಂತರದ ಅಪರಾಧಗಳಿಗೆ ರೂ. 1,500 ಸೇರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಮೋಟಾರು ವಾಹನ ಇಲಾಖೆ, ಟ್ರಾಫಿಕ್ ಪೊಲೀಸ್, ಹೆದ್ದಾರಿ ಪೊಲೀಸ್, ನಗರ ಪೊಲೀಸ್ ಹಾಗೂ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳ ಶ್ರೇಣಿಯನ್ನು ಉಲ್ಲೇಖಿಸಿದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಅವರು ಈ ಅಪರಾಧಗಳಿಗೆ ದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದ್ದಾರೆ. ನಿರ್ದಿಷ್ಟ ಶ್ರೇಣಿಗಿಂತ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ಸಂಚಾರ ನಿಯಮ ಪ್ರಕರಣಗಳಲ್ಲಿ ದಂಡ ವಿಧಿಸಬಹುದು. ಮೋಟಾರು ವಾಹನಗಳನ್ನು ಒಳಗೊಂಡ ಅಪರಾಧಗಳಿಗೆ, ಟ್ರಾಫಿಕ್ ಶಾಖೆಯನ್ನು ಹೊಂದಿರದ ಜಿಲ್ಲೆಗಳಲ್ಲಿ ಸಹಾಯಕ ಇನ್ಸ್‌ಪೆಕ್ಟರ್‌ಗಳು, ಟ್ರಾಫಿಕ್ ಪೊಲೀಸ್ ಹಾಗೂ ಹೆದ್ದಾರಿ ಪೊಲೀಸ್‌ನ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಅಥವಾ ಹೆಡ್ ಕಾನ್‌ಸ್ಟೆಬಲ್ ಶ್ರೇಣಿಯ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ದಂಡ ವಿಧಿಸಬಹುದು.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಾಲನೆ ಮಾಡುವಾಗ ತೋರುವ ನಿರ್ಲಕ್ಷ್ಯವೇ ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಪ್ರಮುಖ ಕಾರಣ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹಳೆ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ವಾಹನ ಸವಾರರಲ್ಲಿ ಶಿಸ್ತು ಮೂಡಿಸಿ, ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಈ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಗೆ ಬಂದು 27 ತಿಂಗಳು ಕಳೆದಿದೆ. ಈ 27 ತಿಂಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸುಮಾರು 8 ಕೋಟಿ ಚಲನ್‌ಗಳನ್ನು ವಿಧಿಸಲಾಗಿದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಗುರುವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಭಾಷಣದಲ್ಲಿ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 8 ಕೋಟಿ ಚಲನ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು. ಅಂದ ಹಾಗೆ ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್ 1ರಂದು ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿತ್ತು.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಸದನವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಈ ಅವಧಿಯಲ್ಲಿ 7.67 ಕೋಟಿಗೂ ಹೆಚ್ಚು ಸಂಚಾರ ಚಲನ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಪ್ರಮಾಣವು ಹೊಸ ಕಾಯಿದೆ ಜಾರಿಗೂ ಮುನ್ನ 1.96 ಕೋಟಿಗಳಾಗಿತ್ತು. ಟ್ರಾಫಿಕ್ ಚಲನ್ ಗಳ ಸಂಖ್ಯೆ 291% ನಷ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಸದನದಲ್ಲಿ ಮಾಹಿತಿ ಹಂಚಿಕೊಂಡ ಸಚಿವ ನಿತಿನ್ ಗಡ್ಕರಿರವರು 2019 ರಲ್ಲಿ 4,49,002 ಗಳಷ್ಟಿದ್ದ ರಸ್ತೆ ಅಪಘಾತಗಳ ಸಂಖ್ಯೆ 2020 ರಲ್ಲಿ 3,66,138 ಕ್ಕೆ ಇಳಿದಿದೆ ಎಂದು ಹೇಳಿದರು.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ರಸ್ತೆ ಸುರಕ್ಷತೆಯ ಸುಧಾರಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಣ, ಎಂಜಿನಿಯರಿಂಗ್ (ರಸ್ತೆ ಮತ್ತು ವಾಹನ ಎರಡೂ), ಜಾರಿ ಹಾಗೂ ತುರ್ತು ಆರೈಕೆಯ ಆಧಾರದ ಮೇಲೆ ಇಲಾಖೆಯು ಹಲವಾರು ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ 2019 ರ ಪ್ರಕಾರ ಸಂಚಾರ ನಿಯಮ ಉಲ್ಲಂಘಿಸುವವರಿಗೆ 10 ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ಹೊಸ ನಿಯಮದ ಪ್ರಕಾರ ದಂಡ ಮೊತ್ತವು ರೂ. 1,000 ಗಳಿಂದ ರೂ. 10,000 ಗಳಿಗೆ ಏರಿಕೆಯಾಗಿದೆ. ಹೆಲ್ಮೆಟ್ ಧರಿಸದಿದ್ದರೆ ವಿಧಿಸಲಾಗುತ್ತಿದ್ದ ದಂಡವನ್ನು ರೂ. 100 ಗಳಿಂದ ರೂ. 1000 ಗಳಿಗೆ ಹೆಚ್ಚಿಸಲಾಗಿದೆ.

ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ ಹೊಸ ಮೋಟಾರು ವಾಹನ ಕಾಯ್ದೆ

ಇದೇ ವೇಳೆ ಸಂಚಾರಿ ನಿಯಮವನ್ನು ಹೆಚ್ಚಾಗಿ ಉಲ್ಲಂಘಿಸಿ ಸಿಕ್ಕಿಬಿದ್ದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ರದ್ದುಗೊಳಿಸಲಾಗುತ್ತದೆ. ಕಾರು ಚಾಲನೆ ಮಾಡುವಾಗ ಸೀಟ್‌ಬೆಲ್ಟ್ ಧರಿಸದಿದ್ದರೆ ಈಗ ರೂ. 1,000 ದಂಡ ವಿಧಿಸಲಾಗುತ್ತದೆ. ಅದೇ ವೇಳೆ ಅತಿ ವೇಗದಲ್ಲಿ ವಾಹನ ಚಲಾಯಿಸುವವರಿಗೆ ರೂ. 500 ಗಳ ಬದಲು ರೂ. 5000 ಗಳ ದಂಡ ವಿಧಿಸಲಾಗುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

More from DriveSpark

Article Published On: Sunday, December 5, 2021, 10:55 [IST]
English summary
Maharashtra government implements new motor vehicle act in the state details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+