ಪೊಲೀಸ್ ಇಲಾಖೆಗೂ ಎಂಟ್ರಿ ಕೊಟ್ಟ ಹೆಮ್ಮೆಯ ಮಹೀಂದ್ರಾ XUV700

ಭಾರತದಲ್ಲಿ ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಹಲವಾರು ಮಹೀಂದ್ರಾ ವಾಹನಗಳಿವೆ. ಈಗಾಗಲೇ ಮಹೀಂದ್ರಾ TUV300 ಅನ್ನು ಪೆಟ್ರೋಲ್ ಕಾರುಗಳಾಗಿ ಬಳಸಿಕೊಳ್ಳುತ್ತಿರುವ ಮುಂಬೈ ಪೊಲೀಸರು ಹೊಸ XUV700 ಎಸ್‍ಯುವಿಗಳನ್ನು ಇಲಾಖೆಗೆ ಸೇರಿಸಲಾಗಿದೆ. ಈ ಮಹೀಂದ್ರಾ XUV700 ಭಾರತದಲ್ಲಿ ಭಾರೀ ಬೇಡಿಕೆಯ ಮಾದರಿಯಾಗಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಹೀಂದ್ರಾ XUV700 (Mahindra XUV700) ಸೇರಿದಂತೆ ಮಹಾರಾಷ್ಟ್ರದಲ್ಲಿ ಹಲವಾರು ಹೊಸ ಪೊಲೀಸ್ ವಾಹನಗಳನ್ನು ಫ್ಲ್ಯಾಗ್ ಆಫ್ ಮಾಡಿದ್ದಾರೆ. ಹೊಸ ಪೊಲೀಸ್ ವಾಹನಗಳಲ್ಲಿ ಕಂಡುಬರುವ ಹೊಸ ಮಹೀಂದ್ರಾ XUV700 ಗುರುತು ಮಾಡಿದ ವಾಹನವಾಗಿ ಕಂಡುಬರುವುದಿಲ್ಲ. ಇದು ಕ್ಲೀನ್ ಆಗಿ ಯಾವುದೇ ಪೊಲೀಸ್ ಲಾಂಛನವನ್ನು ಹೊಂದಿಲ್ಲ. ಆದರೆ, ಕಾರಿನ ರೂಫ್ ಮೇಲೆ ಸ್ಟ್ರೋಬ್ ಲೈಟ್ ಇದೆ.

Mahindra XUV700

ವಾಹನವು ನೇರವಾಗಿ ಶೋರೂಮ್‌ನಿಂದ ಫ್ಲ್ಯಾಗ್‌ಆಫ್ ಸಮಾರಂಭಕ್ಕೆ ಚಾಲನೆ ಮಾಡಲ್ಪಟ್ಟಿರುವ ಸಾಧ್ಯತೆಯಿದೆ ಮತ್ತು ನಂತರ ಪ್ರಮಾಣಿತ ಪೊಲೀಸ್ ಗಸ್ತು ಕಾರ್ ಗುರುತುಗಳನ್ನು ಸ್ವೀಕರಿಸುತ್ತದೆ. ಸೇರ್ಪಡೆಗೊಂಡ ವಾಹನಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ವಿವರಗಳಿಲ್ಲದಿದ್ದರೂ, ಆರಂಭದಲ್ಲಿ ಒಂದು ವಾಹನವನ್ನು ಮಾತ್ರ ವಿತರಿಸಲಾಗಿದೆ. ನಂತರದಲ್ಲಿ ಹೆಚ್ಚಿನ ವಾಹನಗಳನ್ನು ಸೇರಿಸಬಹುದು. ಮಹೀಂದ್ರಾ XUV700 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಸಾಕಷ್ಟು ಕಾಯುವ ಅವಧಿಯನ್ನು ಹೊಂದಿದೆ.

ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪ್ರಮುಖವಾಗಿ ಡೀಸೆಲ್ ಎಂಜಿನ್ ಚಾಲಿತ ರೂಪಾಂತರ ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ. ಈ ಎಸ್‍ಯುವಿಯನ್ನು 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 200 hp ಪವರ್, 380 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Mahindra XUV700

ಇದರ ಜೊತೆಗೆ ಮಹೀಂದ್ರಾ XUV700 ಎಸ್‍ಯುವಿಯಲ್ಲಿ 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಎರಡೂ ಎಂಜಿನ್ ಗಳೊಂದಿಗೆ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ.

ಸುರಕ್ಷತೆಯ ದೃಷ್ಟಿಯಿಂದ ಈ ಮಹೀಂದ್ರಾ XUV700 ಅತ್ಯುತ್ತಮ ಎಸ್‌ಯುವಿ ಎಂದು ಖ್ಯಾತಿಗಳಿಸಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಈ ಕಾರು, 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ.

Mahindra XUV700

ಈ ಹೊಸ ಮಹೀಂದ್ರಾ XUV700 ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಪಡೆದುಕೊಂಡಿವೆ. ಮಹೀಂದ್ರಾ XUV 700 ಮಾದರಿಯು ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ನೇರ ಪ್ರತಿಸ್ಪರ್ಧಿಯಾಗಿದೆ.

ಒಟ್ಟಾರೆಯಾಗಿ ಮಹೀಂದ್ರಾ XUV700 ಕಾಯುವಿಕೆಯನ್ನು ಗಮನಿಸಿದಾಗ ಈ ಎಸ್‌ಯುವಿ ಎಷ್ಟರ ಮಟ್ಟಿಗೆ ಬೇಡಿಕೆ ಹೊಂದಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ 5 ಸ್ಟಾರ್ ರೇಟಿಂಗ್ ಪಡೆದಿರುವುದು, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವುದು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಈ ಮಹೀಂದ್ರಾ XUV700 ಮಾದರಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, October 11, 2023, 8:30 [IST]
English summary
Maharashtra police adds mahindra xuv700 its fleet details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+