ಬೈಕ್‌ ಮೇಲೆ ಆಟೋಗ್ರಾಫ್‌ ಕೇಳಿದ ಅಭಿಮಾನಿ ಬೈಕ್‌ ತಾನೇ ಒರೆಸಿದ ಧೋನಿ... ಎಷ್ಟೊಂದು ಸಿಂಪಲ್‌ ಮನುಷ್ಯ

ತುಂಬಿದ ಕೊಡ ತುಳುಕುವುದಿಲ್ಲ ಎಂದು ಅಷ್ಟಿಲ್ಲದೇ ಹೇಳಿದ್ದಾರಾ? ಈ ಗಾದೆ ಮಾತು ಭಾರತದ ಮಾಜಿ ಕಪ್ತಾನ ಮಹೇಂದ್ರ ಸಿಂಗ್‌ ಧೋನಿಗಿಂತಲೂ ಹೆಚ್ಚಾಗಿ ಯಾರಿಗೂ ಸೂಟ್ ಆಗಲಾರದು. ಈ ಮಾತನ್ನು ಹಾಗೇ ಹೇಳುತ್ತಿಲ್ಲ. ಇದನ್ನು ಗಟ್ಟಿಗೊಳಿಸುವ ಹಲವಾರು ಪುರಾವೆಗಳು ಈ ಹಿಂದೆ ನಾವು ನೋಡಿದ್ದೇವೆ ಮತ್ತು ಇನ್ನು ಮುಂದೆಯೂ ನೋಡುತ್ತೇವೆ.

ಮಹೇಂದ್ರ ಸಿಂಗ್‌ ಧೋನಿಗೆ ಬೈಕ್‌ಗಳೆಂದರೆ ಕ್ರಿಕೆಟ್‌ನಷ್ಟೇ ಅಚ್ಚು ಮೆಚ್ಚು. ಈಗಾಗಲೇ ಅವರ ಬಳಿ ಹಲವು ವಿಧ ವಿಧದ ಮತ್ತು ಅತಿ ವಿರಳವಾಗಿ ಕಾಣ ಸಿಗುವ ಹಲವಾರು ಬೈಕ್‌ಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಳಿ ಇರುವ ಬೈಕ್‌ಗಳ್ನು ಅವರು ಅಷ್ಟೇ ನಾಜೂಕಾಗಿ ನೋಡಿಕೊಳ್ಳುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Mahendra Singh Dhoni Cleans Fan Bike And Gave Autograph On It

ಇದೀಗ ಬೈಕ್‌ ಕುರಿತಾಗಿನ ಮತ್ತೊಂದು ಮಹೇಂದ್ರ ಸಿಂಗ್‌ ಧೋನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಅಭಿಮಾನಿಯೊಬ್ಬ ತನ್ನ ಬೈಕ್‌ ಅನ್ನು ಮಾಹಿ ಬಳಿ ತಂದು ಆಟೋಗ್ರಾಫ್‌ ಕೊಡುವಂತೆ ಕೇಳಿದಾಗ ಮಹೇಂದ್ರ ಸಿಂಗ್‌ ಧೋನಿ ತೋರಿದ ವರ್ತನೆ ಅವರ ಗುಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ಹೌದು, ಅಭಿಮಾನಿಯೊಬ್ಬರು ತಮ್ಮ ಹೊಸ ಬೈಕ್‌ ಅನ್ನು ಮಹೇಂದ್ರ ಸಿಂಗ್‌ ಧೋನಿ ಬಳಿ ತೋರಿಸಲು ತಂದಿದ್ದಾರೆ. ತುಂಬಾ ಕುತೂಹಲದಿಂದ ಈ ಬೈಕ್‌ ಅನ್ನು ವೀಕ್ಷಿಸುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಆನಂತರ ವ್ಯಕ್ತಿ ಬೈಕ್‌ ಮೇಲೆ ಆಟೋಗ್ರಾಫ್‌ ನೀಡುವಂತೆ ಕೇಳುವಾಗ ಧೋನಿ ಕೂಡಲೇ ತಮ್ಮ ಟೀಶರ್ಟ್‌ ತುದಿಯಿಂದ ಆ ಬೈಕ್ ಒರೆಸುತ್ತಾರೆ.

Mahendra Singh Dhoni Cleans Fan Bike And Gave Autograph On It

ತಾವು ಎಲ್ಲಿ ಆಟೋಗ್ರಾಫ್‌ ನೀಡಬೇಕು ಎಂದಿದ್ದರೋ ಅಲ್ಲಿ ತಾವು ಧರಿಸಿದ್ದ ಟೀ ಶರ್ಟ್‌ನ ತುದಿಯಿಂದ ಒರೆಸಿ ಸ್ವಚ್ಚಗೊಳಿಸಿ ಆ ಜಾಗದಲ್ಲಿ ತಮ್ಮ ಆಟೋಗ್ರಾಫ್‌ ಅನ್ನು ಧೋನಿ ಆ ವ್ಯಕ್ತಿಗೆ ನೀಡುತ್ತಾ ಇರುವುದನ್ನು ಕಾಣಬಹುದು. ಇಷ್ಟು ಸಾಕಲ್ಲವೇ ಭಾರತದ ಮಾಜಿ ಕಪ್ತಾನನಿಗೆ ಬೈಕ್‌ ಮೇಲೆ ಇರುವ ಪ್ರೀತಿ ಎಷ್ಟೆಂದು ತಿಳಿಯಲು.

ಇನ್ನು ಧೋನಿ ಬಳಿ ಕೇವಲ ಬೈಕ್‌ ಕಲೆಕ್ಷನ್ ಮಾತ್ರವಲ್ಲ. ಹಲವಾರು ವಿರಳವಾದ ಕಾರುಗಳು ಸಹ ಧೋನಿ ಬಳಿ ಇದೆ. ಅದರಲ್ಲಿ ಪ್ರಮುಖವಾದವುಗಳು ಎಂದರೆ ಜಿಎಂಸಿ ಸಿಯೆರಾ 3500 ಎಚ್ ಡಿ ಪಿಕಪ್ ಟ್ರಕ್ ಅನ್ನು ಅಮೆರಿಕದ ಐಕಾನಿಕ್ ಸಂಸ್ಥೆಯು ಉತ್ಪಾದಿಸುತ್ತದೆ. ಅಮೆರಿಕದ ಜನರಲ್ ಮೋಟಾರ್ಸ್ ಉಪವಿಭಾಗವಾಗಿರುವ ಜಿಎಂಸಿ ಪ್ರಮುಖವಾಗಿಯೂ ಪಿಕಪ್, ವಾಣಿಜ್ಯ ಟ್ರಕ್, ಬಸ್, ವ್ಯಾನ್, ಮಿಲಿಟರಿ ವಾಹನ ಹಾಗೂ ಕ್ರೀಡಾ ಬಳಕೆಯ ವಾಹನಗಳ ಮಾರಾಟದಲ್ಲಿ ಗಮನ ಕೇಂದ್ರಿಕರಿಸಿದೆ. ಈ ಆಮದು ವಾಹನವನ್ನು ಧೋನಿ ಕೂಡಾ ತಮ್ಮದಾಗಿಸಿದ್ದಾರೆ. ಇದರಲ್ಲಿರುವ 6.6 ಲೀಟರ್ ವಿ8 ಟರ್ಬೊ ಎಂಜಿನ್ 397 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಗೂ ಫೆರಾರಿ ಕಾರನ್ನು ಹೊಂದುವುದು ಕನಸಾಗಿರುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗ ಇದನ್ನು ನನಸಾಗಿದ್ದಾರೆ. ವಿಶೇಷವೆಂದರೆ ಫೆರಾರಿ 599 ಜಿಟಿಒ ಇಂಡಿಯಾ ಎಡಿಷನ್ ಸೂಪರ್ ಕಾರಿನ ಹುಡ್ ನಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿಯಲಾಗಿದೆ. ಇದು ಅಪ್ಪಟ ದೇಶ ಪ್ರೇಮವನ್ನು ತೋರಿಸುತ್ತದೆ. ಇದರಲ್ಲಿ 6 ಲೀಟರ್ ವಿ12 ನೈಸರ್ಗಿಕ ಚೋಷಿತ ಎಂಜಿನ್ ಆಳವಡಿಸಲಾಗಿದ್ದು, ಬರೋಬ್ಬರಿ 661 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ ಕೇವಲ 3.35 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 335 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 3, 2023, 18:30 [IST]
English summary
Mahendra singh dhoni cleans fan bike and gave autograph on it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+