ಲೆಜೆಂಡರಿ ಕ್ರಿಕೆಟರ್‌ ಧೋನಿಯ ಲೆಜೆಂಡರಿ ಕಾರು ಬೈಕ್‌ ಯಾವುವು ಗೊತ್ತಾ?: X32 ಹೆಲ್‌ಕ್ಯಾಟ್ ಸಹ ಇದೆ

ಮಹೇಂದ್ರ ಸಿಂಗ್‌ ಧೋನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವ ಕ್ರಿಕೆಟ್‌ ಕಂಡಂತಹ ಅತ್ಯಂತ ಅತ್ಯುತ್ತಮ ನಾಯಕರ ಸಾಲಿನಲ್ಲಿ ಧೋನಿಯದ್ದು ಅಗ್ರಸ್ಥಾನ. ಇಂದು ಅವರು ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಇಂದು ಲೇಖನದಲ್ಲಿ ಮೇಂದ್ರ ಸಿಂಗ್‌ ಧೋನಿ ಬಳಿಯಿರುವ ಕಾರು ಮತ್ತು ಬೈಕ್‌ ಕಲೆಕ್ಷನ್‌ಗಳತ್ತ ಒಮ್ಮೆ ಕಣ್ಣು ಹಾಯಿಸೋಣ.

. ನೋರ್ಟೋನ್‌ ಜುಬಿಲಿ 250: ಮಹೇಂದ್ರ ಸಿಂಗ್‌ ಧೋನಿ ಬಳಿಯಿರುವ ಲೆಜೆಂಡರಿ ಬೈಕ್‌ ಕಲೆಕ್ಷನ್‌ನಲ್ಲಿ ಅಗ್ರಸ್ಥಾನ ನೋರ್ಟೋನ್‌ ಜುಬಿಲಿ 250 ಕ್ಲಾಸಿಕ್‌ ಬೈಕ್ ಸಹ ಒಂದು. ಅವರ ವಿಂಟೇಜ್‌ ಕಲೆಕ್ಷನ್‌ ಬಹುಮುಖ್ಯ ಬೈಕ್‌ಗಳಲ್ಲಿ ಇದೂ ಒಂದು. ಇದರ ಪೊಟೋವನ್ನು ಸ್ವತಃ ಧೋನಿಯೇ ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಿದ್ದರು.

MS Dhoni Luxurious And Classic Cars And Bikes

. ಕವಾಸಕಿ ನಿಂಜಾ H2: ಧೋನಿ (Mahendra Singh Dhoni) ಅವರ ಬಳಿ ಇರುವ ದುಬಾರಿ ಬೈಕ್‌ ಕಲೆಕ್ಷನ್‌ನಲ್ಲಿ ಕವಾಸಕಿ ನಿಂಜಾ H2 ಮುಖ್ಯವಾದವು. ಇದರ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 33.3 ಲಕ್ಷ ರೂಗಳು. ಮಾಹಿತಿಗಳ ಪ್ರಕಾರ ಧೋನಿ ಬಳಿ ಇರುವ ಕವಾಸಕಿ ನಿಂಜಾ H2, 2017 ಮಾಡೆಲ್‌ ಎಂದು ತಿಳಿದು ಬಂದಿದೆ.

. ಜೀಪ್‌ ಗ್ರ್ಯಾಂಡ್‌ ಚೆರೋಕಿ ಟ್ರ್ಯಾಕ್‌ಹಾಕ್‌: ಮಹೇಂದ್ರ ಸಿಂಗ್‌ ಧೋನಿ ಒಮ್ಮೆ ಕೆಂಪು ಬಣ್ಣದ ಜೀಪ್‌ ಗ್ರ್ಯಾಂಡ್‌ ಚೆರೋಕಿ ಟ್ರ್ಯಾಕ್‌ಹಾಕ್ ಕಾರನ್ನು ಓಡಿಸುತ್ತಾ ಇದ್ದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ನಾಲ್ಕು ಬಣ್ಣಗಳಲ್ಲಿ ಸಿಗುವ ಕಾರು ಕೇವಲ ಒಂದು ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ.

MS Dhoni Luxurious And Classic Cars And Bikes

. ಮಹೀಂದ್ರಾ ಸ್ಕಾರ್ಪಿಯೋ: ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಮಹೀಂದ್ರಾ ಸ್ಕಾರ್ಪಿಯೋ ಸಹ ಧೋನಿಯವರ ವಾಹನ ಕಲೆಕ್ಷನ್‌ನಲ್ಲಿ ಇರುವ ಕಾರು. ಕಾರನ್ನು ತುಂಬಾ ಎಡ್ಜಿ ರೀತಿ ಕಾಣಲು ಇದನ್ನು ಮಹೇಂದ್ರ ಸಿಂಗ್‌ ಧೋನಿ ಕಸ್ಟಮೈಸ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

. ಕಾನ್ಫಿಡರೇಟ್‌ X32 ಹೆಲ್‌ಕ್ಯಾಟ್: ಪ್ರಪಂಚದಲ್ಲೇ ಕಂಡು ಬರುವ ಅತ್ಯಂತ ವಿರಳವಾದ ಬೈಕ್‌ ಕಾನ್ಫಿಡರೇಟ್‌ X32 ಹೆಲ್‌ಕ್ಯಾಟ್. ಇದಕ್ಕೆ ಕಾರಣ ಏನು ಅಂದ್ರೆ ಕಂಪನಿಯು ಕಾನ್ಫಿಡರೇಟ್‌ X32 ಹೆಲ್‌ಕ್ಯಾಟ್ ಬೈಕ್‌ನ ಕೇವಲ 150 ಯೂನಿಟ್‌ಗಳನ್ನು ಮಾತ್ರ ನಿರ್ಮಿಸಿದೆ. ಅದರಲ್ಲಿ ಒಂದು ಧೋನಿ ಬಳಿಯೂ ಇದೆ.

ಇಷ್ಟು ಮಾತ್ರವಲ್ಲದೇ ಧೋನಿ ಬಳಿ ಇನ್ನೂ ಹಲವಾರು ಕಾರು ಮತ್ತು ಬೈಕ್‌ ಕಲೆಕ್ಷನ್‌ಗಳು ಇವೆ. ಅದರಲ್ಲಿ ಹಳೇಯ ಮಿನಿ ಕೂಪರ್‌ ಕಾರುಗಳು ಸಹ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಆಗಾಗ ತಮ್ಮ ಬಳಿ ಇರುವ ಕಾರು ಬೈಕ್‌ಗಳ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಾ ಇರುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 7, 2023, 13:19 [IST]
English summary
Mahendra singh dhoni luxurious and classic cars and bikes collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+