ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

Written By:

ಟಾಟಾ ಮೋಟಾರ್ಸ್ ನಂತರ ಮಹೀಂದ್ರ ಸಂಸ್ಥೆ ಕೂಡಾ ದೇಶೀಯ ವಿಮಾನವನ್ನು ಆರಂಭಗೊಳಿಸಲು ಸಿದ್ದವಾಗಿದ್ದು, 10 ಆಸನದ ಏರ್‌ವ್ಯಾನ್ ಪರಿಚಯಿಸಲು ಮಹತ್ವದ ಯೋಜನೆ ರೂಪಿಸಿದೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಕೇಂದ್ರ ಸರಕಾರದ ಪ್ರಾದೇಶಿಕ ಸಾರಿಗೆ ಸಂಪರ್ಕ ಯೋಜನೆಯನ್ನು ಬಲಗೊಳಿಸಲು ಮುಂದಾಗಿರುವ ಮಹೀಂದ್ರಾ, ಇದಕ್ಕಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದಿಂದ 10 ಆಸನದ ಸಿಂಗಲ್ ಇಂಜಿನ್ ಟರ್ಬನ್ ಏರ್‌ವ್ಯಾನ್ ಅಭಿವೃದ್ಧಿಗೆ ಒಪ್ಪಿಗೆ ಪಡೆದುಕೊಂಡಿದೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಈ ಹಿನ್ನಲೆ 10 ಆಸನದ ಏರ್‌ವ್ಯಾನ್ ಸಿದ್ಧಗೊಳಿಸಿರುವ ಮಹೀಂದ್ರಾ, ಸದ್ಯದಲ್ಲೇ ನಾಗರಿಕ ವಿಮಾನಯಾನದಿಂದ ಹೊಸ ಯೋಜನೆಗೆ ಒಪ್ಪಿಗೆ ಪಡೆದುಕೊಂಡು ವಾಣಿಜ್ಯ ಸೇವೆಗಳಿಗಾಗಿ ಬಳಕೆ ಮಾಡಲಿದೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಇನ್ನು ಏರೋಸ್ಪೇಸ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಿಗಾಗಿ 154 ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಮಹೀಂದ್ರಾ, ಪ್ರಸ್ತುತವಾಗಿ ಆಸ್ಟೇಲಿಯಾ ಸೇರಿದಂತೆ 29 ದೇಶಗಳಲ್ಲಿ ಮಹೀಂದ್ರಾ ಏರ್‌ವ್ಯಾನ್ ಸೇವೆಗಳನ್ನು ಪರಿಚಯಿಸಿ ಯಶಸ್ವಿಯಾಗಿದೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಇನ್ನು ವಿನೂತನ ರೀತಿಯಲ್ಲಿ ಸಿದ್ಧಗೊಂಡಿರುವ ಮಹೀಂದ್ರಾ ಏರ್‌ವ್ಯಾನ್, ರೋಲ್ಸ್ ರಾಯ್ಸ್ ಎ250 ಪಿಸ್ಟನ್ 8 ಎಂಜಿನ್‌ನೊಂದಿಗೆ ಅಭಿವೃದ್ಧಿಗೊಂಡಿದೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಮಹೀಂದ್ರಾ ಏರ್‌ವ್ಯಾನ್‌ಗಳು ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದ್ದು, ಪ್ರಾದೇಶಿಕ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೊಂಡಿವೆ.

ದೇಶಿಯ ವಿಮಾನ ಯಾನ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಮಹೀಂದ್ರಾ..!

ಒಟ್ಟಿನಲ್ಲಿ ಮಹೀಂದ್ರಾ ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ದೇಶಿಯ ವಿಮಾನಯಾನ ಸೇವೆಗಳಿಗೆ ಹೊಸ ಆಯಾಮ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಬಹುದು.

English summary
Read in Kannada about Mahindra launches aircraft in India.
Story first published: Wednesday, June 21, 2017, 18:08 [IST]
Please Wait while comments are loading...

Latest Photos