ವಿಚಲಿತನಾದ ಕಾರು ಚಾಲಕ ಸ್ಕೂಟರ್‌ಗೆ ಡಿಕ್ಕಿ: ಅನುಭವಿ ಚಾಲಕರಾಗಿದ್ದರೆ ತಪ್ಪು ಯಾರದ್ದು ಹೇಳಿ?

ಭಾರತದಲ್ಲಿ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ಓಡಿಸುವಾಗ ರಸ್ತೆಯ ಮೇಲೆ ಗಮನ ಹರಿಸುವುದು ತುಂಬಾ ಮುಖ್ಯ ಎಂಬುದಕ್ಕೆ ಉತ್ತಮ ಉದಾಹರಣೆ ಈ ವಿಡಿಯೋ. ಉತ್ತಮ ಚಾಲಕ ಮತ್ತು ಅಜಾಗರೂಕ ಚಾಲಕ ನಡುವಿನ ವ್ಯತ್ಯಾಸವನ್ನು ಈ ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ ಓರ್ವ ಚಾಲಕ ಅಪಘಾತ ತಪ್ಪಿಸಿದರೇ, ಮತ್ತೊಬ್ಬ ಅಪಘಾತಕ್ಕೀಡಾಗಿರುವುದು ಕಂಡುಬಂದಿದೆ.

ಎರಡು ಘಟನೆಗಳು, ಎರಡು ವಿಭಿನ್ನ ಫಲಿತಾಂಶಗಳು: ಎರಡು ಘಟನೆಗಳ ವಿಡಿಯೋಗಳನ್ನು ಪ್ರತೀಕ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡೂ ವೀಡಿಯೊಗಳು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಒಂದು ಹೆದ್ದಾರಿಯಲ್ಲಿ ಸಂಭವನೀಯ ಅಪಘಾತವಾದರೆ ಇನ್ನೊಂದು ನಗರ ರಸ್ತೆಯಲ್ಲಿ ನಡೆದಿದೆ. ಇವೆರಡೂ ವಿಡಿಯೋಗಳು ಚಾಲಕರು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತೋರಿಸುತ್ತದೆ.

mahindra-scorpio-maruti-dzire-scooter-accident-video

ಈ ಎರಡು ವಿಡಿಯೋಗಳಲ್ಲಿ ಒಂದು ಘಟನೆಯು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಈ ವೀಡಿಯೊದಲ್ಲಿ, ಮಾರುತಿ ಸುಜುಕಿ ಡಿಜೈರ್ ಚಾಲಕ ನಿಲ್ಲಿಸಿದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ, ಸ್ಕೂಟರ್ ಚಾಲಕ ಸರ್ಕಲ್‌ವೊಂದರಲ್ಲಿ ವಾಹನಗಳು ವೇಗವಾಗಿ ಹೋಗುತ್ತಿದ್ದ ಕಾರಣ ನಿಲ್ಲಿಸಿದ್ದಾನೆ. ನಂತರ ಡಿಜೈರ್ ಚಾಲಕ, ಅವರನ್ನು ಗಮನಿಸದೆ ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಸವಾರ ಮತ್ತು ಹಿಂದಿಯಿದ್ದವರು ಕೆಳಗೆ ಬಿದ್ದಿದ್ದಾರೆ.

ತಪ್ಪು ಯಾರದ್ದು?: ಸಂಪೂರ್ಣ ತಪ್ಪು ಡಿಜೈರ್ ಡ್ರೈವರ್‌ನದೇ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ಕೂಟರ್ ಸವಾರ ಮತ್ತು ಹಿಂದಿದ್ದವರು ವೃತ್ತದಲ್ಲಿ ನಿಲ್ಲಿಸಿರುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಕಾರು ಚಾಲಕ ಸಮಯಕ್ಕೆ ಸರಿಯಾಗಿ ನಿಲ್ಲಿಸಿರಬೇಕು. ಆದರೆ, ವಿಚಲಿತರಾದ ಕಾರಣ ಸರಿಯಾದ ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗದೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.

mahindra-scorpio-maruti-dzire-scooter-accident-video

ಇನ್ನೊಂದು ಘಟನೆ ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಮಹೀಂದ್ರಾ ಸ್ಕಾರ್ಪಿಯೋ ಕಾರು ಟ್ರಕ್‌ವೊಂದನ್ನು ಹಿಂದಿಕ್ಕುತ್ತಿರುವುದನ್ನು ಕಾಣಬಹುದು. ಡ್ಯಾಶ್‌ಕ್ಯಾಮ್ ಇದ್ದ ಕಾರು ಸ್ಕಾರ್ಪಿಯೋವನ್ನು ಹಿಂಬಾಲಿಸುತ್ತಿತ್ತು. ಇದೇ ವೇಳೆ ಹೆದ್ದಾರಿಯ ಬಲಭಾಗದ ಲೇನ್‌ನಲ್ಲಿ ಫೋರ್ಡ್ ಫಿಗೋ ಹ್ಯಾಚ್‌ಬ್ಯಾಕ್‌ ಕೆಟ್ಟು ನಿಂತಿರುವಂತೆ ಕಾಣುತ್ತಿದ್ದು, ಒಮ್ಮೆಲೆ ಕಾರನ್ನು ಕಂಡರೂ ಸ್ಕಾರ್ಪಿಯೋ ಚಾಲಕ ಅಪಘಾತವನ್ನು ತಪ್ಪಿಸಿದ್ದಾನೆ.

ಡಿಕ್ಕಿಯಾಗುವುದನ್ನು ತಪ್ಪಿಸಲು ಓವರ್‌ಟೇಕ್ ಮಾಡುವ ಸಮಯದಲ್ಲಿ ಸ್ಕಾರ್ಪಿಯೋ ಚಾಲಕ ಸಡನ್ ಬ್ರೇಕ್ ತುಳಿದು ಕಾರನ್ನು ಎಡಕ್ಕೆ ತಿರುಗಿಸಿ ಓವರ್‌ಟೇಕ್ ಮಾಡಿ ಬಲಕ್ಕೆ ಎಳೆದಿದ್ದಾನೆ. ಇದಾದ ಬಳಿಕ ಸ್ಕಾರ್ಪಿಯೊವನ್ನು ಹಿಂಬಾಲಿಸುವ ಕಾರು ಸಹ ಅದೇ ಫಿಗೋದಿಂದ ಆಗುವ ಅಪಘಾತದಿಂದ ತಪ್ಪಿಸಿಕೊಂಡಿದೆ. ಒಂದು ವೇಳೆ ಹೀಗಾಗದಿದ್ದಲ್ಲಿ ಭೀಕರ ಅಪಘಾತಕ್ಕೆ ಕಾರಣವಾಗುತ್ತಿತ್ತು.

mahindra-scorpio-maruti-dzire-scooter-accident-video

ಕಲಿಯಬೇಕಾದ ಪಾಠ: ಮೇಲೆ ಹೇಳಿದಂತೆ, ಈ ಎರಡು ಘಟನೆಗಳು ಚಾಲನೆ ಮಾಡುವಾಗ ಎಚ್ಚರಿಕೆ ಮತ್ತು ಗಮನಹರಿಸುವ ಬಗ್ಗೆ ನಮಗೆ ಬಹಳ ಮುಖ್ಯವಾದ ಪಾಠವನ್ನು ಕಲಿಸುತ್ತವೆ. ಒಂದು ಘಟನೆಯಲ್ಲಿ ಕಾರು ಚಾಲಕ ಅತ್ಯಂತ ಅಲರ್ಟ್ ಆಗಿದ್ದ ಕಾರಣ, ಅವರು ತೀವ್ರ ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸಿದರು. ಜಾಗರೂಕತೆ ಮತ್ತು ಗಮನದ ಕೊರತೆಯಿಂದಾಗಿ ಇನ್ನೊಬ್ಬ ಚಾಲಕ ಅಪಘಾತಕ್ಕೆ ಕಾರಣವಾದ.

ಚಾಲನೆಯಲ್ಲಿದ್ದಾಗ ಫೋನ್ ಬಳಸುವುದು, ಬೇಜವಾಬ್ದಾರಿ ತೋರುವುದರಿಂದ ಅನಗತ್ಯ ಬೆಲೆ ತೆರಬೇಕಾಗುತ್ತದೆ. ಇಲ್ಲಿ ಡಿಜೈರ್ ಚಾಲಕ ಅಪಘಾತವನ್ನು ಸುಲಭವಾಗಿ ತಪ್ಪಿಸಬಹುದಿತ್ತು. ಆದರೆ ಆತನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣವಾಯಿತು. ಈ ಮೂಲಕ ಪ್ರತಿಯೊಬ್ಬರೂ ದಯವಿಟ್ಟು ರಸ್ತೆಯಲ್ಲಿ ಯಾವುದೇ ವಾಹನವನ್ನು ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ವಿಚಲಿತರಾಗಬೇಡಿ ಮತ್ತು ತಮ್ಮ ಕಣ್ಣು ಮತ್ತು ಮನಸ್ಸನ್ನು ರಸ್ತೆಯ ಮೇಲೆ ಇರಿಸಲು ವಿನಂತಿಸುತ್ತೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, December 1, 2023, 8:30 [IST]
English summary
Mahindra scorpio maruti dzire scooter accident video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+