ಬಲಿಷ್ಠ ಮಹೀಂದ್ರಾ ಕಾರಿನ ಹೊಡೆತಕ್ಕೆ ನಲುಗಿದ ಕೆಎಸ್‌ಆರ್‌ಟಿಸಿ ಬಸ್: ಕಳಚಿತು ಬಸ್ಸಿನ ಚಕ್ರಗಳು

ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕಿರಿದಾದ ರಸ್ತೆಗಳಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವುದು ಅಪಾಯಕಾರಿಯಾಗಿದೆ. ರಸೆ ಅಪಘಾತಗಳ ವೀಡಿಯೋ ಆಗಾಗ ವೈರಲ್ ಆಗುತ್ತದೆ. ಸರ್ಕಾರಿ ಬಸ್‌ಗಳು (Bus) ಅಪಘಾತಕ್ಕೀಡಾಗುವುದು ಅಪರೂಪದ ಸಂಗತಿ. ಏಕೆಂದರೆ, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರಿ ಬಸ್‌ಗಳು ಸಾಧ್ಯವಾದಷ್ಟು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಹೀಗಿದ್ದರೂ ಕೆಲವು ಸರ್ಕಾರಿ ಬಸ್‌ಗಳು ಅಪಘಾತಕ್ಕೀಡಾಗುತ್ತಿವೆ. ಕೇರಳದಲ್ಲಿ ಅಪಘಾತಕ್ಕೀಡಾದ ಸರಕಾರಿ ಬಸ್ಸಿನ ಹಿಂಬದಿಯ ಚಕ್ರಗಳು ಕಳಚಿ ಬಿದ್ದ ವೀಡಿಯೋ ವೈರಲ್ ಆಗಿದೆ.

ಈ ವಿಡಿಯೋವನ್ನು ಏಷ್ಯಾನೆಟ್ ನ್ಯೂಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಅಂಗಡಿಯೊಂದರ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಕೊಲ್ಲಂನ ಕೊಟ್ಟಾರಕರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ವೀಡಿಯೊದಲ್ಲಿ, ಏಕ-ಪಥದ ರಸ್ತೆಯನ್ನು ನೋಡುತ್ತೇವೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು (KSRTC) ಪರದೆಯ ಎಡಭಾಗದಿಂದ ಬಲಕ್ಕೆ ಚಲಿಸುವುದನ್ನು ನಾವು ನೋಡುತ್ತೇವೆ.

Scorpio-N Crashes Into Govt Bus

ಬಸ್‌ನಲ್ಲಿ ಪ್ರಯಾಣಿಕರಿದ್ದರು ಮತ್ತು ನಿಧಾನಗತಿಯ ವೇಗದಲ್ಲಿ ಚಲಿಸುತ್ತಿತ್ತು. ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಪರದೆಯ ಬಲಭಾಗದಿಂದ ಬರುತ್ತಿರುವುದನ್ನು ನಾವು ನೋಡುತ್ತೇವೆ ಮತ್ತು ಸ್ಕಾರ್ಪಿಯೋ ಎನ್ ವೇಗವಾಗಿ ಚಲಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಚಾಲಕ ಬಸ್ ಅನ್ನು ಕಾಣುವಷ್ಟರಲ್ಲಿ ಅಪಆಘಾತ ಸಂಭವಿಸಿದೆ. ಬಹುಶಃ ಮುಂದೆ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಿ ವೇಗವಾಗಿ ಬಂದಿರಬಹುದು.

ಮಹೀಂದ್ರಾ ರ್ಪಿಯೋ-ಎನ್ ಎಸ್‌ಯುವಿ ಚಾಲಕ ಮುಖಾಮುಖಿ ಡಿಕ್ಕಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾದರು, ಆದರೆ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಎಸ್‌ಯುವಿಯ ಮುಂಭಾಗವು ಬಸ್‌ನ ಸೈಡ್ ಬಾಡಿಗೆ ಉಜ್ಜಿ ಸ್ಕಾರ್ಪಿಯೊ ಎನ್‌ ಎಸ್‍ಯುವಿಯ ಮುಂಭಾಗವು ಹಿಂದಿನ ಟೈರ್‌ಗಳಿಗೆ ತಗುಲಿತು. ಈ ಎಸ್‌ಯುವಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಹಿಂಬದಿಯ ಚಕ್ರಗಳು ಮತ್ತು ಆಕ್ಸಲ್ ಕಳಚಿಬಿದ್ದಿದೆ.

Scorpio-N Crashes Into Govt Bus

ವೀಡಿಯೊದಲ್ಲಿ, ಬಸ್‌ನ ಹಿಂಭಾಗದ ಆಕ್ಸಲ್ ವಾಹನದಿಂದ ಹಾರಿಹೋಗುವುದನ್ನು ನಾವು ನೋಡುತ್ತೇವೆ. ಕೆಲವು ಸೆಕೆಂಡುಗಳ ಕಾಲ ಬಸ್ಸು ಗಾಳಿಯಲ್ಲಿದೆ. ಅದೃಷ್ಟವಶಾತ್, ಬಸ್ ನೇರವಾಗಿ ಇಳಿಯಿತು, ಆದರೆ ಚಾಲಕ ನಿಯಂತ್ರಣ ಕಳೆದುಕೊಂಡಿತು. ಬಸ್‌ಗಳಂತಹ ವಾಹನಗಳು RWD (ರೇರ್-ವ್ಹೀಲ್-ಡ್ರೈವ್) ಆಗಿದೆ. ಇದರಿಂದ ಅಪಘಾತವಾದಗ ಚಾಲಕನ ನಿಯಂತ್ರಣ ಕಳೆದುಕೊಂಡಿತು.

ಇದರಿಂದ ಬಸ್ ಚಾಲಕನಿಗೆ ಬಸ್ಸನ್ನು ನಡುರಸ್ತೆಯಲ್ಲಿ ಬಿಟ್ಟು ಬೇರೆ ದಾರಿ ಇರಲಿಲ್ಲ. ಮೇಲೆ ಹೇಳಿದಂತೆ, ಇದು ಹಲವಾರು ಸರ್ಕಾರಿ ಮತ್ತು ಖಾಸಗಿ ಒಡೆತನದ ಬಸ್ಸುಗಳು ಮತ್ತು ಇತರ ವಾಹನಗಳು ಹಾದುಹೋಗುವ ಜನನಿಬಿಡ ರಸ್ತೆಯಾಗಿತ್ತು. ನಡುರಸ್ತೆಯಲ್ಲಿದ್ದ ಬಸ್ ಇತರೆ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ. ಈ ಮಹೀಂದ್ರಾ ಸ್ಕಾರ್ಪಿಯೋ-ಎನ್ ಹಿಂದೆ ಮರ್ಸಿಡಿಸ್ ಬೆಂಜ್ ಇತ್ತು.

ಸ್ಕಾರ್ಪಿಯೋ-ಎನ್ ಹಿಂದೆ ಮರ್ಸಿಡಿಸ್ ಬೆಂಜ್ ಇತ್ತು. ಸೆಡಾನ್ ಸಹ ಹೆಚ್ಚಿನ ವೇಗದಲ್ಲಿ ಸಮೀಪಿಸುತ್ತಿತ್ತು, ಆದರೆ ಬಸ್ ಅಥವಾ ಸ್ಕಾರ್ಪಿಯೊ ಎನ್‌ಗೆ ಡಿಕ್ಕಿ ಹೊಡೆಯುವ ಮೊದಲು ಚಾಲಕನು ನಿಧಾನಗೊಳಿಸಿದನು. ಮರ್ಸಿಡಿಸ್-ಬೆಂಝ್ ಚಾಲಕನು ಕಾರನ್ನು ಶಾಪಿಂಗ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಸ್ಥಳಕ್ಕೆ ತಿರುಗಿಸಿದನು, ಅಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ನೋಡಬಹುದು. ಅಪಘಾತದಲ್ಲಿ ಸ್ಕಾರ್ಪಿಯೋ ಎಸ್‍ಯುವಿಯ ಮುಂಭಾಗದ ವ್ಹೀಲ್, ಚಾಲಕನ ಬದಿಯ ಡೋರ್ ವಿಂಡ್‌ಶೀಲ್ಡ್, ಫೆಂಡರ್‌ಗಳು ಮತ್ತು ಬಂಪರ್‌ಗೆ ಹಾನಿಯಾಗಿದೆ.

ಮಹೀಂದ್ರ ಸ್ಕಾರ್ಪಿಯೊ ಎನ್ ಎಸ್‍ಯುವಿಯು ಗಟ್ಟಿಮುಟ್ಟಾದ ಎಸ್‍ಯುವಿ ಆಗಿದೆ. ಈ ಮಹಿಂದ್ರಾ ಎಸ್‍ಯುವಿಯು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ಪಷ್ಟವಾದ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಇದು ನವೀಕರಿಸಿದ ಮತ್ತು ಕಟ್ಟುನಿಟ್ಟಾದ ಮಾನದಂಡಗಳೊಂದಿಗೆ ಕ್ರ್ಯಾಶ್ ಪರೀಕ್ಷೆಗೆ ಒಳಗಾದ ಮೊದಲ ಎಸ್‍ಯುವಿ ಗಳಲ್ಲಿ ಒಂದಾಗಿದೆ.

Article Published On: Tuesday, November 19, 2024, 19:16 [IST]
English summary
Mahindra scorpio n crashes into ksrtc bus in kerala details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+