Mahindra Scorpio N ಗ್ರಾಹಕನಿಂದ ಲಾಯರ್ ಹುಡುಕಾಟ... ಕಂಪನಿ ವಿರುದ್ಧ ಕೇಸ್ ಹಾಕಲು ಸಜ್ಜು
ಭಾರತೀಯ ಆಟೋ ಮೊಬೈಲ್ ಕ್ಷೇತ್ರವು ಇಂದು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಆದರೂ ಇಲ್ಲಿನ ಕೆಲ ದೇಶೀಯ ಬ್ರಾಂಡ್‌ಗಳು ಗ್ರಾಹಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಹೇಳಿದ ಸಮಯಕ್ಕೆ ಡೆಲಿವರಿ ನೀಡದ ಕಾರಣ ಗ್ರಾಹಕರೊಬ್ಬರು ನ್ಯಾಯಾಲಯದ ಮೊರೆ ಹೋಗುವುದಾಗಿ ಆಗ್ರಹಿಸಿದ್ದಾರೆ.
ದೇಶದಲ್ಲಿ ಜನಪ್ರಿಯ ಮಾದರಿಗಳು ಮತ್ತು ಬೇಡಿಕೆಯ ಆಧಾರದ ಮೇಲೆ ಅವುಗಳ ರೂಪಾಂತರಗಳು ದೀರ್ಘ ಕಾಲ ಕಾಯುವ ಅವಧಿಯನ್ನು ಹೊಂದಿರುತ್ತವೆ. ಇಂತಹ ಬೇಡಿಕೆ ಹೆಚ್ಚಾಗಿರುವ ಹೊಸ ಕಾರಿನ ಡೆಲಿವರಿ ಪಡೆಯಲು ನೀವು ದಿನಗಳನ್ನು ಎಣಿಸುತ್ತಿದ್ದರೇ ಇದು ನಿಮಗೆ ನಿರಾಸೆಗೊಳಿಸಬಹುದು. ಏಕೆಂದರೆ ಕಂಪನಿ ಅಂದಾಜು ಡೆಲಿವರಿ ಟೈಮ್‌ಲೈನ್ ಹೇಳಿರುತ್ತಾದರೂ, ತೀರ್ವ ಬೇಡಿಕೆ ಹಾಗೂ ಉತ್ಪಾದನೆಯಲ್ಲಿನ ಅಡೆತಡೆಗಳಿಂದ ಡೆಲಿವರಿ ಮತ್ತಷ್ಟು ವಿಳಂಭವಾಗುತ್ತದೆ. ಇದೇ ಕಾರಣಕ್ಕೆ ಎಷ್ಟೋ ಜನ ಬುಕಿಂಗ್ ರದ್ದುಗೊಳಿಸುತ್ತಾರೆ.

ಇದೀಗ ಇಂತಹದೇ ಪರಿಸ್ಥಿತಿ ಎದುರಿಸಿದ ಗ್ರಾಹಕರೊಬ್ಬರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. 2023 ರ ಜನವರಿ 30 ಮತ್ತು ಮಾರ್ಚ್ 1 ರ ನಡುವೆ ತಮ್ಮ ಹೊಸ Mahindra Scorpio N SUV ಅನ್ನು ವಿತರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಅವರು ಡೀಲರ್‌ಗಳಿಂದ ಇನ್ನೂ ಕರೆಯನ್ನು ಸ್ವೀಕರಿಸಿಲ್ಲ. ವಿತರಣಾ ಸಮಯದ ಚೌಕಟ್ಟನ್ನು ಪರಿಶೀಲಿಸಲು ಆನ್‌ಲೈನ್ ಲಿಂಕ್‌ನೊಂದಿಗೆ, ಇತ್ತೀಚಿನ ಡೆಲಿವರಿ ಕುರಿತ ಮಾಹಿತಿ ಪಡೆಯಲು ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ.
ಇದರಿಂದ ಕಂಪನಿ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅವರು, ಗ್ರಾಹಕ ನ್ಯಾಯಾಲಯದಲ್ಲಿ ಮಹೀಂದ್ರಾ ವಿರುದ್ಧ ದೂರು ಸಲ್ಲಿಸಲು ವಕೀಲರನ್ನು ಹುಡುಕುತ್ತಿದ್ದಾರೆ. ''ನನಗೆ ಮಾರ್ಚ್‌ನ ಒಳಗೆ ಡೆಲಿವರಿ ಸಮಯ ನಿಗಧಿಪಡಿಸಲಾಗಿದೆ, ಆದರೆ ಈವರೆಗೆ ಡೆಲಿವರಿಯಾಗಿಲ್ಲ. ಇದೀಗ ಮಹೀಂದ್ರಾ ಅವರ ಆನ್‌ಲೈಕ್ ಲಿಂಕ್ ಕೂಡ ಕೆಲಸ ಮಾಡುತ್ತಿಲ್ಲ. ಈ ಕುರಿತು ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಮುಂದಾಗಿದ್ದೇನೆ, ಈ ಬಗ್ಗೆ ತಿಳಿದಿರುವ ಲಾಯರ್‌ಗಳು ಯಾರಾದರು ಇದ್ದರೇ ನನಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೋ-ಎನ್‌ಗೆ ಭಾರೀ ಬೇಡಿಕೆ:
ಹೊಸ ತಲೆಮಾರಿನ ಸ್ಕಾರ್ಪಿಯೋ N ಬಿಡುಗಡೆಯೊಂದಿಗೆ ಮಹೀಂದ್ರಾ ಕಂಪನಿಯು ಅದ್ಭುತ ಯಶಸ್ಸನ್ನು ಸಾಧಿಸಿದೆ. ಮಹೀಂದ್ರಾ ಸದ್ಯ ಶ್ರೇಣಿಯ ಅಗ್ರಸ್ಥಾನದಲ್ಲಿರುವ Z8 L ನ ವೇರಿಯೆಂಟ್‌ಗಳ ವಿತರಣೆಗಳಿಗೆ ಆದ್ಯತೆ ನೀಡುತ್ತಿದೆ. ಇದನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳಲ್ಲಿ ನೀಡಲಾಗುತ್ತದೆ, ಮೊದಲನೆಯದು 56 ರಿಂದ 58 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಎರಡನೆಯದು 24 ರಿಂದ 26 ವಾರಗಳ ಕಾಯುವ ಅವಧಿಯನ್ನು ಹೊಂದಿದೆ.
ಎಂಟ್ರಿ ಲೆವೆಲ್ ಮಹೀಂದ್ರಾ ಸ್ಕಾರ್ಪಿಯೊ-N Z2 ರೂಪಾಂತರವು 52 ರಿಂದ 54 ವಾರಗಳ ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿದೆ. ಮಧ್ಯ-ಸ್ಪೆಕ್ Z4 ರೂಪಾಂತರವು 60 ರಿಂದ 65 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಸ್ಕಾರ್ಪಿಯೋ N ನ Z6 ಮತ್ತು Z8 ರೂಪಾಂತರಗಳು ಪ್ರತಿಯೊಂದೂ 55 ರಿಂದ 60 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. ಈ ಹಿಂದಿನ ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಹಾನಿಗಳಿಂದ ವಾಹನ ಉದ್ಯಮವು ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನಗಳಿಗಾಗಿ ಕಾಯುವ ಅವಧಿಯು ನಿಧಾನವಾಗಿ ಕಡಿಮೆಯಾಗುತ್ತಿದೆ.

Z2 ಮತ್ತು Z6 ರೂಪಾಂತರಗಳ ವಿತರಣೆಗಳು ಖಂಡಿತವಾಗಿಯೂ ಸೆಮಿಕಂಡಕ್ಟರ್ ಕೊರತೆಯಿಂದಾಗಿ ವಿಳಂಬವಾಗುತ್ತಿವೆ. ಪ್ರಸ್ತುತ, ಮಹೀಂದ್ರಾ ಸ್ಕಾರ್ಪಿಯೊ ಎನ್ ಬೆಲೆ ರೂ. 12.74 ಲಕ್ಷದಿಂದ ಆರಂಭವಾಗಿ ರೂ. 24.05 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಹೋಗುತ್ತವೆ. ಇದನ್ನು ಆರು ಅಥವಾ ಏಳು ಆಸನಗಳಾಗಿ ಹೊಂದಬಹುದು. ಇದು 2.2L mHawk ಡೀಸೆಲ್ ಮತ್ತು 2.0L mStallion ಪೆಟ್ರೋಲ್ ಎಂಜಿನ್ ಜೊತೆಗೆ MT ಮತ್ತು AT ಆಯ್ಕೆಗಳನ್ನು ಹೊಂದಿದೆ.


Click it and Unblock the Notifications