Mahindra: 20 ಅಡಿ ಕಂದಕಕ್ಕೆ ಬಿದ್ದ ಮಹೀಂದ್ರಾ ಸ್ಕಾರ್ಪಿಯೋ ಎನ್, ಯಾವುದೇ ಗಾಯಗಳಿಲ್ಲ.. ಪ್ರಯಾಣಿಕರು ಸೇಫ್!
ದೇಶದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಜನಪ್ರಿಯ ಎಸ್‌ಯುವಿಯಾಗಿದ್ದು, ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಸ್ಕಾರ್ಪಿಯೋಗೆ ಸರಿ ಸಾಟಿಯೇ ಇಲ್ಲವಾಗಿದ್ದು, ಅಪಘಾತವಾದರೂ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಹಲವಾರು ನಂಬಿದ್ದಾರೆ. ಆ ಕಾರಣಕ್ಕೆ ವಿತರಣೆಗೆ ಕಾಯುವಿಕೆ ಅವಧಿ ಎಷ್ಟೇ ಇದ್ದರೂ ತಾಳ್ಮೆಯಿಂದ ಖರೀದಿಸುತ್ತಾರೆ.
ಇತ್ತೀಚೆಗೆ ಜಮ್ಮುವಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯೊಂದು ಅಪಘಾತಕ್ಕೆ ತುತ್ತಾಗಿದ್ದು, ಪ್ರಯಾಣಿಕರೂ ಯಾವುದೇ ಗಾಯಗಳಿಲ್ಲದೆ, ಅಪಾಯದಿಂದ ಸುಲಭವಾಗಿ ಎಸ್ಕೇಪ್ ಆಗಿದ್ದಾರೆ. ಆ ಕುರಿತ ವಿಡಿಯೋವೊಂದು ಇಂಟರ್‌ನೆಟ್ ನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಏನಾಯಿತು. ಅವರು ಅಪಘಾತದಿಂದ ಹೇಗೆ ಪಾರಾದರು? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ, ಬನ್ನಿ ತಿಳಿಯೋಣ.

ಜಮ್ಮುವಿನ ಬಹುತೇಕ ಪ್ರದೇಶಗಳು ಬೆಟ್ಟ - ಗುಡ್ಡಗಳಿಂದ ಆವರಿಸಿದ್ದು, ಅದಕ್ಕೆ ತಕ್ಕಂತೆ ಮನೆ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಇಲ್ಲಿ ರಸ್ತೆ ಎತ್ತರದಲ್ಲಿದ್ದರೆ, ಮನೆಗಳು ಕೆಳಭಾಗದಲ್ಲಿರುತ್ತವೆ. ಸದ್ಯ ದೊರೆತ್ತಿರುವ ವಿವರಗಳ ಪ್ರಕಾರ, ಕಿರಿದಾದ ರಸ್ತೆಯಲ್ಲಿ ಹೋಗುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ಎನ್ ಇದ್ದಕ್ಕಿಂದಂತೆ ಸ್ಕಿಡ್ ಆಗಿ, 20 ಅಡಿ ಎತ್ತರದಿಂದ ಕಂದಕಕ್ಕೆ ಉರುಳಿ ಮನೆಯೊಂದರ ಮುಂಭಾಗ ಬಿದ್ದಿದೆ.
ಸ್ಕಾರ್ಪಿಯೋ ಉರುಳಿ ಬಿದ್ದ ರಭಸಕ್ಕೆ ಅದರ ಮೇಲ್ಭಾಗ (ರೂಫ್)ಕ್ಕೆ ಹಾನಿಯಾಗಿದೆ. ಆದರೆ, ಕಾರು ಪಲ್ಟಿಯಾದರೂ ಪಿಲ್ಲರ್‌ಗಳು ಗಟ್ಟಿಯಿದ್ದ ಕಾರಣ, ಅದರ ತೂಕವನ್ನು ತಡೆದುಕೊಂಡಿದೆ. ಜೊತೆಗೆ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಗಾಯಗಳಿಲ್ಲದೆ, ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ. ಈ ಮೂಲಕ ಮಹೀಂದ್ರಾ ಸ್ಕಾರ್ಪಿಯೋ ಎನ್ ತನ್ನ ನಿರ್ಮಾಣ ಗುಣಮಟ್ಟಕ್ಕೆ ತನಗೆ ತಾನೇ ಸರಿಸಾಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಈ ಕಾರಿನ ಪರಿಸ್ಥಿತಿಯನ್ನು ಗಮನಿಸಿದರೆ, 2 - 3 ಬಾರಿ ಪಲ್ಟಿಯಾಗಿ ಕಂದಕಕ್ಕೆ ಉರುಳಿದರಬಹುದು ಎಂದು ಹೇಳಬಹುದು. ಘಟನೆಗೆ ಸ್ಪಷ್ಟ ಕಾರಣವನ್ನು ತಿಳಿಸುವ ಯಾವುದೇ ವಿಡಿಯೋ ತುಣುಕು ಅಥವಾ ಡ್ಯಾಶ್‌ಬೋರ್ಡ್ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಿಲ್ಲ. ಸುರಕ್ಷತೆ ದೃಷ್ಟಿಯಿಂದ ಮಹೀಂದ್ರಾ ಸ್ಕಾರ್ಪಿಯೋ ಎನ್ ಅತ್ಯುತ್ತಮವಾಗಿದೆ. ಅದಕ್ಕೆ ಗ್ಲೋಬಲ್ ಎನ್‌ಸಿಎಪಿಯಿಂದ ಪಡೆದಿರುವ ರೇಟಿಂಗ್ ಸಾಕ್ಷಿಯಾಗಿದೆ.
ಸ್ಕಾರ್ಪಿಯೋ ಎನ್ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25, ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 48ಕ್ಕೆ 28.94 ಅಂಕಗಳನ್ನು ಪಡೆದಿದೆ. ಸೇಫ್ಟಿ ಸಲುವಾಗಿ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ - ಅಸಿಸ್ಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ರೂಪಾಂತರಗಳಿಗೆ ಅನುಗುಣವಾಗಿ ರೂ.13.26 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 2.2 - ಡೀಸೆಲ್ ಎಂಜಿನ್, 2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿರುವ ಮಹೀಂದ್ರಾ ಸ್ಕಾರ್ಪಿಯೋ ಎನ್, 2WD (ಟೂ ವೀಲ್ ಡ್ರೈವ್) 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್ & ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications