Mahindra Scorpio: 17 ಜನ ಪ್ರಯಾಣ: ಆನಂದ್ ಮಹೀಂದ್ರಾ ನೋಡಲೇಬೇಕಾದ ವಿಡಿಯೋ!
ಭಾರತದಲ್ಲಿ ಎಸ್‌ಯುವಿ ಮಾರುಕಟ್ಟೆ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಕಾರಣ ಕೆಲ ಸ್ವದೇಶಿ ಬ್ರಾಂಡ್‌ಗಳ ಎಸ್‌ಯುವಿಗಳಾಗಿವೆ. ಅದರಲ್ಲೂ ಪ್ರಮುಖವಾಗಿ ಟಾಟಾ ಮೋಟಾರ್ಸ್ (Tata Motors) ಹಾಗೂ ಮಹೀಂದ್ರಾ (Mahindra) ಎಸ್‌ಯುವಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸೆಡಾನ್‌ಗಳಿಗಿಂತ ಎಸ್‌ಯುವಿಗಳು ಸದ್ಯ ಭಾರತದಲ್ಲಿ ಕಾರು ಕಂಪನಿಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತಿವೆ.
ಕೆಲವು ಕಂಪನಿಗಳು ತಮ್ಮ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಎಸ್‌ಯುವಿಗಳನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದ್ರೆ, ಇನ್ನೂ ಕೆಲವನ್ನು ಸ್ಥಗಿತಗೊಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹೇಳಬೇಕೆಂದರೆ ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ Mahindra Scorpio ಇಂದಿಗೂ ಉತ್ತಮ ಮಾರಾಟವನ್ನು ಗಳಿಸುತ್ತಿದೆ.

ಮಹೀಂದ್ರಾಗೆ ಈ ಎಸ್‌ಯುವಿಯೊಂದಿಗೆ ಅವಿನಾಭಾವ ಸಂಬಂಧವಿದೆ, ಹೆಸರನ್ನು ಬದಲಿಸಿ ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಬಿಡುಗಡೆ ಮಾಡಿದ್ರೂ ಹಳೆಯ ಸ್ಕಾರ್ಪಿಯೋವನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ. ಇದಕ್ಕೆ ಕಾರಣ ಅದರ ರಗಡ್ ಲುಕ್‌ನೊಂದಿಗೆ ಇಂದಿಗೂ ಗ್ರಾಹಕರಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿರುವುದು. ಒಂದು ಕಾರು ಬರೋಬ್ಬರಿ 2 ದಶಕಗಳಿಂದ ಉಳಿದುಕೊಂಡಿದೆ ಎಂಬುದು ಸಾಮಾನ್ಯ ವಿಷಯವಲ್ಲ.
ಈ ಎಸ್‌ಯುವಿಗೆ ಇಷ್ಟು ಕ್ರೇಜ್ ಬರಲು ಪ್ರಮುಖ ಕಾರಣ, ಅದರ ಅಸಾಧಾರಣ ಸಾಮರ್ಥ್ಯ, ಪವರ್, ಪರ್ಫಾಮೆನ್ಸ್ ಹಾಗೂ ಅದರ ರಗಡ್ ಲುಕ್ ಆಗಿದೆ. ಇಂದಿಗೂ ಆ ವಿನ್ಯಾಸವನ್ನು ಅನ್ನು ಹಾಗೆಯೇ ಉಳಿಸಿಕೊಂಡು ಕಳೆದ ಎರಡು ದಶಕಗಳಲ್ಲಿ ಕಾಲಕ್ಕೆ ತಕ್ಕಂತೆ ಕೆಲವು ಇಂಟೀರಿಯರ್ ಹಾಗೂ ಕೆಲ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆಯೇ ಹೊರತು ತನ್ನ ಐಕಾನಿಕ್ ಲುಕ್ ಅನ್ನು ಮಾತ್ರ ಬದಲಿಸಿಲ್ಲ.

ಇಂದಿಗೂ ಈ ಸ್ಕಾರ್ಪಿಯೋ ಎಸ್‌ಯುವಿಯನ್ನು ಬಳಸುತ್ತಿರುವ ಹಲವರು ಗ್ರಾಹಕರು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಮೊದಲೇ ಹೇಳಿದಂತೆ ಇದರ ಅಸಾಧಾರಣ ಸಾಮರ್ಥ್ಯ ಎಂಥಹದ್ದು ಎಂಬುದನ್ನು ತೋರಿಸುವ ಸಣ್ಣ ವಿಡಿಯೋ ಈಗ ವೈರಲ್ ಆಗಿದೆ. ಬರೋಬ್ಬರಿ 17 ಜನ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದೆ.
ಮಹೀಂದ್ರಾಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಈ ಸ್ಕಾರ್ಪಿಯೋದಲ್ಲಿ 17 ಜನ ಪ್ರಯಾಣಿಸಿದ ವಿಡಿಯೋವನ್ನು X (ಟ್ವಿಟ್ಟರ್)ನಲ್ಲಿ ಹಂಚಿಕೊಳ್ಳಲಾಗಿದೆ. 9 ಆಸನಗಳಿರುವ ಈ ಕಾರಿನಿಂದ ಒಬ್ಬರ ನಂತರ ಒಬ್ಬರಂತೆ 18 ಜನ ಇಳಿಯುವ ವಿಡಿಯೋವನ್ನು ಕಂಡು ಹಲವರು ಬೆರಗಾಗಿದ್ದಾರೆ. ದೇಸಿ ಜನರು ಮದುವೆ ಸಮಾರಂಭಗಳಿಗೆ ಹೋದಾಗ ಹೀಗಿರುತ್ತೆ ನೋಡಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಒಂದು ಅಸಾಧಾರಣ ಎಸ್‌ಯುವಿ, ಸಿನಿಮಾಗಳಿಂದ ಹಿಡಿದು ರಾಜಕಾರಣಿಗಳವರೆಗೆ ಒಂದು ಕಾಲದಲ್ಲಿ ಭರ್ಜರಿಯಾಗಿ ಮಿಂಚಿದ್ದ ಕಾರಾಗಿದೆ. ಅಂದಿನ ಕಾಲಕ್ಕೆ ಟಾಟಾ ಸುಮೋ, ಟೊಯೊಟಾ ಕ್ವಾಲಿಸ್, ಸಫಾರಿನಂತಹ ಲೆಜೆಂಡರಿ ಕಾರುಗಳ ನಡುವೆ ಮಾರುಕಟ್ಟೆಯಲ್ಲಿ ತನಗೊಂದು ಸ್ಥಾನ ಭದ್ರಪಡಿಸಿಕೊಂಡಿದ್ದ ಈ ಎಸ್‌ಯುವಿ ಮಹೀಂದ್ರಾಗೆ ಚಿನ್ನದ ಮೊಟ್ಟೆಯಾಗಿತ್ತು.
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಆನಂದ್ ಮಹೀಂದ್ರಾ ಅವರವರೆಗೆ ತಲುಪುತ್ತದೆ ಎಂದು ನಾವು ಭಾವಿಸಿದ್ದೇವೆ. ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ನೋಡಿದ್ರೆ ಅವರ ಪ್ರತಿಕ್ರಿಯೆ ಏನಾಗಿರಬಹುದು ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ಹೊಸ ಕಾರು, ಹೊಸ ಬೈಕ್ ಕುರಿತ ನವೀಕೃತ ಸುದ್ದಿಗಳನ್ನು ತ್ವರಿತವಾಗಿ ಓದುಗರಿಗೆ ನೀಡುತ್ತದೆ.
ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications