ಶಿಕ್ಷಣಾಧಿಕಾರಿಯ ಮಹೀಂದ್ರಾ ಸ್ಕಾರ್ಪಿಯೋ ಧ್ವಂಸಗೊಳಿಸಿದ ವಿದ್ಯಾರ್ಥಿನಿಯರು! ಯಾಕೆ ಗೊತ್ತಾ?

ದೇಶದ ಹಲವೆಡೆ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಹಲವಾರು ಪ್ರದೇಶಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿರುವ ಶಾಲೆಗಳಿವೆ. ಇತ್ತೀಚೆಗೆ, ಬಿಹಾರದ ಅಂತಹ ಒಂದು ಶಾಲೆಯ ವಿದ್ಯಾರ್ಥಿನಿಯರು ಅಸಮರ್ಪಕ ಸೌಲಭ್ಯಗಳ ವಿರುದ್ಧ ಪ್ರತಿಭಟಿಸಿ, ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಕಾರು ಧ್ವಂಸಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನೀವು ಇಲ್ಲಿ ನೋಡುತ್ತಿರುವ ವೀಡಿಯೊವನ್ನು PTI X (ಟ್ವಿಟರ್) ನಲ್ಲಿ ಹಂಚಿಕೊಂಡಿದೆ. ಬಿಹಾರದ ವೈಶಾಲಿ ಜಿಲ್ಲೆಯ ಮಹನಾರ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. ವರದಿಗಳ ಪ್ರಕಾರ, ವಿದ್ಯಾರ್ಥಿನಿಯರ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ಮಾಡಿದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

mahindra-scorpio-suv-vandalized-outrage-students

ವೈರಲ್ ಆಗಿರುವ ವೀಡಿಯೊದಲ್ಲಿ, ಶಾಲಾ ಸಮವಸ್ತ್ರದಲ್ಲಿರುವ ಹುಡುಗಿಯರ ಗುಂಪು ಮಹೀಂದ್ರಾ ಸ್ಕಾರ್ಪಿಯೊ ಎಸ್‌ಯುವಿಯನ್ನು ಧ್ವಂಸಗೊಳಿಸುವುದನ್ನು ಕಾಣಬಹುದು. ಹೆಚ್ಚಿನ ಹುಡುಗಿಯರು ಕೋಲುಗಳನ್ನು ಹಿಡಿದು ಕಾರನ್ನು ಹೊಡೆಯುತ್ತಿದ್ದರೆ, ಮತ್ತೊಂದೆಡೆ ಕಾರಿನ ಮುಂದೆ ನಿಂತಿರುವ ಅವರಲ್ಲಿ ಒಬ್ಬರು ಬಂಡೆಯನ್ನು ಎತ್ತಿ ಎಸ್‌ಯುವಿ ಮುಂಭಾಗದ ವಿಂಡ್‌ಶೀಲ್ಡ್‌ಗೆ ಎಸೆಸಿದ್ದಾರೆ.

ಕಾರಿನ ವಿಂಡ್‌ಶೀಲ್ಡ್ ತೀವ್ರ ಹಾನಿಗೊಳಗಾಗಿದೆ. ವಿದ್ಯಾರ್ಥಿಗಳು ನೀರಿನ ಕ್ಯಾನ್‌ಗಳನ್ನು ಎಸೆಯುವುದನ್ನು ಸಹ ನಾವು ಗಮನಿಸಬಹುದು. ಕಾರನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡುತ್ತಿರುವ ಪ್ರೇಕ್ಷಕರನ್ನು ನೋಡಬಹುದು, ಆದರೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಕಾಣಿಸುತ್ತಿಲ್ಲ. ವಿದ್ಯಾರ್ಥಿನಿಯರ ಆರೋಪಗಳ ಆಧಾರದ ಮೇಲೆ ದೌರ್ಜನ್ಯ ಎಸಗಿ ಆರೋಪ ಹೊತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ, ತನಗೆ ಹುಷಾರಿಲ್ಲ, ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದ್ದಾರೆ.

mahindra-scorpio-suv-vandalized-outrage-students

ಇಲ್ಲಿನ ಮದನ್ ಚೌಕ್ ಮತ್ತು ಪಟೇಲ್ ಚೌಕ್ ಬಳಿಯ ಮಹನಾರ್ ಮೊಹಿಯುದ್ದಿನಗರದ ಮುಖ್ಯ ರಸ್ತೆಯನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ತಡೆದಿದ್ದರು. ಈ ಘಟನೆಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಘಟನೆಗೆ ಶಿಕ್ಷಣ ಇಲಾಖೆ ಅಥವಾ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ಪ್ರಸ್ತುತ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ತಿಳಿದುಬಂದಿಲ್ಲ. ವೀಡಿಯೊಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ ರೀತಿಯನ್ನು ಬೆಂಬಲಿಸಿದರೆ, ಇತರರು ಹಿಂಸಾತ್ಮಕ ಪ್ರದರ್ಶನ ಮತ್ತು ಕಾರು ವಿಧ್ವಂಸಕತೆ ಅನಗತ್ಯ ಎಂದು ಟೀಕಿಸಿದ್ದಾರೆ.

mahindra-scorpio-suv-vandalized-outrage-students

ನಿಜಕ್ಕೆ ಇದರಿಂದ ಏನಾದರೂ ಉಪಯೋಗವಿದಯೇ, ಇದು ಪ್ರತಿಭಟಿಸುವ ಮಾರ್ಗವಲ್ಲ. ನಿಜವಾದ ಶಿಕ್ಷಣವು ಇದನ್ನು ಕಲಿಸುವುದಿಲ್ಲ, ಬದಲಾಗಿ ಶಿಕ್ಷಣವು ಹಿಂಸೆಯಿಲ್ಲದೇ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಕಲಿಸುತ್ತದೆ. ಬಾಲಕಿಯರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ನಮಗೆ ಖಚಿತವಿಲ್ಲ.

ಅಧಿಕಾರಿಗಳು ಈ ವಿಷಯವನ್ನು ಕೂಲಂಕಷವಾಗಿ ಚರ್ಚಿಸಿ ಶಾಲೆಯಲ್ಲಿ ಈ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ತೋರಬೇಕಿದೆ. ಹಾಗೆಯೇ ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದ ಯುವತಿಯರಿಗೆ ಬುದ್ಧಿ ಹೇಳಬೇಕಿದೆ. ಶಾಲಾ ವಿದ್ಯಾರ್ಥಿನಿಯರ ಈ ಕೃತ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 16, 2023, 8:30 [IST]
English summary
Mahindra scorpio suv vandalized outrage students
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+