ಮದುವೆಯಲ್ಲಿ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಡಾನ್ಸ್ ಮಾಡಿಸಿದ ಪುಂಡರು: ವಾಹನ ವಶ

ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳಲ್ಲಿ ಸಾಹಸ ಪ್ರದರ್ಶಿಸುವುದು ಸಂಪೂರ್ಣವಾಗಿ ಕಾನೂನುಬಾಹಿರ. ಆದರೂ ಕೆಲವು ಜನರು ಇಂತಹ ಸಾಹಸಗಳನ್ನು ಪ್ರದರ್ಶಿಸಿ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಾರೆ. ಇದೆ ರೀತಿ ಇತ್ತೀಚೆಗೆ ಮಹೀಂದ್ರಾ ಥಾರ್ ಎಸ್‍ಯುವಿ ಡ್ಯಾನ್ಸ್ ಮಾಡುವ ವೀಡಿಯೊ ಸಖತ್ ವೈರಲ್ ಆಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಈ ಮಹೀಂದ್ರಾ ಥಾರ್ ಆಫ್-ರೋಡರ್‌ಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಈ ಪ್ರಬಲ ಆಫ್-ರೋಡ್ ಎಸ್‍ಯುವಿಯಲ್ಲಿ ಸಾಹಸ ಪ್ರದರ್ಶಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ನೋಡಬಹುದು. ಇದೇ ರೀತಿ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಡ್ಯಾನ್ಸ್ ಮಾಡಿಸುವಂತೆ ಡ್ರೈವ್ ಮಾಡುವ ವಿಡಿಯೋ ವೈರಲ್ ಆಗಿದೆ.

ಮದುವೆಯಲ್ಲಿ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಡಾನ್ಸ್ ಮಾಡಿಸಿದ ಪುಂಡರು

ಈ ವಿಡಿಯೋ ಟ್ವಿಟ್ಟರ್ ಮತ್ತು ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ನಾವು ಹಳೆಯ ತಲೆಮಾರಿನ ಮಹೀಂದ್ರ ಥಾರ್ ಎಸ್‍ಯುವಿಯನ್ನು ನೋಡಬಹುದು. ಮದುವೆಯಲ್ಲಿ ಇವರು ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ತೆರಳಿದ್ದಾರೆ. ಮದುವೆಗೆ ಹೆಚ್ಚಾಗಿ ಮಾಡಿಫೈ ವಾಹನಗಳು ಬಳುಸುವುದು ಟ್ರೆಂಡ್ ಆಗಿದೆ. ವೀಡಿಯೊದಲ್ಲಿ ಕಾಣುವ ಮಹಿಂದ್ರಾ ಥಾರ್ ಕೂಡ ಮಾಡಿಫೈಗೊಂಡ ಮಾದರಿಯಾಗಿದೆ. ಮ್ಯೂಸಿಕ್ ಹಾಕಿ ಅದರಂತೆ ಮಹಿಂದ್ರಾ ಥಾರ್ ಅನ್ನು ಕುಣಿಸುತ್ತಿರುದನ್ನು ವೀಡಿಯೊದಲ್ಲಿ ನೋಡಬಹುದು.

ಈ ಎಸ್‍ಯುವಿನಲ್ಲಿ ಆಫ್ಟರ್‌ಮಾರ್ಕೆಟ್ ಸನ್‌ರೂಫ್‌ನಿಂದ ಹೊರಗೆ ಯುವಕರು ನಿಂತಿದ್ದಾರೆ.ಈ ಎಸ್‍ಯುವಿಯ ಡ್ರೈವರ್ ಆಕ್ಸೀಲೆಟರ್ ಮತ್ತು ಬ್ರೇಕ್‌ಗಳೊಂದಿಗೆ ಆಟವಾಡಿದಾಗ ಕಾರಿನ ಮುಂಭಾಗವು ಪುಟಿದೇಳುವ ರೀತಿಯಲ್ಲಿ ಎಸ್‌ಯುವಿಯ ಮಾಲೀಕರು ಎಸ್‌ಯುವಿಯ ಸಸ್ಪೆನ್ಶನ್ ಅನ್ನು ಟ್ಯೂನ್ ಮಾಡಿರಬಹುದು. ಆನ್‌ಲೈನ್‌ನಲ್ಲಿ ಲಭ್ಯವಿರುವ ವೀಡಿಯೊದಲ್ಲಿ ಜೋರಾಗಿ ಮ್ಯೂಸಿಕ್ ಅನ್ನು ಕೇಳಬಹುದು. ಮ್ಯೂಸಿಕ್ ತಾಳಕ್ಕೆ ತಕ್ಕಂತೆ ಮಹಿಂದ್ರಾ ಥಾರ್ ಎಸ್‍ಯುವಿಯನ್ನು ಕುಣಿಸಿ ಸಂಭ್ರಮಿಸುತ್ತಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಡ್ರೈವರ್ ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಸಾಹಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎದುರು ಕಡೆಯಿಂದ ಬರುವ ಬೈಕ್ ಪಕ್ಕದಲ್ಲಿ ನಿಲ್ಲುವುದನ್ನು ನಾವು ನೋಡಬಹುದು. ಆ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಇತರ ರಸ್ತೆ ಬಳಕೆದಾರರ ಬಗ್ಗೆ ಕಾಳಜಿ ವಹಿಸದೆ ಚಾಲಕನು ಸಾಹಸ ಪ್ರದರ್ಶನ ಮತ್ತು ಜೋರಾಗಿ ಮ್ಯೂಸಿಕ್ ಹಾಕಿ ಸಂಭ್ರಮಿಸುತ್ತಿದ್ದಾರೆ.

ಈ ಡ್ಯಾನ್ಸ್ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ, ಪೊಲೀಸರು ನೋಡಿ ಇದರ ಬಗ್ಗೆ ವಿಚಾರಣೆಯನ್ನು ನಡೆಸಿದ್ದಾರೆ. ಪೊಲೀಸರು ವಶಪಡಿಸಿ ಚಾಲಕನ ವಿರುದ್ದ ಕ್ರಮ ಕೈಗೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ, ಪೊಲೀಸರು ಅಜಾಗರೂಕ ಚಾಲನೆ ಮತ್ತು ಜೋರಾಗಿ ಮ್ಯೂಸಿಕ್ ಹಾಕಿದ ಕಾರಣ ಕಾರನ್ನು ವಶಪಡಿಸಿಕೊಂಡಿದ್ದಾರೆ. ವರನ ಸಹೋದರ ಎನ್ನಲಾದ ಚಾಲಕನನ್ನೂ ಬಂಧಿಸಲಾಗಿದೆ. ವೀಡಿಯೊದಲ್ಲಿ, ಮಹೀಂದ್ರ ಥಾರ್‌ನ ಸನ್‌ರೂಫ್‌ನಿಂದ ಮೂವರು ಯುವಕರು ನಿಂತಿರುವುದನ್ನು ನಾವು ನೋಡುತ್ತೇವೆ.

ಇನ್ನು ಈ ಸಾಹಸದಲ್ಲಿ ಭಾಗಿಯಾಗಿರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗಾಜಿಯಾಬಾದ್‌ನ ವೇವ್ ಸಿಟಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ರವಿಪ್ರಕಾಶ್ ತಿಳಿಸಿದ್ದಾರೆ. ಇನ್ನು ವೀಡಿಯೊದಲ್ಲಿರುವ ಥಾರ್ ಹಳೆಯ ತಲೆಮಾರಿನ ಮಾದರಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ.

ಈ ಎಸ್‍ಯುವಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Article Published On: Tuesday, March 7, 2023, 13:30 [IST]
English summary
Mahindra thar dancing in wedding procession viral video details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+