ಬೈಕ್‌ ಸವಾರನ ಬೇಜವಾಬ್ದಾರಿಯ ರೈಡ್‌: ಅನ್ಯಾಯವಾಗಿ ಸ್ಕಾರ್ಪಿಯೋ - ಥಾರ್ ಡಿಕ್ಕಿ, ಹಿಂಗಾದ್ರೆ ಹೆಂಗೆ?

ಭಾರತೀಯ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವುದೆಂದರೆ ಅದೊಂದು ಸವಾಲಿನ ಕೆಲಸ ಎಂದರೆ ತಪ್ಪಾಗಲಾರದು. ಇದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರೆಡೆ ವಿಡಿಯೋಗಳನ್ನು ನೋಡಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣ ಒಂದು ನಮ್ಮಲ್ಲಿರುವ ರಸ್ತೆಗಳು ಮತ್ತೊಂದು ನಮ್ಮ ಜನರ ಮನೋಭಾವ.

ಕೆಲವೊಮ್ಮೆ ಯಾರೋ ಒಬ್ಬರು ಮಾಡಿದ ತಪ್ಪುಗಳಿಂದ ಹಲವರು ಕಷ್ಟ - ನಷ್ಟ ಅನುಭವಿಸಬೇಕಾಗುತ್ತದೆ. ಈ ಮಾತಿಗೆ ಸಾಥ್ ನೀಡುವ ನಿದರ್ಶನವೊಂದು ಇತ್ತೀಚಿನ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಬೈಕ್‌ ಸವಾರನೊಬ್ಬ ಮಾಡಿದ ತಪ್ಪಿಗೆ ಬೇರೆ ಎರಡು ವಾಹನಗಳು ಅಪಘಾತಕ್ಕೆ ಈಡಾದ ಘಟನೆ ನಡೆದಿದೆ.

Mahindra Thar Hits Mahindra Scorpio N

ಹೌದು ಸ್ಕಾರ್ಪಿಯೋ ಎನ್‌ ಮುಂದೆ ಚಲಿಸುತ್ತಿದ್ದ ದ್ವಿಚಕ್ರ ಸವಾರನೊಬ್ಬ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ ಕೂಡಲೇ ಸ್ಕಾರ್ಪಿಯೋ ಸಹ ಬ್ರೇಕ್ ಹಾಕಿದ್ದು ಆದರೆ ಅದರ ಹಿಂದೆ ಬರುತ್ತಿದ್ದ ಥಾರ್‌ (Mahindra Thar) ಚಾಲಕ ಇದನ್ನು ಗುರುತಿಸುವಲ್ಲಿ ವಿಫಲವಾಗಿ ಸ್ಕಾರ್ಪಿಯೋ ಗೆ ಗುದ್ದಿ ಅಪಘಾತವಾದ ಘಟನೆ ನಡೆದಿದೆ.

ಇನ್ನು ಈ ವಿಡಿಯೋವನ್ನು ಸ್ಕಾರ್ಪಿಯೋ ಎನ್‌ ನಲ್ಲಿ ಪ್ರಯಾಣಿಸುತ್ತಿದ್ದ ಒಂದು ಫ್ಯಾಮಿಲಿ ಟೂರರ್‌ ವ್ಲಾಗರ್‌ ಒಬ್ಬರು ತಮ್ಮ ಯ್ಯೂಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಲಡಾಕ್‌ಗೆ ಒಂದು ರೋಡ್ ಟ್ರಿಪ್‌ ಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Mahindra Thar Hits Mahindra Scorpio N

ಇನ್ನು ಚಲಿಸುತ್ತಿದ್ದ ಬೈಕ್‌ ಸವಾರ ತಿರುವೊಂದರಲ್ಲಿ ಪೊಲೀಸ್‌ ವಾಹನ ತಪಾಸಣೆ ಮಾಡುತ್ತಿದ್ದಾರೆಂದು ತಿಳಿದ ಕೂಡಲೇ ಅದನ್ನು ತಪ್ಪಿಸುವ ಸಲುವಾಗಿ, ಬೈಕ್‌ ಸವಾರ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ್ದಾನೆ. ಹೀಗಾಗಿ ಒಂದೇ ವೇಗದಲ್ಲಿ ಚಲಿಸುತ್ತಿದ್ದ ವಾಹನ ಬ್ರೇಕ್‌ ಹಾಕಿದಾಗ ಬೈಕ್ ರಸ್ತೆ ಮಧ್ಯೆಯೇ ನಿಂತಿದೆ.

ಇದರಿಂದ ಕಕ್ಕಾ ಬಿಕ್ಕಿಯಾದ ಹಿಂದೆ ಬರುತ್ತಿದ್ದ ಸ್ಕಾರ್ಪಿಯೋ ಎನ್‌ ಸವಾರ ಸಹ ಬ್ರೇಕ್‌ ಹಾಕಿದ್ದಾನೆ. ಇದೇ ಸಂಧರ್ಭದಲ್ಲಿ ಸ್ಕಾರ್ಪಿಯೋ ಹಿಂದೆ ಬರುತ್ತಿದ್ದ ಮಹೀಂದ್ರಾ ಥಾರ್‌ ಸವಾರ ಸಹ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ಹಿಂಬದಿ ಬಂಪರ್‌ಗೆ ತಾಗಿಸಿದ್ದಾನೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇದರ ಪರಿಣಾಮವಾಗಿ ಅಪಘಾತವಾದ ಮಹೀಂದ್ರಾ ಥಾರ್‌ನ ಮುಂದಿನ ಗ್ರಿಲ್ ಮತ್ತು ಮುಂಬದಿಯ ಬಂಪರ್‌ಗೆ ಹಾನಿಯಾಗಿದ್ದು, ಅದೇ ರೀತಿ ಥಾರ್‌ ಕೈಯಲ್ಲಿ ಗುದ್ದಿಸಿಕೊಂಡ ಸ್ಕಾರ್ಪಿಯೋ ಎನ್‌ ನ ಹಿಂಬದಿ ಬಂಪರ್‌ ಸಹ ಕೊಂಚ ಜಖಂ ಆಗಿದೆ. ಈ ರೀತಿ ಬೇಜಾವಬ್ದಾರಿ ತನದಿಂದ ಬೈಕ್ ಓಡಿಸಿದರ ಪರಿಣಾಮ ಯಾರೋ ದಂಡ ತೆರುವಂತೆ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 28, 2023, 14:45 [IST]
English summary
Mahindra thar hits mahindra scorpio n due to bikers error
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+