ಥಾರ್‌ಗೆ ಗುದ್ದಿದ ಘಟಾನುಘಟಿ ಟ್ರ್ಯಾಕ್ಟರ್‌ ಎರಡು ಭಾಗ: ನೆಕ್ಸ್ಟ್?ಲೆವೆಲ್‌ ಬಿಲ್ಡ್‌ಕ್ವಾಲಿಟಿ ಅಲ್ಲವೇ?

ವರ್ಷಗಳು ಕಳೆಯುತ್ತಿರುವಂತೆ ನಮ್ಮ ದೇಶದಲ್ಲಿ ಉತ್ತಮ ಸ್ಥಿತಿಯ ಹೆದ್ದಾರಿಗಳ ನಿರ್ಮಾಣವೂ ಹೆಚ್ಚಾಗುತ್ತಾ ಹೋಗುತ್ತಿದೆ. ಒಳ್ಳೆಯ ರಸ್ತೆಗಳ ನಿರ್ಮಾಣದ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಪಘಾತಗಳ ಸಂಖ್ಯೆಯು ಅತಿಯಾಗುತ್ತಿದೆ. ಇದೀಗ ಮಹೀಂದ್ರಾ ಥಾರ್‌ ಮತ್ತು ಟ್ರ್ಯಾಕ್ಟರ್‌ ನಡುವೆ ನಡೆದ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಪ್ರತೀಕ್‌ ಸಿಂಗ್‌ ಎಂಬ ಯ್ಯೂಟ್ಯೂಬರ್‌ ತನ್ನ ಅಕೌಂಟ್‌ನಲ್ಲಿ ಮಹೀಂದ್ರಾ ಥಾರ್‌ (Mahindra Thar) ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಅಪಘಾತದ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು ಇದು ನೆಟ್ಟಿಗರ ಗಮನ ಸೆಳೆದಿದೆ. ಘಟನೆಯು ಗುಜರಾಥ್‌ನ ಉನಾಭವನಗರ್‌ ಹೈವೇಯಲ್ಲಿ ನಡೆದಿದ್ದು ವಿಡಿಯೋವನ್ನು ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಪ್ರತೀಕ್‌ ಸಿಂಗ್‌ನ ಫಾಲೋವರ್‌ ಒಬ್ಬರು ಪೋಸ್ಟ್‌ ಮಾಡಿದ್ದಾರೆ.

Mahindra Thar hits tractor

ಥಾರ್‌ ಮತ್ತು ಟ್ರ್ಯಾಕ್ಟರ್‌ ನಡುವೆ ನಡೆದ ಅಪಘಾತದಲ್ಲಿ ಥಾರ್‌ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್‌ ಎರಡು ಭಾಗವಾಗಿ ಹೋಗಿದೆ ಎಂದರೆ ನೀವು ನಂಬಲೇ ಬೇಕು. ಇದು ಭಾರತದ ಹೆಮ್ಮೆಯ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ತಯಾರಿಸಿದ ಥಾರ್‌ನ ಬಿಲ್ಡ್ ಕ್ವಾಲಿಟಿ. ಟ್ರ್ಯಾಕ್ಟರ್‌ ಹೆದ್ದಾರಿಯಲ್ಲಿ ಚಲಿಸುತ್ತಿತ್ತು.

ಆದರೆ, ಟ್ರ್ಯಾಕ್ಟರ್‌ ಒಮ್ಮೆಲೇ ರಾಂಗ್‌ ಸೈಡ್‌ಗೆ ಹೋಗಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಟ್ರ್ಯಾಕ್ಟರ್‌ ಒಮ್ಮೆಲೇ ರಾಂಗ್ ಸೈಡ್‌ಗೆ ಬರುತ್ತಿದ್ದಂತೇ ಮುಂದಿನಿಂದ ಬರುತ್ತಿದ್ದ ಥಾರ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಇನ್ನು ಅಪಘಾತವನ್ನು ಗಮನಿಸಿದರೆ ಮಹೀಂದ್ರಾ ಥಾರ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್‌ ಇಗ್ಭಾಗವಾಗಿ ಹೋಗಿದೆ. ಇನ್ನೂ ಹೇಳಬೇಕೆಂದರೆ ಟ್ರ್ಯಾಕ್ಟರ್‌ನ ಮುಂಭಾಗದ ಚಕ್ರವೇ ನಾಪತ್ತೆಯಾಗಿದೆ. ಟ್ರ್ಯಾಕ್ಟರ್‌ನ ಹಿಂಭಾಗ ರಸ್ತೆಯಲ್ಲಿ ಮತ್ತು ಮುಂಭಾಗ ಡಿವೈಡರ್‌ ಮೇಲೆ ಬಿದ್ದಿರುವುದನ್ನು ಥಾರ್‌ನ ಬಿಲ್ಡ್‌ ಕ್ವಾಲಿಟಿ ಏನು ಎಂಬುದನ್ನು ಸಾರಿ ಹೇಳುತ್ತಿದೆ.

ವಿಡಿಯೋದಲ್ಲಿ ಕಾಣುವ ಪ್ರಕಾರ ಟ್ರ್ಯಾಕ್ಟರ್‌ ತುಂಬಾ ಹಾನಿಯಾಗಿದೆ. ಇನ್ನು ಅಪಘಾತಕ್ಕೆ ಒಳಗಾದ ಮಹೀಂದ್ರಾ ಥಾರ್‌ ಬಗ್ಗೆ ಹೇಳುವುದಾದರೆ ಥಾರ್‌ ಸಹ ಅಪಘಾತದಲ್ಲಿ ಹಾನಿಗೊಳಗಾಗಿದೆ. ಥಾರ್‌ ಬಾನೆಟ್‌ ನುಜ್ಜುಗುಜ್ಜಾಗಿದ್ದು, ಅದರ ಹೆಡ್‌ಲೈಟ್‌, ಬಂಪರ್‌, ಗ್ರಿಲ್‌, ಮುಂಭಾಗದ ಟೈರ್‌ ಮುಂತಾದ ಭಾಗಗಳು ಹಾನಿಗೊಳಗಾಗಿದೆ.

ಭಾರತದಲ್ಲಿ ಸದ್ಯಕ್ಕೆ ಇರುವ ಹೆಸರಾಂತ ಆಫ್‌ರೋಡ್‌ ವಾಹನಗಳಲ್ಲಿ ಥಾರ್‌ ಸಹ ಒಂದು. ಯಾವುದೇ ರೀತಿಯ ಭೌಗೋಳಿಕ ಪ್ರದೇಶಗಳಿಗೂ ಇದು ಒಗ್ಗಿಕೊಳ್ಳುವ ಗುಣವನ್ನು ಹೊಂದಿದೆ. ಆದರೆ ಹೈವೇಗಳಲ್ಲಿ ಇದನ್ನು ಓಡಿಸುವಾಗ ಚಾಲಕ ಕೊಂಚ ಎಚ್ಚರ ವಹಿಸಬೇಕು. ಯಾವುದಾದರೂ ಸಣ್ಣ ವಾಹನಕ್ಕೆ ಇದು ತಾಗಿದರೆ ವಾಹನದಲ್ಲಿರುವ ಪ್ರಯಾಣಿಕರಿಗೆ ಹಾನಿಯಾಗುವುದಂತೂ ಖಂಡಿತ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 10, 2023, 13:50 [IST]
English summary
Mahindra thar hits tractor tractor splits into two pieces
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+