ನ್ಯಾನೋ ಕಾರಿಗೆ ಗುದ್ದಿ ರಸ್ತೆಯಲ್ಲಿ ಮಕಾಡೆ ಮಲಗಿದ ಬಲಿಷ್ಟ ಆಫ್‌ರೋಡರ್‌ ಮಹೀಂದ್ರಾ ಥಾರ್‌

ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ಇದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ವರದಿಯಾದ ಮಹೀಂದ್ರಾ ಥಾರ್‌ ಮತ್ತು ಟಾಟಾ ನ್ಯಾನೋ ನಡುವೆ ಸಂಭವಿಸಿದ ಅಪಘಾತವೊಂದರಲ್ಲಿ ನ್ಯಾನೋ ಕಾರ್‌ಗೆ ಗುದ್ದಿದ ಬಲಿಷ್ಟ ಥಾರ್‌, ಪಲ್ಟಿಯಾಗಿ ತಲೆಕೆಳಗಾಗಿ ಬಿದ್ದ ರೀತಿಯಲ್ಲಿ ಕಾಣಿಸಿಕೊಂಡಿರುವ ಘಟನೆಯೊಂದು ನಡೆದಿದೆ.

ಚತ್ತೀಸ್‌ಘರ್‌ ದರ್ಗ್‌ ಎಂಬಲ್ಲಿ ನಡೆದ ಅಪಘಾತದಲ್ಲಿ ಮಹೀಂದ್ರಾ ಥಾರ್‌ ತಲೆಕೆಳಗಾಗಿ ಬಿದ್ದಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಥಾರ್‌ ಕಾರಿಗೆ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಫ್ಯಾನ್ಸ್‌ ಇದ್ದಾರೆ. ಬಲಿಷ್ಟ ರಗಡ್‌ ಲುಕ್‌ ಹೊಂದಿರುವಂತಹ ಥಾರ್‌ ಆಫ್‌ರೋಡ್‌ ವಾಹನವೂ ಹೌದು. 4*2 ಮತ್ತು 4*4 ಆವೃತ್ತಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ಮಹೀಂದ್ರಾ ಥಾರ್ ಎಸ್‌ಯುವಿ ಯನ್ನು‌ ಬಳಸಿಕೊಂಡು ಆಫ್‌ರೋಡ್‌ ಪ್ರಿಯರು ಪಕ್ಕಾ ಆಫ್‌ರೋಡ್‌ ಅಡ್ವೆಂಚರ್‌ಗಳನ್ನು ಮಾಡಬಹುದಾಗಿದೆ.

ನ್ಯಾನೋ ಕಾರಿಗೆ ಗುದ್ದಿ ರಸ್ತೆಯಲ್ಲಿ ಮಕಾಡೆ ಮಲಗಿದ ಬಲಿಷ್ಟ ಆಫ್‌ರೋಡರ್

ವರದಿಗಳ ಪ್ರಕಾರ, ಮಹೀಂದ್ರಾ ಥಾರ್‌ ದರ್ಗ್‌ ಎಂಬಲ್ಲಿ ಇರುವ ಜಂಕ್ಷನ್‌ ಅನ್ನು ವೇಗವಾಗಿ ದಾಟುತ್ತಿತ್ತು. ಆದರೆ ಅದೇ ಸಮಯದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಟಾಟಾ ನ್ಯಾನೋ ಕಾರ್‌ ಸಹ ಬಂದಿದೆ. ವೇಗವಾಗಿ ಬರುತ್ತಿದ್ದ ಥಾರ್‌, ನ್ಯಾನೋ ಕಾರ್‌ಗೆ ಅಡ್ಡಲಾಗಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಮಹೀಂದ್ರಾ ಥಾರ್‌ ಪಲ್ಟಿ ಹೊಡೆದಿದೆ ಎಂದು ಅಪಘಾತ ನಡೆದಾಗ ಸ್ಥಳದಲ್ಲಿದ್ದ ನೋಡುಗರು ತಿಳಿಸಿದ್ದಾರೆ.

ಅಪಘಾತ ನಡೆದಾಗ ಟಾಟಾ ನ್ಯಾನೋ ಕಾರಿಗೂ ಹಾನಿಗಳು ಸಂಭವಿಸಿದೆಯಾದರೂ ಥಾರ್‌ ರೀತಿಯಲ್ಲಿ ಪಲ್ಟಿಯಾಗಿಲ್ಲ. ಇನ್ನು ಅಪಘಾತದಲ್ಲಿ ಯಾರಿಗೂ ಸಹ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದ್ದು, ಟಾಟಾ ನ್ಯಾನೊ ಕಾರಿನ ಮುಂಭಾಗ ಕೊಂಚ ಜಖಂಗೊಂಡಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನ್ಯಾನೋ ಕಾರುಗಳಲ್ಲಿ ಎಂಜಿನ್‌ ಕಾರಿನ ಹಿಂಭಾಗದಲ್ಲಿ ಇರುವುದರಿಂದ ಅಪಘಾತದಲ್ಲಿ ಕಾರಿನ ಇಂಜಿನ್‌ಗೆ ಯಾವುದೇ ರೀತಿಯ ಹಾನಿಯಾಗಿಲ್ಲ, ಕೇವಲ ಮುಂಭಾಗವಷ್ಟೇ ಕೊಂಚ ನುಜ್ಜು ಗುಜ್ಜಾಗಿದೆ.

ಮಹೀಂದ್ರಾ ಥಾರ್‌ ಎಸ್‌ಯುವಿಯು ಗ್ಲೋಬಲ್‌ ಎನ್‌-ಕ್ಯಾಪ್‌ (N-CAP) ಕ್ರ್ಯಾಶ್‌ ಟೆಸ್ಟ್‌ನಲ್ಲಿ 4 ಸ್ಟಾರ್‌ ರೇಟಿಂಗನ್ನು ಪಡೆದುಕೊಂಡಿದೆ. ಹಾಗಾಗಿಯೇ ಇದನ್ನು ಸುರಕ್ಷಿತವಾದ ಎಸ್‌ಯುವಿ ಎಂದರೆ ತಪ್ಪಾಗಲಾರದು. ಮಾತ್ರವಲ್ಲದೇ ಇದರ ರಗಡ್‌ ಲುಕ್‌ನಿಂದಾಗಿಯೇ ತಿಳಿಯುತ್ತದೆ ಇದರ ಬಿಲ್ಡ್‌ ಕ್ವಾಲಿಟಿ ಎಂತದ್ದು ಎಂದು. ಥಾರ್‌ನಲ್ಲಿ ಸುರಕ್ಷಾ ಫೀಚರ್‌ಗಳು ಸಹ ಹೇರಳವಾಗಿದೆ. ಉದಾ: ಕಾರಿನ ಮುಂಭಾಗದಲ್ಲಿ ಡ್ಯುಯಲ್‌ ಫ್ರಂಟ್‌ ಏರ್‌ಬ್ಯಾಗ್‌, ಇಬಿಡಿ+ಎಬಿಸ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ರೇರ್‌ ಪಾರ್ಕಿಂಗ್‌ ಸೆನ್ಸಾರ್ಸ್‌ ಇತ್ಯಾದಿ.

ಇನ್ನೊಂದು ಕಡೆ ಟಾಟಾ ನ್ಯಾನೋ ಗ್ಲೋಬಲ್‌ ಎನ್‌-ಕ್ಯಾಪ್‌ (N-CAP) ಕ್ರ್ಯಾಶ್‌ ಟೆಸ್ಟ್‌ನಲ್ಲಿ 0 ರೇಟಿಂಗನ್ನು ಪಡೆದ ಕಾರು. 2014 ರಲ್ಲಿ ನಡೆದ ಕ್ರ್ಯಾಶ್‌ ಟೆಸ್ಟ್‌ನಲ್ಲಿ ನ್ಯಾನೋ ರೇಟಿಂಗನ್ನು ಪಡೆದುಕೊಂಡಿದೆ. ಆದರೆ ಇಲ್ಲಿ ಮಹೀಂದ್ರಾ ಥಾರ್‌ ಎಸ್‌ಯುವಿಯು ನ್ಯಾನೊ ಕಾರ್‌ಗೆ ಗುದ್ದಿ ಪಲ್ಟಿ ಹೊಡೆದಿರುವುದಕ್ಕೂ ಕ್ರ್ಯಾಶ್‌ ಟೆಸ್ಟ್‌ಗೂ ಯಾವುದೇ ಸಂಭಂಧವಿಲ್ಲ. ಅಪಘಾತದಲ್ಲಿ ಕಾರು ಪಲ್ಟಿಯಾಗಲು ಎದುರಿದ್ದ ಕಾರು ಯಾವುದೆಂದು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಇನ್ನೂ ಹಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ.

ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಹೋಲಿಸಿದರೆ ಎಸ್‌ಯುವಿಗಳ ಗ್ರೌಂಡ್‌ ಕ್ಲಿಯರೆನ್ಸ್‌ ಹೆಚ್ಚಿರುತ್ತದೆ. ಇದು ಎಸ್‌ಯುವಿಗಳು ಅಪಘಾತದ ಸಂಧರ್ಭದಲ್ಲಿ ಪಲ್ಟಿಯಾಗಲು ಮುಖ್ಯ ಕಾರಣ. ಹಾಗಾಗಿ ಎಸ್‌ಯುವಿ ಕಾರುಗಳನ್ನು ಹೈ ಸ್ಪೀಡ್‌ಗಳಲ್ಲಿ ಓಡಿಸುವಾಗ ಎಚ್ಚರ ವಹಿಸುವುದು ಅಗತ್ಯ. ವೇಗವಾಗಿ ಚಲಿಸುವಾಗ ರಸ್ತೆಯ ಮೂಲೆಗಳಲ್ಲಿ ಕಾರನ್ನು ಚಲಾಯಿಸುವಾಗಲೂ ಎಚ್ಚರದಿಂದಿದರಬೇಕು. ಯಾಕೆಂದರೆ ಇಂತಹ ಸ್ಥಳಗಳಲ್ಲಿ ಕಾರು ಪಲ್ಟಿಯಾಗುವ ಸಾಧ್ಯತೆಗಳು ಹೆಚ್ಚು. ಸೆಡಾನ್‌ ಮತ್ತು ಹ್ಯಾಚ್‌ಬ್ಯಾಕ್‌ ಕಾರುಗಳು ಇಷ್ಟೊಂದು ಅಪಾಯಕಾರಿಗದೇ ಇರಲು ಪ್ರಮುಖ ಕಾರಣ ಕಾರುಗಳ ಆಕಾರ ಮತ್ತು ಗಾತ್ರ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:

ಮೇಲೆ ತಿಳಿಸಿದಂತೆ ಕಾರುಗಳು ಪಲ್ಟಿ ಆಗುವುದಕ್ಕೂ, ಕ್ರ್ಯಾಶ್‌ ಟೆಸ್ಟ್‌ ರೇಟಿಂಗ್‌ಗೂ ಸಂಭಂಧವಿಲ್ಲ. ಟಾಟಾ ನ್ಯಾನೋ ಕಾರಿಗೆ ಗುದ್ದಿ ಪಲ್ಟಿಯಾದ ಮಹೀಂದ್ರಾ ಥಾರ್‌ ಎಸ್‌ಯುವಿ ಕಳಪೆ ಎಂದು ಅಂದುಕೊಳ್ಳಬೇಕಿಲ್ಲ. ಭಾರತದಲ್ಲಿ ಸದ್ಯ ಅತೀ ಹೆಚ್ಚು ಫ್ಯಾನ್‌ ಬೇಸ್‌ ಇರುವ ಎಸ್‌ಯುವಿಗಳ ಸಾಲಿನಲ್ಲಿ ಥಾರ್‌ ಸಹ ಒಂದು. ಇನ್ನೇನು ಕೆಲವೇ ಸಮಯದಲ್ಲಿ ಮಹೀಂದ್ರಾ ಥಾರ್‌ 5 ಡೋರ್‌ಗಳುಲ್ಲ ಥಾರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಜನರು ಕಾರನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Article Published On: Friday, February 17, 2023, 15:53 [IST]
English summary
Mahindra thar overturned in an accident with tata nano
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+