ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ದುಬಾರಿ ಬೆಲೆಯ ಐಷಾರಾಮಿ ಕಾರುಗಳೆಂದರೆ ಒಳ್ಳೆಯ ಪರ್ಫಾಮೆನ್ಸ್ ನೀಡುವುದು ಮಾತ್ರವಲ್ಲದೇ ಎಲ್ಲಾ ರೀತಿಯ ರಸ್ತೆಗಳಲ್ಲೂ ಸರಾಗವಾಗಿ ಚಲಿಸುತ್ತದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ. ಆದರೆ ಕೆಲವೊಮ್ಮೆ ಐಷಾರಾಮಿ ಕಾರುಗಳು ಜನರ ನಂಬಿಕೆಯನ್ನು ತಲೆಕೆಳಗು ಮಾಡುತ್ತವೆ.

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಈ ಲೇಖನದಲ್ಲಿ ಸಣ್ಣ ಕೆಸರು ಗುಂಡಿಯಲ್ಲಿ ಸಿಲುಕಿ ಹೊರಬರಲು ಪರದಾಡಿದ ಐಷಾರಾಮಿ ಕಾರಿನ ಬಗೆ ನೋಡೋಣ. ಡಿಸ್ಕವರಿ ಎಸ್‌ಯುವಿ, ಲ್ಯಾಂಡ್ ರೋವರ್‌ನ ಕಂಪನಿಯ ಹೈ-ಎಂಡ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿ ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲು ಪರದಾಡಿದೆ. ಆಗ ಸ್ಥಳಕ್ಕೆ ಬಂದ ಮಹೀಂದ್ರಾ ಥಾರ್ ಕೆಸರಿನಲ್ಲಿ ಸಿಲುಕಿದ್ದ ಡಿಸ್ಕವರಿ ಎಸ್‌ಯುವಿಯು ಹೊರ ಬರಲು ನೆರವಾಗಿದೆ.

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಥಾರ್ ಸರಳವಾದ ಎಸ್‌ಯುವಿಯೇ ಆದರೂ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಕಾರಣಕ್ಕೆ ತೊಂದರೆಗೆ ಸಿಲುಕಿರುವ ವಾಹನಗಳಿಗೆ ನೆರವಾಗಲು ಈ ಕಾರ್ ಅನ್ನು ಕ್ರೇನ್ ರೂಪದಲ್ಲಿ ಬಳಸಲಾಗುತ್ತದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಥಾರ್ ಎಸ್‌ಯುವಿ ಬಸ್ಸು, ಲಾರಿ ಸೇರಿದಂತೆ ತನಗಿಂತ ಅನೇಕ ಪಟ್ಟು ದೊಡ್ಡದಾದ ವಾಹನಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ಅವುಗಳನ್ನು ಪಾರು ಮಾಡಿದೆ. ಮಹೀಂದ್ರಾ ಥಾರ್ ಎಸ್‌ಯುವಿ ಲ್ಯಾಂಡ್ ರೋವರ್ ಡಿಸ್ಕವರಿಯನ್ನು ಕೆಸರಿನಿಂದ ಹೊರತರುತ್ತಿರುವ ವೀಡಿಯೊವನ್ನು ಲೋಕೇಶ್ ಸ್ವಾಮಿಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಲ್ಯಾಂಡ್ ರೋವರ್ ಡಿಸ್ಕವರಿ ಎಸ್‌ಯುವಿಯು ತನ್ನ ಆಫ್-ರೋಡ್ ಫೀಚರ್ ಗಳಿಂದಾಗಿ ಭಾರತದಲ್ಲಿ ಜನಪ್ರಿಯವಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಡಿಸ್ಕವರಿ ಎಸ್‌ಯುವಿಯು ಆಫ್-ರೋಡ್ ಸೌಲಭ್ಯಗಳನ್ನು ಫೀಚರ್ ಗಳನ್ನು ಮಾತ್ರವಲ್ಲದೇ ಅನೇಕ ಐಷಾರಾಮಿ ಫೀಚರ್ ಗಳನ್ನು ಸಹ ಹೊಂದಿದೆ. ಲ್ಯಾಂಡ್ ರೋವರ್ ಡಿಸ್ಕವರಿ ಎಸ್‌ಯುವಿಯು ರೂ.50 ಲಕ್ಷಗಳವರೆಗೆ ಬೆಲೆಯನ್ನು ಹೊಂದಿದೆ.

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಕೆಲ ಯುವಕರು ಕಾರುಗಳ ಸಾಮರ್ಥ್ಯವನ್ನು ಪರೀಕ್ಷಿಸಲು ತಮ್ಮ ಕಾರುಗಳನ್ನು ಮಣ್ಣಿನಿಂದ ತುಂಬಿದ್ದ ಸಣ್ಣ ಕೆಸರು ಗುಂಡಿಯಲ್ಲಿ ಚಾಲನೆ ಮಾಡಿದ್ದಾರೆ. ಮಹೀಂದ್ರಾ ಥಾರ್ ಹಾಗೂ ಮಾರುತಿ ಸುಜುಕಿ ಜಿಪ್ಸಿ ಸೇರಿದಂತೆ ಕೆಲವು ಕಾರುಗಳು ಕೆಸರು ಗುಂಡಿಯಿಂದ ಹೊರ ಬರಲು ಯಶಸ್ವಿಯಾಗಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಆದರೆ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‌ಯುವಿಗೆ ಮಾತ್ರ ಕೆಸರು ಗುಂಡಿಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಹಿಂಭಾಗಕ್ಕೆ ಹಗ್ಗ ಕಟ್ಟಿ ಮಹೀಂದ್ರಾ ಥಾರ್‌ನ ನೆರವಿನಿಂದ ಹೊರ ತರಲಾಯಿತು.

ಲ್ಯಾಂಡ್ ರೋವರ್ ಡಿಸ್ಕವರಿ ಬಲಿಷ್ಠವಾದ ಎಂಜಿನ್ ಹೊಂದಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ನೀಡುತ್ತದೆ. ಆದರೂ ಸಹ ಆ ಕೆಸರು ಗುಂಡಿಯಿಂದ ಹೊರ ಬರಲು ಸಾಧ್ಯವಾಗಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮತ್ತೆ ಆಪದ್ಬಾಂದವನಾದ ಮಹೀಂದ್ರಾ ಥಾರ್ ಎಸ್‌ಯುವಿ

ಲ್ಯಾಂಡ್ ರೋವರ್ ಡಿಸ್ಕವರಿ ಬೇರೆ ಕಾರುಗಳ ರೀತಿಯಲ್ಲಿ ವೇಗವಾಗಿ ಗುಂಡಿಗೆ ಇಳಿಯದೆ ನಿಧಾನವಾಗಿ ಚಲಿಸಿದ್ದೇ ಈ ಎಡವಟ್ಟಿಗೆ ಕಾರಣ. ದುಬಾರಿ ಬೆಲೆಯ ಕಾರು ಎಂಬ ಕಾರಣಕ್ಕೆ ಡಿಸ್ಕವರಿ ಎಸ್‌ಯುವಿಯ ಚಾಲಕ ಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಇದಕ್ಕೆಲ್ಲಾ ಕಾರಣ.

Most Read Articles

Kannada
English summary
Mahindra Thar rescues and rover discovery. Read in Kannada.
Story first published: Wednesday, August 19, 2020, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X