Mahindra: ಮಗನಿಗೆ ಮರೆಯಲಾಗದ ಗಿಫ್ಟ್ ಕೊಟ್ಟ ಅಪ್ಪ! ಆಫ್‌ರೋಡ್ ಅಂಬಾರಿಗೆ ಫಿದಾ!
ತಂದೆಯೊಬ್ಬರು ತಮ್ಮ ಮಗನಿಗೆ ಹೊಚ್ಚ ಹೊಸ ಮಹೀಂದ್ರಾ ಥಾರ್ ರೋಕ್ಸ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೊಸ ಕಾರು ಖರೀದಿಸುವುದು ಅನೇಕರ ಕನಸಾಗಿದೆ, ಈ ಹೊಚ್ಚ ಹೊಸ ಮಹೀಂದ್ರಾ ಥಾರ್ ರೋಕ್ಸ್‌ನೊಂದಿಗೆ ನನ್ನ ಕನಸು ನನಸಾಯಿತು ಎಂದು ಮಗನೊಬ್ಬ ತಮ್ಮ ತಂದೆ ನೀಡಿದ ಅಮೂಲ್ಯವಾದ ಉಡುಗೊರೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಆಶಾ ಖಿರೆ ಎಂಬುವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಶಾ ಖಿರೆ ಎಂಬುವರು ಈ ಕುರಿತ ಫೋಟೋಗಳನ್ನು ಹಂಚಿಕೊಂಡಿದ್ದು, ಈತ ವೃತ್ತಿಯಲ್ಲಿ ಕ್ರೀಡಾಪಟುವಾಗಿದ್ದಾರೆ. ತಮ್ಮ ಹೊಚ್ಚ ಹೊಸ ಎಸ್‌ಯುವಿಯ ಚಿತ್ರಗಳನ್ನು ಪೋಸ್ಟ್ ಮಾಡಿ, "ಕನಸನ್ನು ನನಸಾಗಿಸುವ ಮೂಲಕ ವರ್ಷವನ್ನು ಕೊನೆಗೊಳಿಸಲಾಗಿದೆ! ಅಪ್ಪ ಹೊಚ್ಚ ಹೊಸ #TharRoxx ಮೂಲಕ ನಮ್ಮನ್ನು ಆಚ್ಚರಿಗೊಳಿಸಿದ್ದಾರೆ, ನಮ್ಮ ಹೃದಯಗಳು ಕೃತಜ್ಞತೆ ಮತ್ತು ಸಂತೋಷದಿಂದ ತುಂಬಿವೆ. ಹೊಸ ಪ್ರಯಾಣಗಳು, ನೆನಪುಗಳು ಮತ್ತು 2025ರ ಅದ್ಭುತ ಆರಂಭ ಇಲ್ಲಿದೆ! ಎಂದು ಬರೆದುಕೊಂಡಿದ್ದಾರೆ.

ಇದು ಹೊಸ ವರ್ಷದ ಉಡುಗೊರೆಯಂತೆ ತೋರುತ್ತದೆ, ಆಶಾ ಖಿರೆ ಅವರಿಗೆ ನೀಲಿ ಬಣ್ಣದ ಸುಂದರವಾದ ಮಹೀಂದ್ರಾ ಥಾರ್ ರೊಕ್ಸ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ತಂದೆಯ ಈ ಉಡುಗೊರೆ ಬೆಲೆಕಟ್ಟಲಾಗದು, ನಮ್ಮ ಈ ಪ್ರೀತಿ, ಭಾಂದವ್ಯಗಳು ಹೀಗೆ ಮುಂದುವರಿಯಲಿ, ನಮ್ಮ ತಂದೆ ಸದಾ ನಮ್ಮ ಆನಂದವನ್ನು ಬಯಸುವ ವ್ಯಕ್ತಿಯಾಗಿದ್ದಾರೆ. ಅವರನ್ನು ನಾವು ಸಂತೋಷದಿಂದಿರಿಸುತ್ತೇವೆ ಎಂದು ಆಶಾ ಖಿರೆ ಹೇಳಿಕೊಂಡಿದ್ದಾರೆ.
ಆಚ್ಚರಿ ಉಡುಗೊರೆಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಆಶ್ಚರ್ಯಕರ ಉಡುಗೊರೆಯು ಕಾರಿನ ರೂಪದಲ್ಲಿದ್ದಾಗ, ಸಂತೋಷವು ದ್ವಿಗುಣಗೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಉಡುಗೊರೆಗಳನ್ನು ಜನ್ಮದಿನ, ವಾರ್ಷಿಕೋತ್ಸವ ಅಥವಾ ಮದುವೆಯಂತಹ ವಿಶೇಷ ದಿನದಂದು ನೀಡಲಾಗುತ್ತದೆ. ಆದರೆ ಈಗ ಹೊಸ ಪ್ರವೃತ್ತಿ ಪ್ರಾರಂಭವಾಗುತ್ತಿದ್ದು, ಜನರು ಹೊಸ ಕಾರುಗಳೊಂದಿಗೆ ವರ್ಷವನ್ನು ಕೊನೆಗೊಳಿಸುತ್ತಿದ್ದಾರೆ.

ಥಾರ್ ರೋಕ್ಸ್ ವಿಶೆಷತೆಗಳು: ಹೊಸ ಮಹೀಂದ್ರಾ ಥಾರ್ ರೋಕ್ಸ್ 5-ಡೋರ್ ಆವೃತ್ತಿಯಾಗಿದ್ದು, ಈ ಕಾರನ್ನು ಸದ್ಯ ಬುಕ್ ಮಾಡಿದ್ರೆ ಸುಮಾರು 1.5 ವರ್ಷಗಳು ಕಾಯಬೇಕಾಗಿದೆ. ಈ ಕಾರು ಪ್ರಸ್ತುತ 18 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಮಹೀಂದ್ರಾ ಥಾರ್ ರೋಕ್ಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 12.99 ಲಕ್ಷದಿಂದ ರೂ. 22.49 ಲಕ್ಷಗಳಾಗಿದೆ.
ಮಹೀಂದ್ರಾ ಉನ್ನತ ರೂಪಾಂತರಗಳಲ್ಲಿ ಲೆವೆಲ್ 2 ಎಡಿಎಎಸ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. 10.25-ಇಂಚಿನ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಪನೋರಮಿಕ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹರ್ಮನ್ ಕಾರ್ಡನ್ 9-ಸ್ಪೀಕರ್ ಆಡಿಯೊ ಸಿಸ್ಟಮ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.
ಹೊಸ ಥಾರ್ ರೋಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಡೀಸೆಲ್ ಆವೃತ್ತಿಯು 2.2-ಲೀಟರ್ ಎಂಹಾಕ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದರೇ, ಪೆಟ್ರೋಲ್ ಆವೃತ್ತಿಯು 2.0-ಲೀಟರ್ ಎಂಸ್ಟಾಲಿಯನ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ. ಈ ಎರಡೂ ಎಂಜಿನ್‌ಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಹೊಸ ಮಹೀಂದ್ರಾ ಥಾರ್ ರೋಕ್ಸ್ ಸ್ಟೆಲ್ತ್ ಬ್ಲ್ಯಾಕ್, ಡೀಪ್ ಫಾರೆಸ್ಟ್, ನೆಬ್ಯುಲಾ ಬ್ಲೂ, ಟ್ಯಾಂಗೊ ರೆಡ್, ಎವರೆಸ್ಟ್ ವೈಟ್, ಬ್ಯಾಟಲ್ ಶಿಪ್ ಗ್ರೇ ಮತ್ತು ಬರ್ನ್ ಸಿಯೆನ್ನಾ ಬಣ್ಣಗಳಲ್ಲಿ ಖರೀದಿಸಬಹುದು. ಹಾಗೆಯೇ ಇದರ 4×4 ರೂಪಾಂತರಗಳನ್ನು ಬ್ಲಾಕ್ ಮತ್ತು ಬ್ರೌನ್ ಡ್ಯುಯಲ್ - ಟೋನ್ ಬಣ್ಣಗಳಲ್ಲಿ ಖರೀದಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications