ಕಾರಿನಲ್ಲಿದ್ದ ಸೇಫ್ಟಿ ಫೀಚರ್‌ನಿಂದ ಸಿಕ್ಕಿಬಿದ್ದ ಕಳ್ಳರು: ಪೊಲೀಸರಿಲ್ಲದೆ ಕಾರು ಹುಡುಕಿ ತಂದ ಮಾಲೀಕ!
ತಂತ್ರಜ್ಞಾನ ಬಹಳ ಮುಂದುವರಿದಿದೆ, ಹಲವು ಕಾರು ಕಂಪನಿಗಳು ತಮ್ಮ ವಾಹನಗಳನ್ನು ಸಂಪರ್ಕಿತ ಕಾರು ವೈಶಿಷ್ಟ್ಯ (connected car features) ಗಳೊಂದಿಗೆ ನೀಡುತ್ತಿದ್ದಾರೆ. ಈ ಅತ್ಯಾಧುನಿಕ ಫೀಚರ್ ಕಾರುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಈ ವೈಶೀಷ್ಟ್ಯದೊಂದಿಗೆ ಮಾಲೀಕರು ತುಂಬಾ ಸಲೀಸಾಗಿ ತಮ್ಮ ಕಳುವಾದ ವಾಹನವನ್ನು ಪತ್ತೆಹಚ್ಚಬಹುದು. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಕಳುವಾದ ಮಹೀಂದ್ರಾ ಥಾರ್ ರೋಕ್ಸ್ ಅನ್ನು ಮಾಲೀಕರೊಬ್ಬರು 'ಅಡ್ರೆನಾಕ್ಸ್' (Adrenox) ಬಳಸಿ ಪತ್ತೆಹಚ್ಚಿದ್ದಾರೆ. ಅದನ್ನು ಹೇಗೆ ಕಂಡುಕೊಂಡರು ಎಂಬುದನ್ನು ತೋರಿಸುವ ವೀಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ.
ಅಡ್ರೆನಾಕ್ಸ್ ಎಂದರೇನು?: ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಎಸ್‌ಯುವಿಗಳನ್ನು ಅಡ್ರೆನಾಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ನೀಡುತ್ತದೆ. ಮಹೀಂದ್ರಾ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಈ ಅಡ್ರಿನಾಕ್ಸ್ ಸಂಪರ್ಕಿತ ತಂತ್ರಜ್ಞಾನವು ಥಾರ್ ರೋಕ್ಸ್, ಸ್ಕಾರ್ಪಿಯೋ-ಎನ್ ಮತ್ತು ಎಕ್ಸ್‌ಯುವಿ 700 ಸೇರಿದಂತೆ ತನ್ನ ಕೆಲ ಮಾದರಿಗಳ ಹೈ-ಸ್ಪೆಕ್ ರೂಪಾಂತರಗಳಲ್ಲಿ ಈ ಫಿಚರ್ ನೀಡುತ್ತದೆ.

ಇದರಲ್ಲಿ ಅನೇಕ ಇತರ ಕಳ್ಳತನ ವಿರೋಧಿ ವೈಶಿಷ್ಟ್ಯಗಳೊಂದಿಗೆ ವಾಹನದ ನೈಜ-ಸಮಯದ ಸ್ಥಳ (Real-time location)ದ ಮಾಹಿತಿಯನ್ನು ಒದಗಿಸುತ್ತದೆ. ಈ ವ್ಯವಸ್ಥೆಯು ಜಿಪಿಎಸ್ ಆಧಾರಿತ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಬಳಸುತ್ತದೆ. ಅಲ್ಲದೆ, ಮಾಲೀಕರು ತಮ್ಮ ವಾಹನಗಳಿಗೆ ವರ್ಚುವಲ್ ಗಡಿಯನ್ನು ಹೊಂದಿಸಲು ಜಿಯೋ-ಫೆನ್ಸಿಂಗ್ ವೈಶಿಷ್ಟ್ಯವನ್ನು ಬಳಸಬಹುದು.
ಈ ಅಡ್ರೆನಾಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನದ ಸಹಾಯದಿಂದ, ಕಾರುಗಳ ಮಾಲೀಕರು ತಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿ ನೈಜ ಸಮಯದಲ್ಲಿ ತಮ್ಮ ವಾಹನಗಳ ಸ್ಥಳವನ್ನು ಟ್ರ್ಯಾಕ್ ಮಾಡಬಹುದು. ಈ ಮೂಲಕ ಕಾರು ಎಲ್ಲೇ ಇದ್ದರೂ ನಮ್ಮ ಮೊಬೈಲ್‌ನಲ್ಲಿ ಅದರ ಸ್ಥಳವನ್ನು ಪತ್ತೆಹಚ್ಚಬಹುದು. ಹೆಚ್ಚುವರಿಯಾಗಿ ವಾಹನದ ಮಾಲೀಕರು ವಾಹನವನ್ನು ದೂರದಿಂದಲೇ ನಿಶ್ಚಲಗೊಳಿಸಬಹುದು.

ವಾಹನ ಮುಂದಕ್ಕೆ ಹೋಗದಂತೆ ಮಾಡಬಹುದು, ಕೊನೆಯದಾಗಿ ವಾಹನವನ್ನು ಬಲವಂತವಾಗಿ ಅನುಮತಿಯಿಲ್ಲದೆ ಸ್ಟಾರ್ಟ್ ಮಾಡಲಾಗುತ್ತಿದೆ ಎಂದು ಪತ್ತೆಹಚ್ಚಿದರೆ, ವಾಹನ ಮಾಲೀಕರ ಫೋನ್ ಅಪ್ಲಿಕೇಶನ್‌ಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಈಗ ವಿಷಯಕ್ಕೆ ಬಂದರೆ ಕದ್ದ ಮಹೀಂದ್ರಾ ಥಾರ್ ರೋಕ್ಸ್ ಕಾರನ್ನು ಅಡ್ರೆನಾಕ್ಸ್ ಕನೆಕ್ಟೆಡ್ ಕಾರ್ ಫೀಚರ್ ಬಳಸಿ ವಶಪಡಿಸಿಕೊಂಡ ಬಗ್ಗೆ ನೋಡೋಣ.
ಥಾರ್ ರೋಕ್ಸ್ ಕಳ್ಳತನ: ವೈರಲ್ ಆಗಿರುವ ವಿಡಿಯೋ ಪ್ರಕಾರ, ಕಳ್ಳನೊಬ್ಬ ರಸ್ತೆ ಬದಿ ನಿಲ್ಲಿಸಿದ್ದ ಹೊಸ ಮಹೀಂದ್ರಾ ಥಾರ್ ರೋಕ್ಸ್ ಅನ್ನು ಅನ್‌ಲಾಕ್ ಮಾಡಿ ಕದ್ದು ಪರಾರಿಯಾಗಿದ್ದ. ಕಳೆದ ವರ್ಷ ನವೆಂಬರ್ 29 ರ ರಾತ್ರಿ ಈ ಘಟನೆ ನಡೆದಿದ್ದು, ಮರುದಿನವೇ ವಾಹನವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ವಾಹನದ ಮಾಲೀಕ ಅಡ್ರಿನಾಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಹರಿಯಾಣದ ಫರಿದಾಬಾಸ್‌ನಲ್ಲಿ ವಾಹನವನ್ನು ಕದ್ದ ಸ್ಥಳದಿಂದ 20 ನಿಮಿಷಗಳ ದೂರದಲ್ಲಿ ಕಳ್ಳರು ಕಾರನ್ನು ಬಚ್ಚಿಟ್ಟದ್ದರು ಎಂದು ಪತ್ತೆ ಹಚ್ಚಿದ್ದರು. ಪ್ರಸ್ತುತ ಕಳ್ಳರು ನಿಖರವಾಗಿ ಯಾರು ಅಥವಾ ಅವರನ್ನು ಬಂಧಿಸಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications