ರಸ್ತೆ ಬ್ಯಾರೀಗೇಟ್‌ಗಳ ಮೇಲೆ ನುಗ್ಗಿದ ಮಹೀಂದ್ರಾ ಥಾರ್‌: ಸಾರ್ವಜನಿಕ ರಸ್ತೆಯಲ್ಲಿ ಚಾಲಕನ ಹುಚ್ಚಾಟ!

ಮಹೀಂದ್ರಾ ಥಾರ್‌ಗೆ ಭಾರತದಲ್ಲಿ ಇರುವ ಇತರ ಎಸ್‌ಯುವಿಗಳಿಗಿಂತ ಹೆಚ್ಚಿನ ಫ್ಯಾನ್‌ ಬೇಸ್‌ ಇದೆ. ಹೀಗೆ ಹೇಳುವುದಕ್ಕೆ ಇದಕ್ಕೆ ಪ್ರಮುಖ ಕಾರಣ ಎಂದರೆ ಅದರ ರಗಡ್‌ ಆಗಿರುವ ಲುಕ್‌ ಮತ್ತು ಅತ್ಯದ್ಭುತ ಪರ್ಫಾಮೆನ್ಸ್‌ ಎಂದೇ ಹೇಳಬಹುದು. ಎರಡನೇ ತಲೆಮಾರಿನ ಥಾರ್‌ 2020 ರಲ್ಲಿ ಮಹೀಂದ್ರಾ ಲಾಂಚ್‌ ಮಾಡಿದ ಕೂಡಲೇ ಬಹುಬೇಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದರ ಬೆಲೆಗೆ ಇಷ್ಟೊಂದು ಪರ್ಫಾಮೆನ್ಸ್‌ ನೀಡುವ ಮತ್ತೊಂದು ಎಸ್‌ಯುವಿ ಸದ್ಯಕ್ಕೆ ಭಾರತದಲ್ಲಿ ಇಲ್ಲ ಎಂದರೆ ತಪ್ಪಾಗಲಾರದು. ಇನ್ನು ಮಹೀಂದ್ರಾ ಕಂಪನಿಯು 5 ಡೋರ್‌ ಆವೃತ್ತಿಯ ಥಾರ್‌ ಎಸ್‌ಯುವಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದು ಇನ್ನೇನು ಕೆಲವೇ ತಿಂಗಳಲ್ಲಿ ಹೊರ ಬರಲಿದೆ. ಇನ್ನು ಮಹೀಂದ್ರಾ ಥಾರ್‌ ಬಳಸಿ ಸ್ಟಂಟ್‌ ಮಾಡುವವರಿಗೇನೂ ಕಮ್ಮಿಯಿಲ್ಲ.

Mahindra Thar

ಇದರಿಂದ ಆಗುವ ಅನಾಹುತಗಳಿಗೇನೂ ಕಮ್ಮಿಯಿಲ್ಲ. ಇಲ್ಲೊಬ್ಬ ಉದ್ದೇಶ ಪೂರ್ವಕವಾಗಿ ರಸ್ತೆ ಮಧ್ಯೆ ಬದಿಗಳನ್ನು ವಿಭಾಗಿಸಲು ಇರಿಸಿದ್ದ ಪ್ಲಾಸ್ಟಿಕ್‌ ಬ್ಯಾರಿಗೇಟ್‌ಗಳ ಮೇಲೆ ಹರಿಸಿದ್ದು, ಇದಕ್ಕೆ ಸಂಭಂಧಿಸಿದ ವಿಡಿಯೋ ವೈರಲ್‌ ಆಗಿದೆ. ಇನ್ನು ಇವು ಫ್ಲೆಕ್ಸಿಬಲ್‌ ಬ್ಯಾರಿಗೇಟ್‌ಗಳಾಗಿದ್ದ ಕಾರಣದಿಂದ ಕಾರಿಗೆ ಯಾವುದೇ ಹಾನಿಯಾಗಿಲ್ಲವಾದರೂ ಬ್ಯಾರಿಗೇಟ್‌ಗಳು ಮಾಥ್ರ ಸಂಪೂರ್ಣ ಹಾಳಾಗಿದೆ.

ಘಟನೆಗೆ ಸಂಭಂಧಿಸಿದ ವಿಡಿಯೋವನ್ನು ಹಿಂದಿ ಯ್ಯೂಟ್ಯೂಬರ್‌ ಒಬ್ಬ ತನ್ನ ಚಾನಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ನೆಟ್ಟಿಗರು ಇದಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಕಾಮೆಂಟ್‌ಗಳ ಮೂಲಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಘಟನೆ ನಿಖರವಾಗಿ ಎಲ್ಲಿ ಸಂಭವಿಸಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಆದರೆ ವಿಡಿಯೋವನ್ನು ಗಮನಿಸಿದರೆ ಉತ್ತರ ಭಾರತದಲ್ಲಿ ಎಲ್ಲೋ ಸಂಭವಿಸಿದೆ ಎಂದು ತಿಳಿದು ಬರುತ್ತದೆ.

Mahindra Thar

ಈ ವಿಡಿಯೋವನ್ನು ಘಟನೆಗೆ ಸಂಭಂಧಿಸಿದ ಥಾರ್‌ ಪಕ್ಕದಲ್ಲಿಯೇ ಚಲಿಸುತ್ತಿದ್ದ ಇನ್ನೊಂದು ಕಾರ್‌ನಲ್ಲಿದ್ದ ವ್ಯಕ್ತಿ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದು, ಥಾರ್‌ನ ಮಾಲೀಕ ಈ ಕೃತ್ಯವನ್ನು ಎಸಗಲು ಮೊದಲೇ ರೆಡಿಯಾಗಿ ಬಂದಿದ್ದನೇ ಎಂಬ ಸಂಶಯ ಮೂಡುವುದಂತೂ ಸಹಜ. ಇದಕ್ಕೆ ಪ್ರಮುಖ ಕಾರಣ ಥಾರ್‌ನ ನಂಬರ್‌ ಪ್ಲೇಟ್‌ ಕೃತ್ಯ ನಡೆಯುತ್ತಿದ್ದ ವಿಡಿಯೋದಲ್ಲಿ ಕಾಣಿಸದೇ ಇರುವುದು.

ಇನ್ನು ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ಸಾರ್ವಜನಿಕ ರಸ್ತೆಯಲ್ಲಿಯೇ ಈ ಥಾರ್‌ ಚಾಲಕ ಈ ಕೃತ್ಯವನ್ನು ಎಸಗಿದ್ದು, ಈ ರಸ್ತೆಯಲ್ಲಿ ಇತರ ವಾಹನಗಳೂ ಸಹ ಚಲಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಇಷ್ಟೊಂದು ವಾಹನಗಳು ಚಲಿಸುತ್ತಿರುವಾಗಲೂ ಥಾರ್‌ ಚಾಲಕ ಈ ರೀತಿ ಅಪಾಯಕಾರಿಯಾಗಿ ವಾಹನ ಚಲಾಯಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ ಎಂದರೆ ತಪ್ಪಾಗಲಾರದು.

Mahindra Thar

ರಸ್ತೆಯ ಮಧ್ಯೆ ಪ್ಲಾಸ್ಟಿಕ್‌ನ ಫ್ಲೆಕ್ಸಿಬಲ್‌ ಬ್ಯಾರಿಗೇಟ್‌ಗಳನ್ನು ರಸ್ತೆಯನ್ನು ಎರಡು ಭಾಗಗಳಾಗಿ ಮಾಡಲು ಅಳವಡಿಸುತ್ತಾರೆ. ಇವು ಫ್ಲೆಕ್ಸಿಬಲ್‌ ಆದುದರಿಂದ ಇದರ ಮೇಲೆ ಯಾವುದಾರೂ ವಾಹನ ಹರಿದರೆ ಅಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸುವುದಿಲ್ಲ. ಇದರ ಅರ್ಥ ನೀವು ಅವುಗಳ ಮೇಲೆ ನಿಮ್ಮ ವಾಹನಗಳನ್ನು ಹತ್ತಿಸಬಹುದು ಎಂದಲ್ಲ. ಆದರೆ ರಸ್ತೆ ಅಪಘಾತಗಳನ್ನು ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಈ ರೀತಿ ಅವುಗಳನ್ನು ಅಳವಡಿಸಿರುತ್ತಾರೆ.

ಮಹೀಂದ್ರಾ ಥಾರ್‌ ಭಾರತದ ಜನಪ್ರಿಯ ಎಸ್‌ಯುವಿ ಎಂಬುದರಲ್ಲಿ ಎರಡು ಮಾತಿಲ್ಲ. ಮಹೀಂದ್ರಾ ಥಾರ್‌ 4X2 ನ ಎರಡು ವೇರಿಯಂಟ್‌ ಲಭ್ಯವಿದ್ದು, ಇದರ ಪೆಟ್ರೋಲ್‌ ವೇರಿಯಂಟ್‌ ವೇಟಿಂಗ್‌ ಪಿರಿಯಡ್‌ ಸ್ವಲ್ಪ ಕಡಿಮೆ ಇದೆ, ಅಂದರೆ ಸುಮಾರು ಸರಾಸರಿ 5 ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಆದರೆ ಇದರ ಇನ್ನೊಂದು ವೇರಿಯಂಟ್‌ ಆದ ಥಾರ್‌ 4X2 1.5 ಲೀ.

ಇನ್ನು ಮಹೀಂದ್ರಾ ಥಾರ್‌ 4X4 ವೇರಿಯಂಟ್ ವೇಟಿಂಗ್‌ ಪಿರಿಯಡ್‌ ಬಗ್ಗೆ ನೋಡುವುದಾದರೆ ಇದರ ಎಲ್ಲಾ ವೇರಿಯಂಟ್ ನ ಡೆಲಿವರಿ ಪಡೆಯಲು ಕಡಿಮೆ ಎಂದರೂ ಸುಮಾರು 5 ರಿಂದ 6 ತಿಂಗಳುಗಳ ಕಾಲ ಕಾಯಬೇಕಾಗಿದೆ. ಇದರ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಎಲ್ಲಾ ವೇರಿಯಂಟ್‌ಗಳದ್ದೂ ಇದೇ ಕಥೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 9, 2023, 16:03 [IST]
English summary
Mahindra thar suv driver deliberately drove over plastic divider details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+