ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ- ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ..!!

ದ್ವಿಚಕ್ರ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಗ್ಗರಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಬೈಕ್ ಉತ್ಪಾದನೆಯನ್ನು ನಿಲ್ಲಿಸುವ ಬಗ್ಗೆ ಸುಳಿವು ನೀಡಿದೆ.

By Praveen

ಭಾರತೀಯ ಆಟೋ ಮೊಬೈಲ್ ಉದ್ಯಮವು ಜಗತ್ತಿನ ಅತಿದೊಡ್ಡ ದ್ವಿಚಕ್ರ ಮಾರುಕಟ್ಟೆಯಾಗಿ ಪರಿಣಮಿಸುತ್ತಿದ್ದು, ಹತ್ತು ಹಲವು ಪ್ರತಿಷ್ಠಿತ ವಾಹನ ಉತ್ಪಾದಕರು ದೇಶಿಯ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.

ಆದ್ರೆ ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಗ್ಗರಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಬೈಕ್ ಉತ್ಪಾದನೆಯನ್ನು ನಿಲ್ಲಿಸುವ ಬಗ್ಗೆ ಸುಳಿವು ನೀಡಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

2008ರಲ್ಲಿ ಕಿನೆಟಿಕ್ ಮೋಟಾರ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಗುರುತರ ಹೆಜ್ಜೆಯಿರಿಸಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಸಮೂಹ ಮಾರುಕಟ್ಟೆಯಿಂದ ಹೊರ ಹೋಗುವ ಸುಳಿವು ನೀಡಿದೆ. ಜೊತೆಗೆ ಸ್ಥಾಪಿತ ಬೈಕ್ ಮಾದರಿಗಳನ್ನು ಹೊರತುಪಡಿಸಿ ಹೊಸ ಉತ್ಪನ್ನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಈ ಹಿಂದೆ ಸೂಪರ್ ಬೈಕ್ ಮಾದರಿಯಾದ ಮೋಜೊ ಮೂಲಕ ಹೊಸ ಆರಂಭವನ್ನೇ ಪಡೆದಿದ್ದ ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಮಾರುಕಟ್ಟೆಯಲ್ಲಿನ ಪ್ರಮುಖ ಸ್ಪರ್ಧಿಗಳ ಮಾರಾಟ ತಂತ್ರಗಳಿಂದ ಸಂಪೂರ್ಣ ನೆಲಕಚ್ಚಿದ್ದು, ದ್ವಿಚಕ್ರ ಉತ್ಪಾದನೆಯಲ್ಲಿ ಭಾರೀ ಹಾನಿ ಅನುಭವಿಸಿದೆ.

Recommended Video

MV Agusta Brutale Launched In India | In Kannada - DriveSpark ಕನ್ನಡ
ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಇದಲ್ಲದೇ ಟಿವಿಎಸ್, ಹಿರೋ ಮೋಟೋಕಾರ್ಪ್, ಹೋಂಡಾ, ಬಜಾಜ್ ಉತ್ಪನ್ನಗಳಿಂತಲೂ ಹೆಚ್ಚಿನ ವಿಶ್ವಾಸ ಹೊಂದಿದ್ದರು ಮಾರಾಟ ತಂತ್ರ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಹಿಂದೆಬಿದ್ದ ಮಹೀಂದ್ರಾ ಸಂಸ್ಥೆಯು, ಇದೀಗ ಶಾಶ್ವತವಾಗಿ ಸಮೂಹ ಮಾರುಕಟ್ಟೆಯಿಂದ ದೂರ ಉಳಿಯಲಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಮಹೀಂದ್ರಾ ಸಂಸ್ಥೆಯು ಸಮೂಹ ಮಾರುಕಟ್ಟೆಯಿಂದ ದೂರ ಉಳಿಯಲು ಮತ್ತೊಂದು ಕಾರಣವಿದೆ. ಯಾಕೇಂದ್ರೆ 2016ರ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣಕ್ಕೂ ಮತ್ತು 2017ರ ಮಾರಾಟ ಪ್ರಮಾಣಕ್ಕೂ ಹೋಲಿಕೆ ಮಾಡಿದ್ದಲ್ಲಿ ಶೇ.77ರಷ್ಟು ಇಳಿಕೆ ಕಂಡಿರುವುದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಜೊತೆಗೆ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕೇವಲ 0.9ರಷ್ಟು ಮಾತ್ರ ಮಾರಾಟ ಪ್ರಮಾಣ ದಾಖಲಿಸಿದ್ದ ಮಹೀಂದ್ರಾ, ಮಾರುಕಟ್ಟೆಯಲ್ಲಿ ನಷ್ಟದ ಜೊತೆ ಮುಂದುವರೆಯುವ ಬದಲು ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಸಮೂಹ ಮಾರುಕಟ್ಟೆಯಿಂದ ಹೊರ ನಡೆಯುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸ್ಥಾಪಿತ ಬೈಕ್ ಮಾದರಿಗಳಾದ ಮೊಜೊ ಮತ್ತು ಉದ್ದೇಶಿತ ಜಾವಾ ಯಜ್ಡಿ ಬೈಕ್‌ಗಳ ನಿರ್ಮಾಣವನ್ನು ಮುಂದುವರಿಸಲಿರುವ ಮಹೀಂದ್ರಾ ಸಂಸ್ಥೆಯು, ಯಾವುದೇ ಹೊಸ ಬೈಕ್ ಮಾದರಿಗಳನ್ನು ನಿರ್ಮಾಣ ಮಾಡದಿರಲು ಮಹತ್ವದ ನಿರ್ಧಾರ ಕೈಗೊಂಡಿದೆ.

ಹೊಸ ಬೈಕ್‌ಗಳ ಉತ್ಪಾದನೆಗೆ ಗುಡ್ ಬೈ-ಕುತೂಹಲ ಹುಟ್ಟಿಸಿದ ಮಹೀಂದ್ರಾ ನಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಸಂಸ್ಥೆಯು ಸಮೂಹ ಮಾರುಕಟ್ಟೆಗಾಗಿ ದ್ವಿಚಕ್ರ ವಾಹನ ಉತ್ಪಾದನೆಯನ್ನು ಕೈಬಿಡಲಿದ್ದು, ಕೇವಲ ಸ್ಥಾಪಿತ ಬೈಕ್ ಮಾದರಿಗಳ ಉತ್ಪಾದನೆ ಮಾತ್ರ ಗಮನಹರಿಸಿಲಿದೆ. ಹೀಗಾಗಿ ಮಹೀಂದ್ರಾ ಕೈಗೊಂಡಿರುವ ನಿರ್ಧಾರ ಮಹತ್ವ ಪಡೆದುಕೊಂಡಿದ್ದು, ಆರ್ಥಿಕ ಸಂಕಷ್ಟದಿಂದ ಇಗಲಾದ್ರೂ ಹೊರಬರುತ್ತಾ ಕಾಯ್ದುನೋಡಬೇಕಿದೆ.

Most Read Articles

Kannada
English summary
Read in Kannada about Mahindra Calls It Quits In The Mass Market Two Wheeler Segment In India.
Story first published: Wednesday, September 6, 2017, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X